ಲೋಕದರ್ಶನ ವರದಿ
ಬೈಲಹೊಂಗಲ 6: ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕೊಡಿಸುವುದರೊಂದಿಗೆ ಅವರು ಸಾಮಾಜಿಕ ಭದ್ರತೆಯಿಂದ ಮತ್ತು ಸ್ವಾವಲಂಬಿತನದಿಂದ ಬಾಳುವಂತೆ ಸಶಕ್ತರಾಗಿಸುವ ಹೊಣೆ ಪಾಲಕರ ಹಾಗೂ ಶಿಕ್ಷಕರ ಗುರುತರ ಜವಾಬ್ದಾರಿಯಾಗಿದೆ ಎಂದು ಕಿಲ್ಲಾ ತೋರಗಲ್ಲದ ಚನ್ನಮಲ್ಲಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಅವರು ಸಮೀಪದ ಯಕ್ಕುಂಡಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ ಶ್ರೀ ಗುರು ಮುರುಘೇಂದ್ರ ಅನಾಥಮಕ್ಕಳ ನಿಲಯದ ವಾಷರ್ಿಕೋತ್ಸವ ಮತ್ತು 7 ನೇ ತರಗತಿಯ ವಿದ್ಯಾಥರ್ಿಗಳ ಬಿಳ್ಕೋಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಹಾಗೂ ಯಕ್ಕುಂಡಿಯ ಕುಮಾರೇಶ್ವರ ವಿರಕ್ತಮಠದ ಪೀಠಾಧ್ಯಕ್ಷರಾದ ಪಂಚಾಕ್ಷರ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಬಸವರಾಜ ಹೊಂಗಲ, ಶಂಕರಗೌಡ ಪಾಟೀಲ, ಅಬ್ದುಲ್ ಖಾದರ ಜೈಲಾನಿ ಬಾರಿಗಿಡದ, ಬಡ್ಲಿ ಗ್ರಾ ಪಂ ಅಧ್ಯಕ್ಷ ಅಶೋಕ ಖನಗಾಂವಿ, ತಾ ಪಂ ಉಪಾಧ್ಯಕ್ಷೆ ಸೋನವ್ವ ದೊಡಮನಿ, ಪ್ರಾಚಾರ್ಯರಾದ ಎ. ಬಿ. ಮಿರಜಕರ, ರಾಕೇಶ ದೇಸಾಯಿ,ದುಂಡಯ್ಯಾ ಹಿರೇಮಠ, ಸಿ. ಆರ್. ಪಿ. ಎಸ್. ಎಸ್. ಮಲ್ಲನ್ನವರ, ಮುಖ್ಯೋಪಾಧ್ಯಾಯ ಆಯ್. ಎಸ್. ಚಿಕ್ಕನಗೌಡರ ಇದ್ದರು.
ರಮೇಶ ಹೊಸಮನಿ ವರದಿ ಮಂಡಿಸಿದರು. ಎಮ್. ಎಸ್. ವಿಭೂತಿ ನಿರೂಪಿಸಿದರು. ಆರ್. ಆರ್. ಅಂಗಡಿ ಸ್ವಾಗತಿಸಿದರು. ಸಿ. ಖ. ಮಾಳಗಿ ವಂದಿಸಿದರು.