ಆಂಧ್ರ್ರದೇಶದ ಶ್ರೀಶೈಲಂಗೆ ಅಪಾರ ಭಕ್ತರ ಪಾದಯಾತ್ರೆ
Pilgrimage of many devotees to Srisailam in Andhra Pradesh
ಲೋಕದರ್ಶನ ವರದಿ
ಮಾಂಜರಿ 07: ಅಸಂಖ್ಯೆ ಭಕ್ತ ಸಾಗರವನ್ನು ಹೊಂದಿರುವ ಆಂಧ್ರ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ. ಚಿಕ್ಕೋಡಿ ಅಂಕಲಿ ಕಲ್ಲೋಳ ಶಿರಗುಪ್ಪಿ ಮಾಂಜರಿ ಇಂಗಾಳಿ ಅಂಕಲಿ ಮತ್ತು ರಾಯಬಾಗ್ ತಾಲೂಕಿನ ಗ್ರಾಮಗಳ ಮೂಲಕ ಹಾಯ್ದು ಹೋಗುತ್ತಿರುವ ಅಪಾರ ಭಕ್ತ ಗಣಕ್ಕೆ ಸ್ವಯಂ ಸೇವಾ ಕರ್ತ ಸೇವೆ ಗಮನ ಸೆಳೆದಿದೆ.
ಹಿಂದೂ ಕ್ಯಾಲೆಂಡರಾ ಅನುಸಾರ ಹೊಸ ವರ್ಷ ಆಚರಿಸುವ ಯುಗಾದಿ ಹಬ್ಬದಂದು ಶಿವನ ಮಹಾಕ್ಷೇತ್ರ ಶ್ರೀಶೈಲ ಜಾತ್ರೆಗೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಭಕ್ತಿಯ ಹೆಜ್ಜೆ ಹಾಕಿದ್ದಾರೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಕ್ತ ಸಮೂಹ ಮಲ್ಲಯ್ಯನ ದರುಶನಕ್ಕೆ ಜಮಖಂಡಿ ಬಾಗಲಕೋಟೆ ಮುಖಾಂತರ ಹಾಯ್ದು ಹೋಗುವ ಪಾದಯಾತ್ರಿಗಳ ಸಂಖ್ಯೆ ಹೆಚ್ಚಾಗಿದೆ. ಸಂಭ್ರಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಕಾಣಲು ಹೊರಟಿದ್ದು ಅಚ್ಚರಿ ಮೂಡಿಸಿತು. ಕೆಲವರು ಮರಗಾಲಕಟ್ಟಿಕೊಂಡು ಹೊರಟಿದ್ದು ಗಮನ ಸೆಳೆಯಿತು. ಮೂಕ ಬಸವಣ್ಣಗಳು ಸಹ ಪಾದಯಾತ್ರೆಗಳ ಜೊತೆ ಹೆಜ್ಜೆ ಹಾಕುತ್ತಿರುವುದು ಭಕ್ತಿ ಪರಂಪರೆ ಸಾಕ್ಷಿಕರಿಸಿದೆ.ಇಲ್ಲದೇ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ.
ಮಹಾಶಿವರಾತ್ರಿ ಮುಗಿದ ನಂತರ ಹೋಳಿ ಹುಣ್ಣಿಮೆ ಎರಡು ದಿನ ಬಾಕಿ ಇರುವಾಗ ಪಾದಯಾತ್ರೆ ಆರಂಭಿಸಿ ಯುಗಾದಿ ಒಂದು ದಿನ ಮುನ್ನ ಇರುವಾಗಲೆ ಶ್ರೀಶೈಲ ತಲುಪುತ್ತಾರೆ. ಯುಗಾದಿ ಅಮವಾಸ್ಯೆ ಹಾಗೂ ಪಾಡ್ಯದಂದು ಜರುಗುವ ಜಾತ್ರೆ ಸಡಗರಕ್ಕೆ ಸಾಕ್ಷಿಯಾಗುತ್ತಾರೆ.
ನಾವು ಹೊಂಟೇವ ಶ್ರೀಶೈಲ ನೋಡಲಾಕ.. ಸ್ವಾಮಿ ಮಲಯ್ಯನ ದರುಶನ ಮಾಡೋದಕ...ಗೀಯ ಗಾ... ಗಾಗೀಯ ಗಾ.. ಎಂದು ಉರಿವ ಬಿಸಿಲು ಲೆಕ್ಕಿಸದೇ ಗೀಗಿಪದ ಹಾಡುತ್ತ, ಶಿವ ಸ್ಮರಣೆ ಧ್ಯಾನಿಸುತ್ತಾ ಪಾದಯಾತ್ರೆ ಹೊರಟಿರುತ್ತಾರೆ. ಅಲ್ಲದೆ ಮರಗಾಲು ಕಟ್ಟಿಕೊಂಡು, ದಿರ್ಘ ದಂಡ ನಮಸ್ಕಾರ ಹಾಕುತ್ತ, ತೇರು ಎಳೆಯುತ್ತಾ, ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವ ದೃಶ್ಯ ಭಕ್ತಿಯ ಭಾವನೆ ಹರಿಸುವಂತೆ ಮಾಡುತ್ತದೆ.
ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರ, ಕರ್ನಾಟಕ ಗಡಿ ಭಾಗದ ಅಸಂಖ್ಯಾತ ಭಕ್ತರು ಪಾದಾಯತ್ರೆ ಮೂಲಕ ತೆರಳುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೂಲಕ ಹಾಯ್ದು ಹೋಗುವ ಗ್ರಾಮಗಳಲ್ಲಿ ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಿದ್ದ ಭಕ್ತಾದಿಗಳಿಗೆ ಅನ್ನ ಸಂತರೆ್ಣ, ವಿವಿಧ ಬಗೆಯ ಹಣ್ಣು ಹಂಪಲು, ಎಳನೀರು, ಪಾನಕ, ಮಜ್ಜಿಗೆ, ಗಂಜಿ ನೀಡಿ ಸೇವೆ ಮಾಡಲಾಗುತ್ತಿದೆ. ಅಲ್ಲದೆ ನೋವು ನಿವಾರಣೆಯ ಓಷೋಧಪಚಾರ ಒದಗಿಸಲಾಗುತಿದೆ. ಇನ್ನೂ ಕೆಲವೆಡೆ ಪಾದಯಾತ್ರಿಗಳ ಅಂಗಗಳಿಗೆ ಒತ್ತಿ ಮಸಾಜ್ ಮೂಲಕ ನಗರದ ಸೇವಾಕರ್ತರು ಯಾತ್ರಿಗಳ ಸಹಾಯ ಮಾಡುತ್ತಿದ್ದಾರೆ. ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜಾತಿ, ಧರ್ಮದ ಬೇಧಭಾವ ಇಲ್ಲದೇ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 