ಮತದಾನ ಜಾಗೃತಿ ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ಶಿಗ್ಗಾವಿ 20: ಪಟ್ಟಣದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ 2024 ಶಿಗ್ಗಾವಿ  ತಾಲೂಕ ಸ್ವೀಫ ಸಮಿತಿಯ  ನೇತೃತ್ವದಲ್ಲಿ ಮತದಾನ ಜಾಗೃತಿ ಕುರಿತು ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು  ಆಯೋಜಿಸಲಾಗಿತು.್ತ  

ಅಧ್ಯಕ್ಷತೆಯನ್ನು ವಹಿಸಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಪಿ ಮಾತನಾಡಿ ಮತದಾನದ ಮಹತ್ವ ಅದರಿಂದಾಗುವ ಲಾಭ ಮತ್ತು ನಷ್ಟಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು. 

 ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ, ತಾಲೂಕ ಸ್ವೀಫ ಸಮಿತಿ ಕಾರ್ಯದರ್ಶಿ ಪ್ರಕಾಶ ಓಂಧಕರ, ತಾಲೂಕ ನೋಡಲ್ ಅಧಿಕಾರಿ ಎಸ್‌.ಆರ್‌.ರಮೇಶ, ನರೇಗಾ ಸಹಾಯಕ ನಿರ್ದೇಶಕ ಭೂಸರೆಡ್ಡಿ, ವ್ಯವಸ್ಥಾಪಕಿ ಭಾರತಿ ಮಂಜುನಾಥ, ಸಮಾಜ ವಿಜ್ಞಾನ ತಾಲೂಕ ಸಂಘದ ಅಧ್ಯಕ್ಷ ರಾಜಶೇಖತರ ಹೆಸರೂರ ಸೇರಿದಂತೆ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಪರ್ಧೇಯಲ್ಲಿ ಒಟ್ಟು 41 ವಿಧ್ಯಾರ್ಥಿಗಳು ಹಾಗೂ 22 ಶಿಕ್ಷಕರು  ಭಾಗವಹಿಸಿದ್ದರು.