ಪಿಎ. ತಪ್ಪು ಮಾಡಿದ್ದಾರೆ: ಪುಟ್ಟರಂಗಶೆಟ್ಟಿ ಪರ ಸಚಿವ ಶಿವಳ್ಳಿ

ಲೋಕದರ್ಶನ ವರದಿ

ಕೊಪ್ಪಳ 13: ಸಚಿವರುಗಳ ಆಪ್ತ ಸಹಾಯಕರು ಮಾಡಿದ ತಪ್ಪು ಕೆಲಸಕ್ಕೆ ಪಾಪ ಆ ಸಚಿವರು ಏನು ಮಾಡಬೇಕು. ಆ ಪ್ರಕರಣದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ತಪ್ಪು ಏನೂ ಇಲ್ಲ ಎಂದು ಪೌರಾಡಳಿತ ಸಚಿವ ಸಿ.ಎಸ್. ಶಿವಳ್ಳಿ ಸಚಿವ ಪುಟ್ಟರಂಗಶೆಟ್ಟಿ ಪರ ಬ್ಯಾಟಿಂಗ್ ಮಾಡಿದರು.

ಅವರು ನಗರದಲ್ಲಿ  ಶನಿವಾರ ಸುದ್ದಿಗೋಷ್ಠಿಯಲ್ಲಿ ವಿಧಾನಸೌಧದಲ್ಲಿ ಸಿಕ್ಕಿರುವ 26 ಲಕ್ಷ ಹಣದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಹಣ ದೊರೆತ ಪ್ರಕರಣದ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಸತ್ಯ ಗೊತ್ತಾಗಲಿದೆ. ತಪ್ಪಿತಸ್ಥರ ಮೇಲೆ ಕ್ರಮ ಆಗುತ್ತದೆ. ಪಿಎ ಸಚಿವರಿಗೆ ಕೊಡಲು ತಂದ ಹಣ ಎಂದು ಹೇಳಿರುವ ಬಗ್ಗೆ ಪೊಲೀಸರು ಹೇಳಿಲ್ಲ, ಕೇವಲ ಆ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಅಷ್ಟೆ ತನಿಖೆ ಪೂರ್ಣಗೊಂಡ ನಂತರ ಸತ್ಯ ಹೊರಬರಲಿದೆ. ಇದರಲ್ಲಿ ಸಚಿವರ ತಪ್ಪು ಇಲ್ಲ ಎಂದು ಸಮಜಾಯಿಷಿ ನೀಡಿದರು.

ಸಮ್ಮಿಶ್ರ ಸಕರ್ಾರ ಯಾವುದೇ ಕಾರಣಕ್ಕೂ ಮುರಿದೂ ಬೀಳುವುದಿಲ್ಲ. 6 ತಿಂಗಳಿಂದ ಬಿಜೆಪಿಯವರು ಈ ಸಕರ್ಾರ ಬೀಳುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಇಂದು ಬೀಳುತ್ತೆ, ನಾಳೆ ಬೀಳುತ್ತೆ, 24 ಗಂಟೆಯಲ್ಲಿ ಸಕರ್ಾರ ಬೀಳುತ್ತೆ ಎಂದು ಹೇಳುತ್ತಾರೆ. ಆದರೆ, ಸಕರ್ಾರ ಬೀಳೋದಿಲ್ಲ. ಐದು ವರ್ಷ ಪೂರ್ಣ ಆಡಳಿತ ನಡೆಸುತ್ತದೆ. ಈಗ ಮರಳಿ ಚುನಾವಣೆಗೆ ಹೋಗಲು ಯಾವ ಶಾಸಕರೂ ತಯಾರಿಲ್ಲ. ಪುನಃ ಚುನಾವಣೆಗೆ ಹೋಗುವುದು ಅಂದರೆ ಅದೇನು ಮಕ್ಕಳಾಟ ಅಲ್ಲ. ಜನರು ನಮಗೆ ಐದು ವರ್ಷ ಸೇವೆ ಮಾಡಿ ಎಂದು ಆಯ್ಕೆ ಮಾಡಿ ಕಳಿಸಿದ್ದಾರೆ. ಆಫರ್ಗಳು ಬರುತ್ತವೆ ಎಂದು ಹೋಗಬಾರದು. ನನಗೂ ಹಿಂದೆ ಆಫರ್ ಬಂದಿತ್ತು. ಅದನ್ನು ಈ ಹಿಂದೆಯೇ ಹೇಳಿದ್ದೆ. ಯಾವುದೇ ಆಫರ್ ಬಂದರೂ ನಮ್ಮ ಯಾವ ಶಾಸಕರು ಹೋಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರನ್ನು ನಾವು ಮುಖ್ಯಮಂತ್ರಿ ಎಂದು ಆಯ್ಕೆ ಮಾಡಿದ್ದೇವೆ. ಸಮ್ಮಿಶ್ರ ಸಕರ್ಾರದಲ್ಲಿ ಸಣ್ಣಪುಟ್ಟ ಲೋಪದೋಷಗಳು ಇರುತ್ತವೆ. ಅದನ್ನು ಸರಿಪಡಿಸಿಕೊಂಡು ಹೋಗುತ್ತೇವೆ. ಅದಕ್ಕಾಗಿ ಸಮನ್ವಯ ಸಮಿತಿ ಇದೆ ಎಂದರು.

ನಗರಸಭೆ ಹಾಗೂ ಸ್ಥಳೀಯಾಡಳಿತದ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಗೆ ಸಂಬಂಧಿಸಿ ಅಜರ್ಿ ನ್ಯಾಯಾಲಯದಲ್ಲಿದೆ. ಕೋಟರ್್ ನೀಡುವ ತೀಪರ್ಿಗೆ ಸಕರ್ಾರ ಬದ್ಧವಾಗಿದೆ. ಬೇರೆ ಇಲಾಖೆಗೆ ಹೋಗಿರುವ ನಮ್ಮ ಇಲಾಖೆಯ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ಪೌರಕಾಮರ್ಿಕರ ಸಮಸ್ಯೆಗಳು ನಮಗೆ ಅರ್ಥವಾಗಿವೆ. ಪೌರಕಾಮರ್ಿಕರ ವಿಷಯವಾಗಿ ಅಧಿಕಾರಿಗಳೊಂದಿಗೆ ಚಚರ್ೆ ಮಾಡಲಾಗಿದೆ.  ಅವರಿಗೆ ನ್ಯಾಯ ಸಿಗುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಸೂಕ್ತ ನಿಧರ್ಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ರಾಜ್ಯಾದ್ಯಂತ ಫಾಮರ್್ ನಂ-3 ನೀಡುವ ಬಗ್ಗೆ ಸಾಕಷ್ಟು ಸಮಸ್ಯೆಗಳಿರುವುದು ನಮಗೂ ಮನವರಿಕೆಯಾಗಿದೆ. ಬರುವ ದಿನಗಳಲ್ಲಿ ಅವುಗಳನ್ನೆಲ್ಲ ಸರಿಪಡಿಸಿ ಜನತೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ್, ರಾಜಶೇಖರ್ ಹಿಟ್ನಾಳ್, ಅಮ್ಜದ್ ಪಟೇಲ್, ಸುರೇಶ್ ಭೂಮರಡ್ಡಿ. ಎಸ್.ಬಿ. ನಾಗರಳ್ಳಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.