ಬ್ಯಾಡಗಿ 02 : ಗುಣಮಟ್ಟದ ರಸ್ತೆಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರ ಸಹಕಾರಿಯಾಗಲಿವೆ ಎಂದು ಶಾಸಕ ಬಸವರಾಜ್ ಶಿವಣ್ಣನವರು ಅಭಿಪ್ರಾಯಪಟ್ಟರು. ತಾಲೂಕಿನ ಗುಡ್ಡದ ಮಲ್ಲಾಪುರದಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ ಸುಮಾರು 1ಕೋಟಿ75 ಲಕ್ಷ ರೂ ವೆಚ್ಚದಲ್ಲಿ ಗುಡ್ಡದ ಮಲ್ಲಾಪುರ ಅತ್ತಿಕಟ್ಟಿ ರಸ್ತೆ ಸುಧಾರಣಾ ಸುಧಾರಣೆಗೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡುವ ಮೂಲಕ ಮಾತನಾಡಿದವರು.
ಗ್ರಾಮಸ್ಥರ ಮನವಿಯಂತೆ ಸುಮಾರು ವರ್ಷಗಳಿಂದ ಹದಗೆಟ್ಟ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಪ್ರತಿಯೊಬ್ಬರು ಸಹಕಾರ ನೀಡಿದಾಗ ಮಾತ್ರ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಲ್ಲ ಸಮುದಾಯಗಳು ವಾಸ ಮಾಡುವ ಗ್ರಾಮದಲ್ಲಿ ಜಾತ್ಯತೀತವಾಗಿ ಅಭಿವೃದ್ಧಿ ಕಾರ್ಯ ಮಾಡಲಾಗುವುದು. ಕಾಮಗಾರಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಕ್ಷೇತ್ರದ ವ್ಯಾಪ್ತಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜನಗೌಡ ಲಿಂಗನಗೌಡ್ರ.ಶಿವನಗೌಡ ಪಾಟೀಲ್ ನಾಗರಾಜ ಆನ್ವೇರಿ. ಚನ್ನಬಸಪ್ಪ ಹುಲ್ಲತ್ತಿ.ಹುಚ್ಚಯ್ಯಾ ಚೌಕಿಮಠ.ಮುಕಪ್ಪ ಮೂಡೆರ. ಕೆಂಚಪ್ಪ ಗುಡ್ಡದ ಮಲ್ಲಾಪುರ.ಇಸ್ಮಾಯಲ ಗುಡ್ಡದ ಮಲ್ಲಾಪುರ . ಮಾರುತಿ ಕೆಂಪೇಗೌಡರ.ಪರಮೇಶ ಚಿಕ್ಕಳ್ಳಿ.ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.