ಪೇಜಾವರ ಶ್ರೀಗಳು ಸರ್ವಜನ ಪ್ರೇಮಿ ಸಂತ: ಹೆಚ್ ವಿಶ್ವನಾಥ್
ಮೈಸೂರು, ಡಿ 29 : ಸರ್ವಜನ ಪ್ರೇಮಿ ಪೇಜಾವರ ಶ್ರೀ ವಿಶ್ವೇಶ್ವ ತೀರ್ಥರು ಆಗಿದ್ದರು ಎಂದು ಮಾಜಿ ಸಚಿವ ಹೆಚ್ ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದ ಉದ್ದಗಲದಲ್ಲೂ ಅವರ ಹೆಸರಿದೆ. ಅವರ ನಿಧನ ತುಂಬಲಾರದ ನಷ್ಟ ಎಂದು ಅವರು ಶ್ರೀಗಳಿಗೆ ಸಂತಾಪ ಸೂಚಿಸಿದರು. ಶ್ರೀಗಳು ಕನಕದಾಸರ ಬಗ್ಗೆ ಅವರು ಅಪಾರ ಅಧ್ಯಯನ ಮಾಡಿದ್ದರು. ಕನಕಪೀಠ ವಿವಾದವಾದಾಗ ಬೆಂಗಳೂರು ಪ್ರಸ್ ಕ್ಲಬ್ಗೆ ಆಗಮಿಸಿ, ವಿವಾದದ ಬಗ್ಗೆ ಮುಕ್ತವಾಗಿ ಚಚರ್ೆ ಮಾಡಬೇಕು ಎಂದು ಜನರ ಮುಂದೆ ಬಂದಿದ್ದರು. ಆಗ ನಾನು ಇಲ್ಲಿಗೆ ಬರಬಾರದಿತ್ತು ಎಂದು ಮನವಿ ಮಾಡಿದ್ದೆ. ಆದರೂ ಅವರು ನನ್ನೊಂದಿಗೆ ಪ್ರೆಸ್ಕ್ಲಬ್ನಲ್ಲಿ ಚಚರ್ೆ ಮಾಡಿದ್ದರು ಎಂದು ಅವರು ಸ್ಮರಿಸಿಕೊಂಡರು. ತಳಸ್ಪಶರ್ಿ ಸಮುದಾಯಕ್ಕೆ ಅವರು ಕೆಲಸ ಮಾಡಿದ್ದರು.ಹಿಂದೂ ಧರ್ಮದಲ್ಲಿದ್ದರು ಮುಸ್ಲಿಂರನ್ನು ಗೌರವಿಸಿದ್ದರು ಅವರ ಕಾರು ಚಾಲಕ ಕೂಡ ಓರ್ವ ಮುಸ್ಲಿಂ ಆಗಿದ್ದನು. ನಾವು ಎಂದರೆ ಅವರಿಗೆ ಪ್ರೀತಿ. ನಮಗೆ ಕ್ಯಾಬಿನೆಟ್ ದಜರ್ೆಯ ಸ್ಥಾನ ನೀಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎಂದರು. ರಾಜಕಾರಣಿಗಳೆಂದರೆ ಅವರಿಗೆ ಮುಲಾಜಿಲ್ಲರಲಿಲ್ಲ.ಅವರಿಗೆ ಇದ್ದದ್ದು ದೇವರ ಮುಲಾಜು ಮಾತ್ರ. ನಾವು ಪ್ರಜಾತಂತ್ರವಾದಿಗಳು ಎನ್ನುವುದು ಅವರ ನಂಬಿಕೆಯಾಗಿತ್ತು.ರಾಜಕಾರಣಿ ಮತ್ತು ಒಬ್ಬ ಸಂತ ಇಬ್ಬರು ಕೂಡ ಸಾಮಾಜಿಕ ಜವಬ್ದಾರಿಯಲ್ಲಿ ಸಮಾನರು ಎಂದು ಪ್ರತಿಪಾದಿಸಿದ್ದರು.ಹೀಗಾಗಿ ಶ್ರೀಗಳೆಂದರೆ ನನಗೆ ತುಂಬಾ ಗೌರವ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 