ಕ್ರೂರಿ ಫಯಾಜನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲು ಆಗ್ರಹಿಸಿ ಮನವಿ

ಚನ್ನಮ್ಮನ ಕಿತ್ತೂರ 25: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿನಿ ನೇಹಾಳ ಕೊಲೆ ಮಾಡಿದ ಕ್ರೂರಿ ಫಯಾಜನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಿತ್ತೂರು ಮಂಡಳ ಸೇರಿದಂತೆ ವಿವಿಧ ಸಂಘಟನೆಗಳು,  ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವರ್ತುಳದಿಂದ ಪ್ರತಿಭಟನಾ ಮೆರವಣಿಗೆಯ ಮೂಲಕ ತಹಶೀಲ್ದಾರ ರವೀಂದ್ರ ಹಾದಿಮನಿ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು. 

ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ಕೊಲೆ ಪ್ರಕರಣವನ್ನು ಸಿಬಿಆಯ್‌ಗೆ ಕೊಡಬೇಕು ಜೊತೆಗೆ ಕ್ರೂರಿ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ನ್ಯಾಯ ಸಮ್ಮತ ತನಿಖೆ ನಡೆಸಲು  ರಾಜ್ಯದ ಜನರ ಬೇಡಿಕೆ ಇದೆ ಎಂದರು. ಇಡೀ ಕರ್ನಾಟಕಕ್ಕೆ ಕಳಂಕ ತರುವ ಘಟನೆ ಇದಾಗಿದ್ದು ಇಂದಿನ ಸರಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನೀಡಿದ ಹೇಳಿಕೆಯನ್ನು ನೋಡಿದರೆ ಇಡೀ ಜನತೆ ರೊಚ್ಚಿಗೆದ್ದಾರೆ. ಉತ್ತರ ಪ್ರದೇಶದಲ್ಲಿ ಘಟನೆಯಾಗಿದ್ದರೆ ಅವರ ಮನೆಯನ್ನು ಧ್ವಂಸಗೊಳಿಸಿ ಎನ್ ಕೌಂಟರ್ ಆದೇಶ ಮಾಡುತ್ತಿದ್ದರು. ಅಂದಾಗ ಜನರ ವಿಶ್ವಾಸ ಉಳಿಸಿಕೊಳ್ಳುವ ಕೆಲಸವಾಗುತ್ತದೆ. ಸರಕಾರಕ್ಕೆ ಕುಟುಂಬಕ್ಕೆ ನ್ಯಾಯ ಕೊಡುವ ಕೆಲಸಮಾಡಬೇಕು, ಈ ಆರೋಪಿಗೆ ಗಲ್ಲು ಶಿಕ್ಷೆಯನ್ನು ನೀಡಿದರೆ ಇಂತಹ ಪ್ರಕರಣಗಳು ಮತ್ತೆ ಮರುಕಳಿಸುವದಿಲ್ಲ ದುಷ್ಟ ವ್ಯಕ್ತಿಗೆ ಘೋರವಾದ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು. 

ಬಿಜೆಪಿ ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಶ್ರೀಕರ್ ಕುಲಕರ್ಣಿ, ಉಳವಪ್ಪ ಉಳ್ಳಾಗಡ್ಡಿ, ಸರಸ್ವತಿ ಹೈಬತ್ತಿ, ಪಾರ್ವತಿ ಸರಪಳಿ, ನಿಜಲಿಂಗಯ್ಯ ಹಿರೇಮಠ, ಅಪ್ಪಣ್ಣ ಪಾಗಾದ,  ಎಸ್‌.ಆರ್ ಪಾಟೀಲ,  ಶಿವಾನಂದ ಹನಮಸಾಗರ, ನಜೀರಸಾಬ ಹವಾಲ್ದಾರ, ಬಸವರಾಜ ಮಾತನವರ, ಕಿರಣ ಪಾಟೀಲ, ಮಂಜುನಾಥ ಅಡಬಟ್ಟಿ, ವೆಂಕಟೇಶ ಉಣ್ಣಕಲ್ಲಕರ ಸೇರಿದಂತೆ ಇತರರು ಇದ್ದರು.