ಲೋಕದರ್ಶನ ವರದಿ
ಪಾಲಕರು ಮಕ್ಕಳಿಗೆ ನೃತ್ಯ-ಸಂಗೀತಗಳಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ಪ್ರೋತ್ಸಾಹಿಸಬೇಕು
ಧಾರವಾಡ 12: ಈಗಿನ ಯುವಪೀಳಿಗೆ ತುಂಬಾ ಬುದ್ಧಿವಂತರು ಅಂತಹ ಮಕ್ಕಳಿಗೆ ಪಠ್ಯವೊಂದೇ ಸೀಮಿತವಾಗಬಾರದು. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಅಗತ್ಯ ಎಂದು ಭಾರತದ ಮಾನವ ಹಕ್ಕುಗಳ ಸಮಿತಿ ಸದಸ್ಯರಾದ ಹಾಗೂ ಜಿಲ್ಲಾ ಸಂಪನ್ಮೂಲ ಅಧಿಕಾರಿಗಳಾದ ಡಾಕ್ಟರ್ ಸುರೇಶ್‌ಕಮ್ಮಾರ್ ಹೇಳಿದರು.
ಅವರು ಇಲ್ಲಿಯ ಯುವ ಡಾನ್ಸ್ ಅಕಾಡೆಮಿ ಕ.ವಿ.ವ.ಸಂಘದ ಡಾ.ಪಾಪು ಭವನದಲ್ಲಿ ಆಯೋಜಿಸಿದ ಯುವ ಉತ್ಸವ-2025 ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನ ಸಹಾಯಕಾರ್ಯಕ್ರಮವನ್ನು ದೀಪಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳಿಗೆ ನೃತ್ಯ-ಸಂಗೀತ ಕರಾಟೆ ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಿಕೊಡಬೇಕು.ಯುವಡಾನ್ಸ್‌ಅಕಾಡೆಮಿಯು ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ನಾಟ್ಯದಜೊತೆಗೆಇನ್ನಿತರ ಸಮಾಜಮುಖಿವಿಷಯದಲ್ಲೂ ತಿಳುವಳಿಕೆ ನೀಡುವಂತಹ ಕಾರ್ಯಗಳಲ್ಲಿ ಸದಾ ಯಶಸ್ವಿ ಯಲ್ಲಿರುತ್ತದೆಇದುಒಂದುತುಂಬಾ ಹೆಮ್ಮೆಯ ವಿಷಯ, ಇದಕ್ಕೆ ಪಾಲಕರ ಬೆಂಬಲ ತುಂಬಾಅಗತ್ಯಎಂದಅವರುಕರ್ನಾಟಕ ಸರ್ಕಾರದಲ್ಲಿ ಹಲವಾರು ಯೋಜನೆಗಳಿವೆ ಎಲ್ಲರೂಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಇಂತಹ ಕಾರ್ಯಗಳಿಗೆ ಯಾವಾಗಲೂ ನನ್ನ ಸಹಾಯವಿರುತ್ತದೆಎಂದು ಹೇಳಿದರು ಮತ್ತುಯುವಡಾನ್ಸ್‌ಅಕಾಡೆಮಿರಮೇಶ್ ಪಾಟೀಲರಿಗೆಭಾರತ ಸರ್ಕಾರದಿಂದ ಹೊಸ ಯೋಜನೆಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ಮುಖ್ಯಅತಿಥಿಯಾಗಿ ಆಗಮಿಸಿದ ಡಾಕ್ಟರ್‌ಉಮೇಶ್ ಹಳ್ಳಿಕೇರಿ ಮಾತನಾಡಿ, ಇಂದಿನ ಯುವಜನತೆದುಶ್ಚಟಕ್ಕೆ ಮೊರೆ ಹೋಗುತ್ತಿರುವುದು ಬಹಳ ದುಃಖದ ಸಂಗತೀಬೀಡಿ, ಸಿಗರೇಟ್, ಗುಟ್ಕಾಇದರಿಂದಕ್ಯಾನ್ಸರ್ ಹರಡುತ್ತದೆಎಲ್ಲಯುವ ಪೀಳಿಗೆಇದರಿಂದ ಹೊರಬರಲು ಸಮಾಜಮುಖಿ ಚಟುವಟಿಕೆಗಳನ್ನು ತಮ್ಮನ್ನುತಾವು ತೊಡಗಿಸಿಕೊಳ್ಳಬೇಕು. ಈ ದಿಶೆಯಲ್ಲಿಯುವಅಕಾಡೆಮಿನೃತ್ಯಕಾರ್ಯಕ್ರಮದೊಂದಿಗೆಯುವ ಪ್ರತಿಭೆಗಳನ್ನುಗುರುತಿಸುವುದು ಹಾಗೂ ಪ್ರತಿವರ್ಷಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧನಸಹಾಯ, ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಅತಿಥಿಗಳಿಗೆ ಹಾಗೂ ಮಕ್ಕಳಿಗೆ ಸಸಿ ನೀಡುವ ಮುಖಾಂತರ ಸಮಾಜಮುಖಿ ಹಾಗೂ ಪರಿಸರ ಕಾಳಜಿಯನ್ನು ತೋರುತ್ತಿರುವಕಾರ್ಯ ಶ್ಲಾಘನೀಯಎಂದರು.
