ಉಗಾರ ಇಥೆನಾಲ ಘಟಕ ಸ್ಥಗಿತ ಆದೇಶ..! ಬೀದಿಗಿಳಿದು ಕಾರ್ಮಿಕರ ಹೋರಾಟ..! ತಹಶೀಲ್ದಾರರಿಗೆ ಮನವಿ..!!

ಉಗಾರ ಇಥೆನಾಲ ಘಟಕ ಸ್ಥಗಿತ ಆದೇಶ..! ಬೀದಿಗಿಳಿದು ಕಾರ್ಮಿಕರ ಹೋರಾಟ..! ತಹಶೀಲ್ದಾರರಿಗೆ ಮನವಿ..!! Order issued to shut down the Ugar ethanol plant! Workers take to the streets in protest! Memorandum

ಲೋಕದರ್ಶನ ವರದಿ 

ಕಾಗವಾಡ 04 : ತಾಲೂಕಿನ ಉಗಾರ ಖುರ್ದ ಸಕ್ಕರೆ ಕಾರ್ಖಾನೆಯ ಇಥೆನಾಲ್ ಘಟಕವನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಗಿತಗೊಳಿಸಬೇಕೆಂದು ಆದೇಶ ನೀಡಿದ್ದು, ರೊಚ್ಚಿಗೆದ್ದ ಕಾರ್ಮಿಕರು ಮತ್ತು ರೈತರು ಸೇರಿ ಶುಕ್ರವಾರ ದಿ. 04 ರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರ ಮಧ್ಯಪ್ರವೇಶ ಮಾಡಿ, ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ, ತಹಶೀಲ್ದಾರ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. 

ಉಗಾರ ಶುಗರ ವರ್ಕರ​‍್ಸ‌ ಯುನಿಯನ್ ಮತ್ತು ಸ್ಥಳೀಯ ರೈತರು ಸೇರಿ ಮಾಲಿನ್ಯ ನಿಯಂತ್ರಣ ಮಂಡಳಿಯ ವಿರುದ್ಧ ಘೋಷಣೆ ಕೂಗುತ್ತ, ಪಟ್ಟಣದ ಜೋಗ್ ವೃತ್ತದಿಂದ ಚೆನ್ಮಮ್ಮಾ ವೃತ್, ಬಸವೇಶ್ವರ್ ವೃತ್‌ದ ಮುಖಾಂತರ ಪರಸಭೆ ಕಾರ್ಯಾಲಯಕ್ಕೆ ತೆರಳಿ ಮುಖ್ಯಾಧಿಕಾರಿ ಮಹಾಂತೇಶ ಕವಲಾಪೂರೆ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಬಸವೇಶ್ವರ ವೃತ್ತಕ್ಕೆ ಆಗಮಿಸಿ, ಪ್ರತಿಭಟನೆ ಮುಂದುವರೆಸಿ, ಉಪತಹಶೀಲ್ದಾರ ಅಣ್ಣಾಸಾಬ ಕೋರೆ, ಶಿರಸ್ತೆದಾರ ಎಂ.ಆರ್‌. ಪಾಟೀಲ ಅವರಿಗೆ ಮನವಿ, ಸಲ್ಲಿಸಿದರು.

ಈ ವೇಳೆ ಉಗಾರ ಶುಗರ ವರ್ಕರ​‍್ಸ‌ ಯುನಿಯನ್‌ನ ಉಪಾಧ್ಯಕ್ಷ ಎಸ್‌.ಎಂ. ಕಾಂಬಳೆ, ಕಾರ್ಯದರ್ಶಿ ಎ.ಎಚ್‌. ನಾವಲಗೇರ ಮತ್ತು ರಮೇಶ ಕಾಂಬಳೆ ಮಾತನಾಡಿ, ರೈತರು ಹಾಗೂ ಕಾರ್ಮಿಕರಿಗೆ ಕಾಮಧೇನು ಆಗಿರುವ, 84 ವರ್ಷ ಇತಿಹಾಸ ಹೊಂದಿರುವ ಹೆಸರಾಂತ ಉಗಾರ ಸಕ್ಕರೆ ಕಾರ್ಖಾನೆಯು ಸರ್ಕಾರದ ನಿಯಮಗಳ ಪಾಲನೆ ಮಾಡಿಯೇ ಇಥೆನಾಲ್ ಘಟಕ ಪ್ರಾರಂಭಿಸಿದ್ದಾರೆ.

ಆದರೇ ಕೆಲ ಪರಿಸರವಾದಿಗಳ ಅಟ್ಟಹಾಸದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಸಾವಿರಾರು ಕಾರ್ಮಿಕರು ಮತ್ತು ರೈತರು ಬೀದಿಗೆ ಬೀಳಲಿದ್ದಾರೆ. ಸರ್ಕಾರ ರೈತರಿಗೆ ಮತ್ತು ಕಾರ್ಮಿಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಮತ್ತು ಇದು ನಮ್ಮ ಅಸ್ಥಿತ್ವದ ಪ್ರಶ್ನೆಯಾಗಿದ್ದು, ಸರ್ಕಾರ ಮತ್ತು ಮಾಲಿನ್ಯ ಮಂಡಳಿ ತಮ್ಮ ಬೇಡಿಕೆಗೆ ಈಡೇರಿಸದಿದ್ದಲ್ಲಿ ಮುಂದಿನ ದಿನ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಉಗಾರ ಶುಗರ ವರ್ಕರ​‍್ಸ‌ ಯುನಿಯನ್‌ನ ಅಧ್ಯಕ್ಷ ಕೆ.ಎಂ. ಕರಿಗಾರ, ಉಪಾಧ್ಯಕ್ಷ ಎಸ್‌.ಎಂ. ಕಾಂಬಳೆ, ಕಾರ್ಯದರ್ಶಿ ಎ.ಎಚ್‌. ನಾವಲಗೇರ, ಜಂಟಿ ಕಾರ್ಯದರ್ಶಿ ಎನ್‌.ಎನ್‌. ಟೋಪಿವಾಲೆ, ಖಜಾಂಜಿ ಎಸ್‌.ಎನ್, ಪೂಜಾರಿ, ಸದಸ್ಯರಾದ ಎ.ಎ. ಕಾಮತ, ಎಂ.ಜಿ. ಉಳಾಗಡ್ಡಿ, ಎ.ಬಿ. ಮಾಲಿ, ಪಿ.ವ್ಹಿ. ಜೋಶಿ, ವಕೀಲರಾದ ರಾಹುಲ ಕಟಗೇರಿ, ವಿನಾಯಕ ಕಾಂಬಳೆ, ಸಚೀನ ಜಗತಾಪ ಸೇರಿದಂತೆ ಸಾವಿರಾರು ಕಾರ್ಮಿಕರು, ರೈತರು ಪ್ರತಿಭನಟೆಯಲ್ಲಿ ಪಾಲ್ಗೊಂಡಿದ್ದರು.