ಅಮರಗೋಳ ದಲಿತ ಬಡಾವಣೆಗೆ ಶುದ್ಧ ಕುಡಿಯುವ ನೀರು ಪೂರೈಸಲು ಆಗ್ರಹಿಸಿ ಮನವಿ

ಮುದ್ದೇಬಿಹಾಳ 14: ತಾಲೂಕಿನ ಅಮರಗೋಳ ಗ್ರಾಮದ ದಲಿತ ಬಡಾವಣೆಗೆ ನಿತ್ಯ ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ತಾಲೂಕಾ ಪಂಚಾಯತ್ ಯೋಜನಾ ಅಧಿಕಾರಿ ಖೂಬಾಶಿಂಗ್ ಚವ್ಹಾಣ ಅವರಿಗೆ ಅಮರಗೋಳ ಗ್ರಾಮದ ದಲಿತ ಮುಖಂಡರು ಬುಧವಾರ ಮನವಿ ಸಲ್ಲಿಸಿದರು. 

ಸಧ್ಯ ಎಲ್ಲಡೆ ಬೇಸಿಗೆ ಪ್ರಾರಂಭಗೊಂಡಿದೆ ಬಿಸಿಲಿನ ತಾಪಮಾನಬಕ್ಕೆ ಜನಸಾಮನ್ಯರು ತತ್ತರಿಸಿಹೊಗುತ್ತಿದ್ದಾರೆ ಜೊತೆ ಕೃಷ್ಣಾ ನದಿ ತೀರದಲ್ಲಿರುವ  ನಮ್ಮ ಅಮರಗೋಳ ಗ್ರಾಮವಿದ್ದರೂ ನಿತ್ಯ ಕುಡಿಯುವ ನೀರಿನ ಸಮಸ್ಯೆ ನೀಗಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುತ್ತಿಲ್ಲ ಇದರಿಂದ ಕೃಷಿ ಸೇರಿದಂತೆ ಇತರೇ ವ್ಯವಸಾಯ ಕೆಲಸಕ್ಕಾಗಿ ಸಾಕಲಾಗಿರುವ ದನ ಕರುಗಳಿಗೆ ಮಾತ್ರವಲ್ಲದೇ ಜನಸಾಮನ್ಯರಿಗೆ ಕುಡಿಯುವ ನೀರು ಸಿಗದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  

ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಯಾವೂದೇ ಪ್ರಯೋಜನವಾಗಿಲ್ಲ ನೀರು ಬೇಕೆಂದು ಕೇಳಿದಾಗ ಮಾತ್ರ ಎಲ್ಲ ಗ್ರಾಮಸ್ಥರು ಮಲಗಿದ ಮೇಲೆ ಮದ್ಯ ರಾತ್ರಿ 12 ಗಂಟೆಗೆ ನೀರು ಬಿಡುತ್ತಾರೆ ಅದಲ್ಲದೇ ಈ ಗ್ರಾಮದಲ್ಲಿ ಮಹಿಳಾ ಶೌಚಾಲಯವಿದ್ದು ಆದರೇ ಉದ್ಘಾಟನೆಯೇ ಆಗಿಲ್ಲ ಇದಕ್ಕೆ ಬಂದ ಅನುದಾನವನ್ನು ಕೆಲವರುದುರ್ಬಕೆ ಮಾಡಿಕೊಂಡು ಎತ್ತಿಹಾಕಿದ್ದಾರೆ ಇವೇಲ್ಲ ನಮ್ಮ ಬೇಡಿಕೆಗಳನ್ನು ಎರಡು ಮೂರು ದಿನಗಳಲ್ಲಿ ನಮ್ಮ ಮನವಿ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೇ ಅಮರಗೋಳ ಗ್ರಾಮಸ್ಥರೊಂದಿಗೆ ಪಟ್ಟಣದ ತಾಲುಕು ಪಂಚಾಯತ ಕಚೇರಿ ಎದುರ ಧರಣಿ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮನವಿಲ್ಲಿ ತಿಳಿಸಿದ್ದಾರೆ. 

ಈ ವೇಳೆ ಮುಖಂಡರಾದ ಬಸವರಾಜ ಪೂಜಾರಿ, ಶರಣು ಸರೂರ, ಪರಸಪ್ಪ ಮಾದರ, ಯಮನುಪ್ಪ ಮಾದರ, ಶ್ರೀನಾಥ, ಮಾದರ, ಸುರೇಶ ಮಾದೆರ, ಬಸವಂತ ಮಾದರ, ಗಂಗಪ್ಪ ಮಾದರ, ಆಭೀಲಾಶ ಮಾದರ, ಹುಲಗಪ್ಪ ಮಾದರ, ಶರಣಪ್ಪ ಮಾದರ, ದೇವಪ್ಪ ಮಾದರ, ಸಿದ್ದಪ್ಪ ಮಾದರ ಸೇರಿದಂತೆ ಹಲವರು ಇದ್ದರು.