ಸರ್ಕಾರದ ರೈತ ನಿರೋಧಿ ನೀತಿ ಖಂಡಿಸಿ ಮನವಿ

ಶೇಡಬಾಳ 14 : ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ರೈತ ನಿರೋಧಿ ನೀತಿಗಳನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಕಾಗವಾಡ ಮಂಡಲವು ಪ್ರತಿಭಟನೆಯ ಮೂಲಕ ಮಾನ್ಯ ತಹಶೀಲ್ದಾರರಿಗೆ ಮನವಿ ಪತ್ರ ಅರ್ಪಿಸಿದರು.  

ಸೋಮವಾರ ದಿ. 14 ರಂದು ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಕಾಗವಾಡ ಮಂಡಲದ ಅಧ್ಯಕ್ಷರಾದ ಉದಯ ದೇಸಾಯಿ ಹಾಗೂ ಇನ್ನಿತರ ಪದಾಧಿಕಾರಿಗಳು ಆಯೋಜಿಸಿದ ಈ ಪ್ರತಿಭಟನೆಯು ಚೆನ್ನಮ್ಮ ಸರ್ಕಲ್‌ನಿಂದ ರಾ​‍್ಯಲಿ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ಅವರಿಗೆ ಮನವಿ ಪತ್ರ ಅರ​‍್ಿಸಿದರು.  

ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ನವಿನಾಳೆ ಮಾತನಾಡುತ್ತಾ ರಾಜ್ಯ ಕಾಂಗ್ರೇಸ್ ಸರ್ಕಾರವು ರೈತ ವಿರೋಧ ನೀತಿಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಎಪಿಎಂಸಿ ಕಾನೂನು, ಅವೈಜ್ಞಾನಿಕ ವಿದ್ಯುತ್ ದರ ಏರಿಕೆ, ರೈತ ವಿದ್ಯಾನಿಧಿ ಯೋಜನೆ ರದ್ದು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಭೂಸಿರಿ ಯೋಜನೆ, ಕಿಸಾನ ಸಮ್ಮಾನ್ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ, ನೀರಾವರಿ ಯೋಜನೆಗಳ ನಿರ್ಲಕ್ಷ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ ಮೊದಲಾದ ರೈತ ಪರ ಯೋಜನೆಗಳನ್ನು ರದ್ದು ಮಾಡುತ್ತಿರುವ ಕಾಂಗ್ರೇಸ್ ಸರ್ಕಾರದ ನೀತಿ ಖಂಡೀನೀಯವಾಗಿದೆ. ಇದನ್ನು ಬಿಜೆಪಿ ರೈತ ಮೋರ್ಚಾ ಕಾಗವಾಡ ಮಂಡಲವು ಖಂಡಿಸುತ್ತದೆ ಎಂದು ಹೇಳಿ ತಹಶೀಲ್ದಾರರಿಗೆ ಮನವಿ ಪತ್ರ ಅರ​‍್ಿಸಿದರು.  

ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ. ರಾಜೇಶ ನೆರ್ಲಿ, ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ದುಂಡಪ್ಪಾ ಬೆಂಡವಾಡೆ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಾತನಾಡಿದರು. 

ಈ ಸಮಯದಲ್ಲಿ ಡಾ. ರಾಜೇಶ ನೆರ್ಲಿ, ದುಂಡಪ್ಪಾ ಬೆಂಡವಾಡೆ, ಶಿವಾನಂದ ನವಿನಾಳೆ, ಪ್ರವೀಣ ಕೆಂಪವಾಡೆ, ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ರಾಕೇಶ ಪಾಟೀಲ, ಸುಭಾಷ ಮೊನೆ, ಭಮ್ಮಣ್ಣಾ ಚೌಗಲೆ, ರವಿ ಪಾಟೀಲ, ಸದಾಶಿವ ಪೂಜಾರಿ, ವಸಂತ ಮಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.