ಹೋಳಿಹಬ್ಬ ಶಾಂತಿಯುತವಾಗಿ ಆಚರಿಸಲು ಪಿಎಸ್‌ಐ ಶಿವಾನಂದ ಲಮಾಣಿ ಕರೆ

ಶಿರಹಟ್ಟಿ 20:  ಹೋಳಿ ಹುಣ್ಣಿಮೆಯ ಅಂಗವಾಗಿ ಶಿರಹಟ್ಟಿ ಪಟ್ಟಣದಲ್ಲಿ ಶಾಂತಿ ಸೌಹಾರ್ಧತೆಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೋಳಿ ಹಬ್ಬವನ್ನು ಆಚರಿಸುವಂತೆ ಪಿ ಎಸ್ ಐ ಶಿವಾನಂದ ಲಮಾಣಿ ಕರೆ ನೀಡಿದರು. 

ಅವರು ಪಟ್ಟಣದ ಪೋಲೀಸ್ ಠಾಣೆಯಲ್ಲಿ ನಡೆದ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೋಳಿ ಹುಣ್ಣಿಮೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶಾಂತಿಯುತವಾಗಿ ನಡೆಸೋಣ, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಬ್ಬವನ್ನು ಆಚರಿಸೋಣ, ಯಾರಿಗೂ ನೋವಾಗಂತೆ ಸಮಸ್ಸೆಯಾಗದಂತೆ ಆಚರಿಸೋಣ, ಒಂದು ವೇಳೆ ಯಾವುದೇ ವ್ಯಕ್ತಿ ಅಸಭ್ಯವಾಗಿ ವರ್ತಿಸಿದಲ್ಲಿ ಅಂತಹರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು, ಕೆಮಿಕಲ್ ಯುಕ್ತ ಬಣ್ಣ ಉಪಯೋಗಿಸಬೇಡಿ, ಶಾಲಾ ಮಕ್ಕಳ ಪರೀಕ್ಷೆಗಳಿಗೆ ತೊಂದರೆಯಾಗದ ಹಾಗೆ ಹಲಗೆ ತಮಟೆಗಳನ್ನು ಬಾರಿಸಿ, ಚುನಾವಣಾ ನೀತಿ ಸಂಹಿತೆ ಇರುವುದರಿಂದ ಎಲ್ಲರೂ ಶಾಂತಿ ಸೌಹಾರ್ಧತೆಯಿಂದ ಶಾಂತಿಯುತವಾಗಿ ಹಬ್ಬವನ್ನು ಆಚರಿಸೋಣ ಎಂದು ಪಿ ಎಸ್ ಐ ಶಿವಾನಂದ ಲಮಾಣಿ ಅವರು ಹೇಳಿದರು. 

ಮುತ್ತು ಭಾವಿಮನಿ, ಮಂಜುನಾಥ ಗಂಟಿ, ಸಂತೋಷ ಕುರಿ ಶಿರಹಟ್ಟಿ ಪಟ್ಟಣದಲ್ಲಿ ಆಚರಿಸುವ ವಿಶೇಷ ಹೋಳಿ ಹಬ್ಬ ಆಚರಣೆಯ ಬಗ್ಗೆ ವಿವರಿಸಿ ಹೇಳಿದರು. 

ಹೊನ್ನಪ್ಪ ಶಿರಹಟ್ಟಿ, ದೇವಪ್ಪ ಬಟ್ಟೂರ, ಪರಮೇಶ ಡೊಂಕಬಳ್ಳಿ, ಮೌನೇಶ ಹರಿಜನ, ಫಕ್ಕೀರೇಶ ಲೋಹಾರ, ಪ್ರಕಾಶ ಬಡೆಣ್ಣವರ, ಪೋಲೀಸ್ ಠಾಣೆಯ ಸಿಬ್ಬಂದಿ ವರ್ಗ ಹಾಗೂ ಪಟ್ಟಣ ಅನೇಕ ಹಿರಿಯರು ಇದ್ದರು.