ರಾಣೆಬೆನ್ನೂರ

26 ರಿಂದ ಮೂರು ದಿನಗಳ ಕಾಲ ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವ

26 ರಿಂದ ಮೂರು ದಿನಗಳ ಕಾಲ ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವ

ರಾಣಿಬೆನ್ನೂರ 26:  ಪಾಂಡುರಂಗ ರುಕ್ಮಾಯಿ ದೇವರ ದಿಂಡಿ ಉತ್ಸವವು ಎ 26 ರಿಂದ 28 ವರೆಗೆ ಮೂರು ದಿನಗಳ ಕಾಲ ದೇವರಗುಡ್ಡ ರಸ್ತೆಯ ಪಾಂಡುರಂಗ ರುಕ್ಮಾಯಿ ದೇವಸ್ಥಾನದಲ್ಲಿ ಜರುಗಲಿದೆ ಎಂದು ನಾಮದೇವ ಸಮಾಜದ ಅಧ್ಯಕ್ಷ ಪ್ರವೀಣ ಎಸ್ ಕೋಪರ್ಡೆ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.  ಎ26 ರಂದು ಸಂಜೆ 6-00 ಗಂಟೆಗೆ ಪೋತಿ ಸ್ಥಾಪನೆಯು ಕೃಷ್ಣಪ್ಪ ಕೋಪರ್ಡೆ ಹಾಗೂ ಸಂತ ಮಹೋದಯರಿಂದ ಜರುಗುವುದು. ಸಂಜೆ 7-30 ರಿಂದ 9-00 ರವರೆಗೆ ಭಜನೆ, ಕೀರ್ತನೆ ನಡೆಯುವುದು.  

ಎ27 ಸೋಮವಾರ ದಂದು ಬೆಳ್ಳಿಗ್ಗೆ 5-00 ಗಂಟೆಗೆ ಕಾಕಡಾರತಿ ಭಜನೆ, ಮತ್ತು 6-30 ರಿಂದ 9-00 ರವರೆಗೆ ಮಹಾ ಗಣಪತಿ, ಪಾಡುರಂಗ ರುಕ್ಮಾಯಿ ಹಾಗೂ ತುಳಜಾ ಭವಾನಿ ದೇವರಿಗೆ ಅಭಿಷೇಕ ಮತ್ತು ಪೂಜಾ ವಿಧಾನಗಳು ನಡೆಯುವವು. ನಂತರ ಸಂತರಿಂದ ಭಜನೆ ಕಾರ್ಯಕ್ರಮ ನಡೆಯುವುದು. ಅಂದು ಸಂಜೆ  6-00 ಗಂಟೆಯಿಂದ 8-00 ಗಂಟೆಯವರೆಗೆ ಕೀರ್ತನೆ ಕಾರ್ಯಕ್ರಮವನ್ನು ಪಂಡರಾಪುರದ ಯಶವಂತ ಪ್ರಭಾಕರ ಬುವಾ ಬೋದಲೆ ಮಹಾರಾಜರು ನಡೆಸಿಕೊಡುವರು ಈ ವೇಳೆ ಹೆಸರಾಂತ ಮೃದಂಗಕಾರರು, ಗಾಯಕರು, ಹಾಗೂ ಸಂತ ಮಹಾಂತರು ಆಗಮಿಸುವರು. 

ಎ.28 ಮಂಗಳವಾರ ದಂದು ಬೆಳ್ಳಿಗ್ಗೆ 8-30ಕ್ಕೆ ಪಾಂಡುರಂಗ ರುಕ್ಮಾಯಿ ಪಾಲಕಿ ಉತ್ಸವವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪುವುದು.  ನಂತರ ಸಂತ ಪೂಜಾ, ಮಹಾ ಮಂಗಳಾರತಿ, ಸಂತರ ಕೀರ್ತನೆ ನಡೆಯಲಿದೆ. ಮಧ್ಯಾಹ್ನ 1-30 ಕ್ಕೆ ಅನ್ನ ಸಂತರೆ​‍್ಣ ಕಾರ್ಯಕ್ರಮವಿದ್ದು, ಸರ್ವ ಸಮಾಜದ ಭಕ್ತರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕೋಪರ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


ಸುದ್ದಿ ಓದಿ