ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಸಾಧಿಸಿದ ಪಿ.ಇ.ಎಸ್ ಕಾಲೇಜ

ಸಿಂದಗಿ 12 : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಪಿ.ಇ.ಎಸ್‌. ಕಾಲೇಜಿನ ದ್ವಿತೀಯ ಪಿ.ಯು.ಸಿ. ಫಲಿತಾಂಶವು ಶೇ. 100 ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 308 ವಿದ್ಯಾರ್ಥಿಗಳಲ್ಲಿ 117 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ, 169

ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.  

ಕಲಾ ವಿಭಾಗದಲ್ಲಿ ಕು. ಅಮೇರಾಕೌಸರ್ ತರಫದಾರ 586 (97.66ಅ) ಪ್ರಥಮ, ಕು. ಮಹೇಶ ಚಂದಾನವರ 584 (97.33ಅ) ದ್ವಿತೀಯ, ಕು. ನಿಂಗಮ್ಮ ನಾಟೀಕಾರ 578 (96.33ಅ) ಹಾಗೂ ಸುಜಾತಾ ಗಡೆದ 578 (96.33ಅ) ತೃತೀಯ ಸ್ಥಾನ ಪಡೆದಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಕು. ಭಾಗ್ಯಶ್ರೀ ಕಲ್ಲೂರ 581 (96.83ಅ) ಪ್ರಥಮ, ಕು. ದಾನಮ್ಮ ಅಗಸರ 578 (96.33ಅ) ದ್ವಿತೀಯ, ಸಾನಿಯಾ ತಾಂಬೋಳಿ 576 (96.00ಅ) ತೃತೀಯ ಸ್ಥಾನ ಪಡೆದಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಕು. ರಾಜೇಶ್ವರಿ ಪೂಜಾರಿ 580 (96.66ಅ) ಪ್ರಥಮ, ಕು. ಲಕ್ಷೀ ಬಿರಾದಾರ 573 (95.50ಅ) ದ್ವಿತೀಯ, ಕು. ಮಹಾನಂದ ಬಿರಾದಾರ 572 (95.33ಅ) ತೃತೀಯ ಸ್ಥಾನ ಪಡೆದಿದ್ದಾರೆ. 

ವಿವಿಧ ವಿಷಯಗಳಲ್ಲಿ 14 ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿಗಳಾದ ಆಯ್‌.ಬಿ. ಬಿರಾದಾರ, ಮಾರ್ಗದರ್ಶಕರಾದ ಕೆ.ಎಚ್‌. ಸೋಮಾಪೂರ, ಪ್ರಾಚಾರ್ಯರಾದ ಆರ್‌.ಬಿ. ಗೋಡಕರ ಹಾಗೂ ಉಪನ್ಯಾಸಕರು ಶುಭ ಹಾರೈಸಿದ್ದಾರೆ.