ಇಂದು ಸಿಂದಗಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಇಂದು ಸಿಂದಗಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ Power outage in Sindagi area today

ಲೋಕದರ್ಶನ ವರದಿ 

 ಸಿಂದಗಿ 02: ನಗರ ಶಾಖಾ ವ್ಯಾಪ್ತಿಯಲ್ಲಿ ಸೆ. 03 ರಂದು ಪರಿವರ್ತಕ ಸ್ಥಳಾಂತರ ಮಾಡುವ ಕಾಮಗಾರಿ ಹಮ್ಮಿಕೊಂಡಿರುವುದಾಗಿ ಸಹಾಯಕ ಅಭಿಯಂತರರು(ವಿ), ಶಾಖಾಧಿಕಾರಿ ಹೆಸ್ಕಾಂ ಸಿಂದಗಿ ನಗರ, ರವರುತಿಳಿಸಿರುವ ಹಿನ್ನಲೆಯಲ್ಲಿ  110/33/11 ಕೆಬ್ಬಿ ಸಿಂದಗಿ ವಿತರಣಾ ಕೇಂದ್ರದ ಮೇಲೆ ಬರುವ ಎಫ್‌-15 ವಿದ್ಯಾನಗರ, ಬಂದಾಳ ಎನ್‌ಜೆವಾಯ್, ರಾಂಪೂರ ಎನ್‌ಜೆವಾಯ್, ಬಂದಾಳ ಐಪಿ ಮತ್ತು ಬ್ಯಾಕೋಡ ಐಪಿ ಮಾರ್ಗಗಳಲ್ಲಿ ಸೆ. 03 ರಂದು ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 03:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಲು ಕಾ ಮತ್ತು ಪಾ ಉಪ ವಿಭಾಗ, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ವಿನಂತಿಸಿದ್ದಾರೆ.