ಆಪರೇಷನ್ ಸಿಂಧೂರ: ಸಂಭ್ರಮಾಚರಣೆ

Operation Sindoora: Celebration

ತಾಳಿಕೋಟಿ 07: ಭಾರತೀಯ ಸೇನೆಯು "ಆಪರೇಷನ್ ಸಿಂಧೂರ" ಮೂಲಕ ಪಾಕಿಸ್ತಾನದ ಉಗ್ರರ 9 ನೆಲೆಯ ಮೇಲೆ ಮಧ್ಯ ರಾತ್ರಿ ಐತಿಹಾಸಿಕ ಏರ್ ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ದೇಶಭಕ್ತ ಯುವಕರಿಂದ ಸಂಭ್ರಮಾಚರಣೆ ನಡೆಯಿತು.  

ಪಟ್ಟಣದ ನೂರಾರು ದೇಶಭಕ್ತ ಯುವಕರು ಬುಧವಾರ ಪುರಸಭೆ ಸದಸ್ಯ ಜೈ ಸಿಂಗ್ ಮೂಲಿಮನಿ ಇವರ ನೇತೃತ್ವದಲ್ಲಿ ರಜಪೂತ ಬಡಾವಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿದರು. ಯುವಕರು ತಮ್ಮ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಪರ ಘೋಷಣೆ ಹೇಳಿದರು. ಭಾರತ ಮಾತಾ ಕಿ ಜೈ, ವಂದೇ ಮಾತರಂ ಘೋಷಣೆಗಳು ನಾಲ್ಕು ದಿಕ್ಕುಗಳಲ್ಲಿಯೂ ಮೊಳಗಿದವು. ಬೈಕ್ ರ್ಯಾಲಿಯೂ ಪಟ್ಟಣದ ಬಸವೇಶ್ವರ ವೃತ್ತಕ್ಕೆ ತಲುಪಿ ಅಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಭಾರತದ ಪರ ಘೋಷಣೆಗಳನ್ನು ಹೇಳಿ ಸಂಭ್ರಮಿಸಿದರು.  

ಸಂಭ್ರಮಾಚರಣೆಯಲ್ಲಿ ಪುರಸಭೆ ಸದಸ್ಯ ಜೈ ಸಿಂಗ್ ಮೂಲಿಮನಿ, ಆಕಾಶ ಪಿಂಪಳೆ, ಸಂಗಮೇಶ ಮದರಕಲ್ಲ, ಸುಮಿತ್ ಬಿಜಾಪುರ, ನವೀನ ಗೌಡಗೇರಿ, ನದೀಮ ಕಡು, ರಾಹುಲ ಮೂಲಿಮನಿ, ಸುನೀಲ ಬಿಜಾಪುರ, ಹೃಷಿಕೇಶ ಗೊಟಗುಣಕಿ, ರವಿ ಕೋಳಕೂರ ಮತ್ತಿತರರು ಇದ್ದರು.