ರೈತರ ಬೆಳೆಗೆ ಸ್ಪಧರ್ಾತ್ಮಕ ಮಾರುಕಟ್ಟೆ ದರ ಒದಗಿಸಲು ಬೆಲೆ ವ್ಯತ್ಯಾಸ ಕೊರತೆ ದರ ಪಾವತಿ ವ್ಯವಸ್ಥೆ
ಗದಗ 23: ರೈತರ ಬೆಳೆಗಳಿಗೆ ಸ್ಪಧರ್ಾತ್ಮಕ ಮಾರುಕಟ್ಟೆ ದೊರಕಿಸುವ ನಿಟ್ಟಿನಲ್ಲಿ ಈರುಳ್ಳಿ ಖರೀದಿ ಬೆಲೆ ವ್ಯತ್ಯಾಸ ಕೊರತೆ ಪಾವತಿ ಭಾವಾಂತರ ವಿಧಾನವು ಗದಗ ಜಿಲ್ಲೆಯಲ್ಲಿ ಯಶಸ್ವಿಯಾಗಿ ಕಾರ್ಯಗತವಾಗುತ್ತಿರುವುದು ಉತ್ತಮ ಬೆಳವಣಿಗಯಾಗಿದ್ದು ಇದು ರಾಷ್ಟದೆದ ಗಮನ ಸೆಳೆಯಲಿದೆ ಎಂದು ಕನರ್ಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ ಕಮ್ಮರಡಿ ನುಡಿದರು.
ಗದಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈರುಳ್ಳಿ ಖರೀದಿಗೆ ನೂತನವಾಗಿ ಜರಿಗೆ ತಂದಿರುವ ಬೆಲೆ ವ್ಯತ್ಯಾಸ ಕೊರತೆ ಪಾವತಿ ಯೋಜನೆ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಲೆ ವ್ಯತ್ಯಾಸ ಕೊರತೆ ಪಾವತಿ ವ್ಯವಸ್ಥೆಗೆ 2015 ರಲ್ಲೇ ಆಯೋಗ ಪ್ರಸ್ತಾಪಿಸಿತ್ತು. ಈ ಯೋಜನೆ ಹರ್ಯಾಣಾದಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿ ರಾಜ್ಯ ಸಕರ್ಾರ 200 ಕೋಟಿ ವೆಚ್ಚದಲ್ಲಿ ಈರುಳ್ಳಿ ಖರೀದಿಸಿ ಕೈ ಸುಟ್ಟುಕೊಳ್ಳೂವಂತಾಗಿತ್ತು ಈ ಬಾರಿ ನೂತನ ವ್ಯವಸ್ಥೆಗೆ 50 ಕೋಟಿ ರೂ. ಒದಗಿಸಲಾಗಿದೆ. ಖರೀದಿ , ಉತ್ಪನ್ನ ಶೇಖರಣೆ, ಕಾಯ್ದಿಡುವ, ಮರಳಿ ಮಾರಾಟ ಮಾಡುವ ಯಾವುದೇ ಸಮಸ್ಯೆಗಳು ಈ ವ್ಯವಸ್ಥೆಯಲ್ಲಿ ಇರುವುದಿಲ್ಲ. ರೈತರಿಗೆ ಕ್ವಿಂಟಾಲ ಈರುಳ್ಳಿಗೆ ಕನಿಷ್ಟ 500 ರೂ. ದಿಂದ 700 ವರೆಗೆ ಬೆಲೆ ದೊರೆಯುವ ಭರವಸೆ ಇಲ್ಲಿದ್ದು ಇದರಿಂದ ಮಾರುಕಟ್ಟೆ ದರ ಸ್ಪಧರ್ಾತ್ಮಕವಾಗಿ ಅದರಿಂದ ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಡಾ. ಪ್ರಕಾಶ ಕಮ್ಮರಡಿ ನುಡಿದರು.
ಕನರ್ಾಟಕ ಕೃಷಿ ಬೆಲೆ ಆಯೋಗ ರೈತರ ಬೆಳೆಗೆಳಿಗೆ ಉತ್ತಮ ಧಾರಣೆ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಬೆಲೆ ವ್ಯತ್ಯಾಸ ಪದ್ದತಿಯಿಂದ ರೈತರಿಗೆ ಅಷ್ಟೇ ಅಲ್ಲದೇ ಸ್ಥಳಿಯ ಎಪಿಎಂಸಿಗಳ ವ್ಯವಹಾರ ಹೆಚ್ಚುತ್ತದೆ. ಬೆಂಬಲ ಬೆಲೆಯ ನೀಡಲು ಸಕರ್ಾರವೇ ಖರೀದಿಗೆ ಇಳಿಯಬೇಕು ಎನ್ನುವ ಧೋರಣೆ ಬದಲಾಗಬೇಕು. ಸ್ಥಳೀಯ ಎಪಿಎಂಸಿಗಳು, ಅವುಗಳ ವ್ಯಾಪ್ತಿಯ ವರ್ತಕರು, ರೈತರ ಸಹಕಾರ ಸಂಘಗಳು ಇದರಲ್ಲಿ ಭಾಗವಹಿಸಬೇಕು. ರೈತರಿಗಾಗಿ ಇರುವ ಕೃಷಿ ಮಾರುಕಟ್ಟೆಯಲ್ಲಿ ರೈತರ ಬೆಳೆಗಳಿಗೆ ನ್ಯಾಯಯುತ, ಲಾಭದಾಯಕ ದರ ಸಿಗದೇ ಇರುವ ವಿಪಯರ್ಾಸದ ಸಧ್ಯದ ಸ್ಥಿತಿಯನ್ನು ಸರಿಪಡಿಸಲು ಕನಿಷ್ಠ ಬೆಲೆ ನೀಡದ ವರ್ತಕರ ವಿರುದ್ದ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಹಾಗೂ ಬೆಂಬಲ ಬೆಲೆ ಖರಿದಿಯಲ್ಲಿ ವರ್ತರಕರಿಗೆ ಪ್ರೋತ್ಸಾಹಧನ ನೀಡುವ ಕುರಿತಂತೆ ಆಯೋಗ ಪರಿಶೀಲನೆ ನಡೆಸುತ್ತಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷರು ನುಡಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮಾತನಾಡಿ ಗದಗ ಜಿಲ್ಲೆಯ ರೈತರು ಬೇರೆ ಜಿಲ್ಲೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಮಾರಾಟ ಮಾಡಿದ ಪ್ರಕರಣಗಳಲ್ಲಿ ವ್ಯತ್ಯಾಸ ದರ ಪಾವತಿಗೆ ಆಗ್ರಹಿಸುತ್ತಿರುವುದನ್ನು ಅಧ್ಯಕ್ಷರ ಗಮನಕ್ಕೆ ತಂದರು. ಬೆಂಬಲ ಬೆಲೆಯಲ್ಲಿ ಒಟ್ಟು 37 ಕೋಟಿ ರೂ. ವೆಚ್ಚದಲ್ಲಿ 53 ಸಾವಿರ ಕ್ವಿಂಟಾಲ ಹೆಸರು ಖರೀದಿ ಮಾಡಲಾಗಿದೆ. ಈ ಪೈಕಿ 20 ಕೋಟಿರೂ ಈಗಾಗಲೇ ಫಲಾನುಭವಿ ರೈತರ ಖಾತೆಗಳಿಗೆ ಜಮೆಯಾಗಿದ್ದು ಬಾಕಿ ಉಳಿದ 17 ಕೋಟಿ ರೂ. ವಿತರಣೆ ಇಷ್ಟರಲ್ಲೇ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೃಷಿ ಜಂಟಿ ನಿದರ್ೇಶಕ ಬಾಲರೆಡ್ಡಿಯವರು ಮಾತನಾಡಿ 2018ರ ಮುಂಗಾರು ಹಂಗಾಮಿನಲ್ಲಿ 1.13 ಲಕ್ಷ ಹಾಗೂ ಹಿಂಗಾರಿನಲ್ಲಿ ಈವರೆಗೆ 79 ಸಾವಿರ ರೈತರು ಬೆಳೆವಿಮೆ ಮಾಡಿಸಿದ್ದಾರೆ. ವಿಮೆ ಪರಿಗಣಿಸುವ ಘಟಕವನ್ನು ಈಗಿರುವ ಹೋಬಳಿ ಬದಲಾಗಿ ಗ್ರಾಮ ಮಟ್ಟಕ್ಕೆ ಹಾಗೂ ಬೆಳೆ ಕಟಾವು ಪರಿಕ್ಷೆಯನ್ನು ವಿಮೆ ಮಾಡಿಸಿದ ರೈತರ ಜಮೀನುಗಳಲ್ಲಿ ನಡೆಸುವ ಪದ್ದತಿ ಅಳವಡಿಸಲು ಹಾಗೂ ಬಿತ್ತನೆ ಹಂಗಾಮು ಪೂರ್ವದಲಿ ಆರಂಭಕ್ಕೆ ಮುನ್ನವೇ ಬೇಳೆ ಸರಾಸರಿ ಇಳುವರಿ ಘೋಷಿಸಲು ರೈತರು ಒತ್ತಾಯಿಸುತ್ತಿದ್ದಾರೆ ಎಂದರು.
ಬೇಳೆ ವಿಮೆ ಕುರಿತಂತೆ ಇರುವ ಸಮಸ್ಯೆಗಳ ಪರಿಹಾರಕ್ಕಾಗಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಿತ ಇಲಾಖೆಗಳ, ಜಿಲ್ಲಾ ಲೀಡಬ್ಯಾಂಕ, ನಬಾರ್ಡ, ವಿಮಾ ಕಂಪನಿಗಳ ಪ್ರತಿನಿಧಿಗಳ ಸಮಿತಿ ಸಭೆಯನ್ನು ನಿಯಮಿತವಾಗಿ ಜರುಗಿಸಲು ಆಯೋಗದ ಅಧ್ಯಕ್ಷರು ಸೂಚಿಸಿದರು.
ಮಾರುಕಟ್ಟೆ ಸಹಕಾರ ಮಂಡಳದ ಸಹಾಯಕ ನಿದರ್ೇಶಕ ವಿ.ಎನ್.ಲಮಾಣಿ ಜಿಲ್ಲಯಲ್ಲಿ ಬೆಲೆ ವ್ತ್ಯಾಸ ಕರತೆ ಪವಾತಿ ವಿಧಾನದಡಿ ಡಿಸೆಂಬರ್ 20ರವರೆಗೆ 2,634 ರೈತರು ನೊಂದಣಿ ಮಾಡಿದ್ದು 54,104 ಕ್ವಿಂಟಲ್ ಈರುಳ್ಳಿ ಮಾರಾಟವಾಗಿದೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ, ಗದಗ ಎಪಿಎಂಸಿ ಉಪಾಧ್ಯಕ್ಷ ಎನ್.ಎಸ್. ಹಿರೇಮನಿಪಾಟೀಲ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ತೋಟಗಾರಿಕೆ ಉಪನಿದರ್ೇಶಕ ಪ್ರದೀಪ್, ಆಹಾರ ಇಲಾಖೆ ಉಪನಿದರ್ೇಶಕ ಅಶೋಕ ಕಲಘಟಗಿ, ಗದಗ ಎಪಿಎಂಸಿಯ ಎಂ.ಆರ್.ನದಾಫ, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 