ಪದ್ಮಾವತಿ ದೇವಿಯ ಪಲ್ಲಕ್ಕಿ ಮಹೋತ್ಸವ

ಲೋಕದರ್ಶನವರದಿ

ಕಾಗವಾಡ೨೨:  ಕಳೆದ 3 ದಿನಗಳಿಂದ ಉಗಾರ ಬುದ್ರುಕ ಗ್ರಾಮದ ಜನತೆ ಪದ್ಮಾವತಿ ದೇವಿಯ ಪೂಜೆ, ಆರಾಧನೆಯಲ್ಲಿ ಮಗ್ನವಾಗಿದ್ದರು. ಮಹಾರಾಷ್ಟ್ರ ಮತ್ತು ಕನರ್ಾಟಕ ರಾಜ್ಯದಿಂದ ಸುಮಾರು 10 ಸಾವಿರ ಶ್ರಾವಕ, ಶ್ರಾವಿಕೆಯರು ದೇವಿಯ ಪೂಜೆಯಲ್ಲಿ ಪಾಲ್ಗೊಂಡು ಅವರಲ್ಲಿರುವ ಶಿಸ್ತ, ಸೈಯಂದೇವಿಯ ಭಕ್ತಿ ಎದ್ದು ಕಾಣುತಿತ್ತು.

        ಉಗಾರದ ಪದ್ಮಾವತಿ ಮಂದಿರದ ಮುಖ್ಯಸ್ಥರು, ದೇವಿಯ ಆರಾಧನಾ ಮಹೋತ್ಸವದ ಯಜಮಾನ್ ದಂಪತಿಗಳಾದ ಬಾಪೂಗೌಡಾ ಪಾಟೀಲ, ಶೀತಲ ಪಾಟೀಲ, ವೃಶಭ್ ಪಾಟೀಲ, ಭುಜಗೌಡಾ ಪಾಟೀಲ ಇವರು ಮತ್ತು ಸುಮಾರು 1 ಸಾವಿರ ಶ್ರಾವಕ, ಶ್ರಾವಿಕೆಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಧಿ, ವಿಧಾನದ ಪೂಜೆ ನೇರವೆರಿಸಿದರು.

     ಪದ್ಮಾವತಿ ಮಂದಿರದಲ್ಲಿ ಮೂರು ದಿನದ ಬೃಹತ್ ಮಹಾಮಂಗಲ ಆರಾಧನಾ ಮಹೋತ್ಸವ ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ್ ಮಹಾರಾಜರು ಜೈನ ಮಠ ಸೊಂದಾ, ಜಿನಸೇನ ಭಟ್ಟಾರಕ ಮಹಾರಾಜರು ನಾಂದಣಿ ಇವರ ಸಾನಿಧ್ಯದಲ್ಲಿ ಜರುಗಿತು. ಮಹಾರಾಜರು ಮತ್ತು ಆರ್ಚಕರು ಪೂಜೆ ವಿಧಿ ಮಾಡಿದರು. ಪದ್ಮಾವತಿ ಮಂದಿರದಿಂದ ಗ್ರಾಮದ ಪ್ರಮುಖ ಮಾರ್ಗದಿಂದ ಭವ್ಯ ಕುಂಭಮೇಳ ಮತ್ತು ಪಲ್ಲಕ್ಕೊತ್ಸವ ನೆರವೇರಿತು. ಪಲ್ಲಕ್ಕಿ ಉತ್ಸವದಲ್ಲಿ ಊರಿ, ಬಿಸಿಲಿನಲ್ಲಿ ಬರಗಾಲದಿಂದ ಸುಮಂಗಲೆಯರು ಕುಂಭ ತೆಗೆದುಕೊಂಡು ದೇವಿಯ ಆಚನರ್ೆ ಮಾಡುತ್ತಾ ಪಾಲ್ಗೊಂಡಿದ್ದರು. ಗ್ರಾಮದಲ್ಲಿ ಎಲ್ಲ ಸಮಾಜ ಬಾಂಧವರು ಮನೆಯ ಮುಂದೆ ರಂಗೋಲಿ ಹಾಕಿಸಿ ಪವೀತ್ರ ಪಲ್ಲಕ್ಕಿಗೆ ಸ್ವಾವಕ ಮಾಡುತ್ತಿದ್ದರು.