ಈರ್ಪ ಅಜ್ಜನವರ ನೂತನ ಪಲ್ಲಕ್ಕಿ ಮೆರವಣಿಗೆ
Procession of Iirpa Ajja's new palanquin
ಯಮಕ ಮರಡಿ, ಆ.25: ಸಮೀಪದ ದಾದಬನಹಟ್ಟಿ ಗ್ರಾಮದ ಕೆರಿ ಈರ್ಪ ಅಜ್ಜನವರ ನೂತನ ಪಲ್ಲಕ್ಕಿ ಹಾಗೂ ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಸ್ಥಳೀಯ ಹರಿಮಂದಿರದ ಪೂಜಾರಿ ಆನಂದ ಮಹಾರಾಜ್ ಗೋಸಾವಿ ಅವರು ಆ.24ರಂದು ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಈರ್ಪ ಅಜ್ಜನವರ ಅಪಾರ ಭಕ್ತರು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಜಾನಪದ ಕಲಾವಿದ ಗೋಪಾಲ ಚಪ್ಪಣಿ ಹಾಗೂ ತಂಡದವರು ಈರ್ಪ ಅಜ್ಜನವರ ಕುರಿತು ಸ್ವರಚಿತ ಭಕ್ತಿ ಗೀತೆಗಳನ್ನು ಸಾದರಪಡಿಸಿದರು. ತಂಡದ ಸಹಾಯಕ ಕಲಾವಿದರಾದ ಮಹೇಶ್ ಹಾಗೂ ಸಂತ ರಾಮ ವಿಷ್ಣು ತುಳಗನವಾಡಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದಲ್ಲಿ ವಾದ್ಯವೃಂದದ ಮೂಲಕ ಮೆರುಗು ನೀಡಿದರು.
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗೋಪಾಲ ಚಪ್ಪಣಿ ಹಾಗೂ ತಂಡದವರ ಕಲಾ ಪ್ರದರ್ಶನ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 