ಇಂದಿನಿಂದ ಪರ್ಲ ಪಬ್ಲಿಕ್ ಶಾಲೆ ದಶಮಾನೋತ್ಸವ ಕಾರ್ಯಕ್ರಮ, ಸ್ಮರಣ ಸಂಚಿಕೆ ಬಿಡುಗಡೆ

ಹರಪನಹಳ್ಳಿ 09: ಪರ್ಲ್ಪ ಬ್ಲಿಕ್ ಶಾಲೆಯು 12ನೇ ವರ್ಷಕ್ಕೆ ಪಾದಾರ್ಪಣೆಯಾದ ಪ್ರಕೃತಿ ವಿದ್ಯಾ ಸಂಸ್ಥೆಯು ಡಿಸೆಂಬರ್ 10 ಮತ್ತು 11 ದಂದು ದಶಮಾನೋತ್ಸವ ಆಚರಣೆ ಮಾಡಲು ಶಾಲೆಯ ಆಡಳಿತ ಮಂಡಳಿಯು ತೀರ್ಮಾನಿಸಲಾಗಿದೆ ಎಂದು  ಪ್ರಕೃತಿ ವಿದ್ಯಾ ಸಂಸ್ಥೆ ಅಧ್ಯಕ್ಷರಾದ ಶ್ರೀ ಶಶಿಧರ್ ಪೂಜಾರ್ ತಿಳಿಸಿದರು.

 ಅಡಿವೆಹಳ್ಳಿ ಕ್ರಾಸ್, ನಿಚ್ಚಾಪುರ ಪರ್ಲ್  ಪಬ್ಲಿಕ್ ಶಾಲೆಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು  2011ರಲ್ಲಿ ಪ್ರಾರಂಭವಾದ ಪ್ರಕೃತಿ ವಿದ್ಯಾ ಸಂಸ್ಥೆ 30 ವಿದ್ಯರ್ಥಿಗಳಿಂದ ಆರಂಭಗೊಂಡ ಇಂದು 800 ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಡಿ. 10ರಂದು ಸಂಜೆ 4:30ಕ್ಕೆ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ಹರಪನಹಳ್ಳಿ ಪ್ರಕೃತಿ ವಿದ್ಯಾ ಸಂಸ್ಥೆಯ ಶಶಿಧರ್ ಪೂಜಾರ್, ಮುಖ್ಯ ಅತಿಥಿಯಾಗಿ ಶಾಸಕ ಹಾಗೂ ಮಾಜಿ ಕಂದಾಯ ಸಚಿವ ಜಿ ಕರುಣಾಕರ ರೆಡ್ಡಿ, ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್, ಕಾರ್ಯಕ್ರಮದ ಕೇಂದ್ರ ಬಿಂದುವಾದ ಪದ್ಮಶ್ರೀ ಪುರಸ್ಕೃತರು ಮರಿಯಮ್ಮನಹಳ್ಳಿ ಮಂಜಮ್ಮ ಜೋಗುತಿ ಭಾಗವಹಿಸುವರು. 

ದಿ.  11 ಭಾನುವಾರ ಸಂಜೆ 4:30ಕ್ಕೆ ಮುಖ್ಯ ಅತಿಥಿಯಾಗಿ ಹೂವಿನ ಹಡಗಲಿ ಶಾಸಕ, ಮಾಜಿ ಕಾಮರ್ಿಕ ಸಚಿವ ಪಿ ಟಿ ಪರಮೇಶ್ವರ ನಾಯ್ಕ್, ದಾವಣಗೆರೆ ಜವಳಿ ಉದ್ಯಮಿ ಬಿಸಿ ಉಮಾಪತಿ, ಹರಪನಹಳ್ಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಯು ಬಸವರಾಜಪ್ಪ ಭಾಗವಹಿಸುತ್ತಾರೆ ಎಂದು ತಿಳಿಸಿದರು. 

ಪ್ರಾಂಶುಪಾಲ ಸುಮಾ ಉಪ್ಪಿನ್ ಮಾತನಾಡಿ ಪ್ರಕೃತಿ ವಿದ್ಯಾ ಸಂಸ್ಥೆಯು ಶಾಲಾ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಮಯ ಪ್ರಜ್ಞೆ ಮಕ್ಕಳಲ್ಲಿ ತಾರತಮ್ಯವಿಲ್ಲದೆ ಎಲ್ಲಾ ಮಕ್ಕಳು ಒಂದೇ ಅನ್ನುವ ಭಾವನೆ ಮೂಡಿಸುವಂತಹ ಸಂಸ್ಕೃತಿಯನ್ನು ಹೇಳಿಕೊಡಲಾಗಿದೆ. ಶಾಲೆಯಲ್ಲಿ ಮಕ್ಕಳ ಹುಟ್ಟು ಹಬ್ಬದ ಆಚರಣೆಯನ್ನು ನಿರ್ಬಂಧಿಸಲಾಗಿದೆ. ಏಕೆಂದರೆ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ಮಕ್ಕಳು ಶ್ರೀಮಂತರಾಗಿರುವುದಿಲ್ಲ, ಹಾಗೂ ಎಲ್ಲಾ ತರಗತಿಯ ವಿದ್ಯಾಥರ್ಿಗಳಿಗೆ ಸಂಸ್ಥೆಯ ಪರವಾಗಿ ಗ್ರೀಟಿಂಗ್ ಕಾರ್ಡ್ ಗಳನ್ನು ನೀಡಿ ಖುಷಿಪಡಿಸುತ್ತೇವೆ. ನಂತರ ಈ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಮಂಜುನಾಥ ಪೂಜಾರ್, ಚನ್ನೇಶ ಬಣಕಾರ್ ಕಾರ್ಯದರ್ಶಿ ಗಳು, ಮಾಲತೇಶ್ ಟಿ ಚಳಗೇರಿ, ನಾಗೇಶ್ ಉಪ್ಪಿನ, ಕೆ ವಿರೂಪಾಕ್ಷಪ್ಪ, ಬಸವರಾಜ್ ಹುಲ್ಲತ್ತಿ, ಸುಮಾ ಹುಲ್ಲತ್ತಿ, ಉಮಾ ಉಪ್ಪಿನವರ್ ಉಪಸ್ಥಿತರಿದ್ದರು