ಯುವಉತ್ಸವ 2025 ಕಾರ್ಯಕ್ರಮದಲ್ಲಿ ಮಕ್ಕಳ ಸಂಸ್ಕೃತಿಕ ಪ್ರತಿಭೋತ್ಸವ, ಬೇಸಿಗೆ ಶಿಬಿರದ ಸಮಾರೋಪ ಸಮಾರಂಭಮತ್ತುಕ್ಯಾನ್ಸರ್ ಪೀಡಿತ ಮಕ್ಕಳ ಸಹಾಯಕ್ಕೆದಾನಿಗಳಿಂದ ಧನಸಂಗ್ರಹಿಸಲಾಯಿತು.
ಯುವಡ್ಯಾನ್ಸ್‌ಅಕ್ಯಾಡೆಮಿ ಸಂಸ್ಥಾಪಕರಮೇಶ್ ಪಾಟೀಲ್‌ಪ್ರಾಸ್ತಾವಿಕವಾಗಿ ಮಾತನಾಡಿ, ಅಕಾಡೆಮಿಯ ಕಳೆದ ಹದಿನೇಳು ವರ್ಷಗಳಿಂದ ನಡೆದುಬಂದಕುರಿತು ವಿವರಿಸಿದರು.ಘನ ಉಪಸ್ಥಿತಿಯಲ್ಲಿ ಯುವಡಾನ್ಸ್‌ಅಕಾಡೆಮಿಯಗೌರವಾಧ್ಯಕ್ಷರಾದಂತಹ ರತ್ನಮ್ಮ ಪಾಟೀಲ್ ಉಪಸ್ಥಿತರಿದ್ದರು. ಬೇಸಿಗೆ ಶಿಬಿರದ ಶಿಕ್ಷಕರಾದಂತಹ ರೇಣುಕಾ, ಕುಮಾರಿಅಕ್ಷತಾ, ಕುಮಾರಿಸುಶ್ಮಿತಾ, ಕರಾಟೆ ಶಿಕ್ಷಕರಾದ ವಿಠ್ಠಲ್ ಮಾರ್ಗದರ್ಶಕರಾದಂತಹ ಉಳವಪ್ಪ ಹುಡೇದ್‌ಇವರೆಲ್ಲರಿಗೂ ಉಪಸ್ಥಿತರಿರುವ ಎಲ್ಲಾ ಅತಿಥಿಗಳಿಂದ ಗೌರವ ಸನ್ಮಾನವನ್ನು ನೀಡಲಾಯಿತು ಮತ್ತು ಬಂದಂತಹಎಲ್ಲಗಣ್ಯರಿಗೂಕೂಡ ಸನ್ಮಾನಕಾರ್ಯಕ್ರಮ ನೆರವೇರಿತು.
ಇದೇ ಸಂದರ್ಭದಲ್ಲಿ ರೇಣುಕಾಅವರುಗಣ್ಯರಿಗೆ ಸ್ವಾಗತಿಸಿದರು, ಅದೃಷಅವರುಕಾರ್ಯಕ್ರಮವನ್ನು ನಿರೂಪಿಸಿ ಗಣ್ಯರಿಗೆ ವಂದಿಸಿದರು ಸೌಮ್ಯ, ವಿಜಯಲಕ್ಷ್ಮಿಕುಮಾರಿ ಪೂಜಾ ಹಾಗೂ ವಿದ್ಯಾರ್ಥಿಗಳು ಪಾಲಕರು ಪೋಷಕರು ಕಲಾಭಿಮಾನಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಂತರ ಸುಮಾರು 80 ಮಕ್ಕಳಿಂದ ವೈವಿಧ್ಯಮಯ ಫ್ಯಾಷನ್ ಶೋ, ವಿಭಿನ್ನ ನೃತ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸೊಗಸಾಗಿ ಜರುಗಿ ಪ್ರೇಕ್ಷಕರ ಮನ ಸೆಳೆದವು.