ಲೋಕ ಅದಾಲತ್ದ ಸದುಪಯೋಗ ಪಡೆದುಕೊಳ್ಳಿ: ನ್ಯಾ. ರೂಪಾ ಚಿನಿವಾರ
Preliminary meeting on the Lok Adalat
ಲೋಕದರ್ಶನ ವರದಿ
ಲೋಕ ಅದಾಲತ ಕುರಿತು ಪೂರ್ವಿಭಾವಿ ಸಭೆ;
ಕಾಗವಾಡ ೧೬: ಜುಲೈ ೧೧ ರಂದು ತಾಲೂಕಿನ ಸಿವ್ಹಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿದ್ದು, ಕಕ್ಷಿದಾರರು ಮತ್ತು ಸಾರ್ವಜನಿಕರು ಇದರ ಲಾಭ ಪಡದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ರೂಪಾ ಚಿನಿವಾರ ತಿಳಿಸಿದ್ದಾರೆ.
ಅವರು, ಸೋಮವಾರ ದಿ. ೧೫ ರಂದು ಸಂಜೆ ಪಟ್ಟಣದ ತಾಲೂಕಾ ನ್ಯಾಯಲಯದ ಆವರಣದಲ್ಲಿ ನಡೆದ ಲೋಕ ಅದಾಲತ್ ಕುರಿತು ತಾಲೂಕಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಜುಲೈ ೧೧ ರಂದು ನಡೆಯಲಿರುವ ಲೋಕ ಅದಾಲತ್ನಲ್ಲಿ ನಮ್ಮ ನ್ಯಾಯಾಲಯದಲ್ಲಿ ೧೦೪೦ ಸಿವ್ಹಿಲ್ ಮತ್ತು ಸುಮಾರು ೧೬೦೦ ಕ್ರಿಮಿನಲ್ ದಾವೆಗಳಿವೆ. ಕಕ್ಷಿದಾರರಿಗೆ ಇತರೆ ಎಲ್ಲ ರೀತಿಯ ದಾವೆಗಳ ಕುರಿತು ರಾಜಿ ಸಂಧಾನ ಮಾಡಿಕೊಳ್ಳಲು ಒಳ್ಳೆಯ ಅವಕಾಶವಿದ್ದು, ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಉಪ ತಹಶೀಲ್ದಾರ್ ವಿಜಯಕುಮಾರ ಚೌಗುಲೆ, ಎಎಸ್ಐ ಎಸ್.ವ್ಹಿ ಹಂಜಿ, ಉಗಾರ ಪುರಸಭೆ ಮತ್ತು ಐನಾಪೂರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರ, ಸಿಡಿಪಿಒ ರವೀಂದ್ರ ಗುದಿಗೆಣ್ಣವರ, ಶಿಕ್ಷಣ ಇಲಾಖೆಯ ಆರ್.ಬಿ ದರೂರ, ಕೆನರಾ ಬ್ಯಾಂಕಿನ ಬಿ. ವಿಜಯಕುಮಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎಸ್.ವ್ಹಿ. ನಾಂದ್ರೆ, ಕಾರ್ಯದರ್ಶಿ ಎಂ.ಜಿ. ವಡ್ಡರ, ವಕೀಲಾದ ಬಿ.ಜೆ. ಮೋಳೆ, ವೈ.ಎ. ಡಾಂಗೆ, ಎ.ಬಿ. ಪಾಟೀಲ, ಎಸ್.ಜೆ. ಚೌಗುಲೆ, ಪೋಲಿಸ್ ಸಿಬ್ಬಂದಿ ಪಿ.ಎಂ. ಮಕಾನದಾರ ಸೇರಿದಂತೆ ತಾಲೂಕಿನ ಅಧಿಕಾರಿಗಳು, ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿಗಳ ಉಪಸ್ಥಿತರಿದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 