ತಾಲೂಕಿನ ಕುನ್ನೂರ, ಮಡ್ಲಿ, ದುಂಡಸಿ ಗ್ರಾಮಗಳಲ್ಲಿ ಬಹಿರಂಗ ಪ್ರಚಾರ

ಶಿಗ್ಗಾವಿ 05: ಮೋದಿ ಪ್ರಧಾನಿಯಾಗಿ ದೇಶವನ್ನು ಮತ್ತು ದೇಶದ ಆರ್ಥಿಕತೆಯನ್ನು ಸುಭದ್ರವಾಗಿಟ್ಟು ಆಡಳಿತವನ್ನು ನಡೆಸುತ್ತಿದ್ದಾರೆ, ಬೋಗಸ್ ಗ್ಯಾರಂಟಿಗಳಿಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಆರ್ಥಿಕತೆಯನ್ನು ದಿವಾಳಿ ಅಂಚಿಗೆ ತಂದಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು. 

ತಾಲೂಕಿನ ಕುನ್ನೂರ, ಮಡ್ಲಿ, ದುಂಡಸಿ ಗ್ರಾಮಗಳಲ್ಲಿ ಬಹಿರಂಗ ಪ್ರಚಾರ ಮಾಡಿ ಹೊಸೂರ ಗ್ರಾಮದಲ್ಲಿ ಮಾತನಾಡಿದ ಅವರು, ಒಂದಿಷ್ಟು ಬೆಲೆಗಳನ್ನು ಏರಿಸಿ, ನೀಡುತ್ತಿರುವ ಸಬ್ಸಿಡಿಗಳನ್ನು ನಿಲ್ಲಿಸಿ, ಬೇರೆ ರೂಪದಲ್ಲಿ ನಿಮ್ಮಿಂದಲೇ ಹಣ ಕಿತ್ತುಕೊಂಡು ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ನೀಡುತ್ತಿರುವ ಕಾಂಗ್ರೆಸ್ ಗ್ಯಾರಂಟಿಗಳು ಬೋಗಸ್ಸ್‌ ಯೋಜನೆಗಳಾಗಿವೆ. 

ಮೋದಿಯವರು ನೀಡುವ ಯೋಜನೆಗಳು ವಿಶೇಷವಾಗಿದ್ದು, ಯಥೆನಾಲ್ ಉತ್ಪಾದನೆ ಪ್ರಾರಂಭಿಸಿ ರೈತರ ಬೆಳೆಗೆ ಹೆಚ್ಚಿನ ಬೆಲೆ ಬರುವಂತೆ ಮಾಡಿ, ದೇಶಕ್ಕೆ ತೈಲದ ಹೊರೆಯನ್ನು ಕಡಿಮೆ ಮಾಡಿದ್ದಾರೆ. ರೈತರು ಸೋಲಾರ್ ಅಳವಡಿಸಿಕೊಂಡು ಕರೆಂಟ್ ಉತ್ಪಾದಿಸಲು ಹೆಚ್ಚೆನ ಪ್ರೋತ್ಸಾಹ ಕೊಟ್ಟು, ಅದನ್ನು ಖರೀಧಿಸಿ ಅದರ ಲಾಭ ರೈತರಿಗೆ ಸಿಗುವಂತೆ ಮಾಡಿ, ದೇಶಕ್ಕೆ ವಿದ್ಯೂತ್ ಕೊರತೆಯಾಗದಂತೆ ನೀಡುತ್ತಿದ್ದಾರೆ, ಸಂಜೀವಿನಿ ಯೋಜನೆಯ ಮೊಲಕ ದುಡಿಯುವ ಸ್ತ್ರೀಯರಿಗೆ ಕೆಲಸ ಕೊಟ್ಟು 3ಕೋಟಿ ಸ್ತ್ರೀಯರನ್ನು ಲಕ್ಪತಿಗಳನ್ನಾಗಿ ಮಾಡಿದ್ದಾರೆ. ಹೀಗೆ ಮೋದಿಯವರ ಪ್ರತಿಯೊಂದು ಯೋಜನೆಗಳು ಶಾಸ್ವತವಾಗಿ ದೇಶದ ಅಭಿವೃದ್ದಿಗೆ ಪೂರಕವಾದ ಯೋಜನೆಗಳಾಗಿದ್ದು, ಕಾಂಗ್ರೆಸ್ ಯೋಜನೆಗಳು ಚುನಾವಣಾ ಗಿಮಿಕ್ ಆಗಿವೆ ಎಂದರು. 

ಮುರಗೇಶ ನಿರಾಣಿ ಮಾತನಾಡಿ, ಮುಂದಿನ 25 ವರ್ಷಗಳಲ್ಲಿ ಜಗತ್ತಿನ ಭೂಪಟದಲ್ಲಿ ಭಾರತ ಪ್ರಥಮ ಸ್ಥಾನದಲ್ಲಿ ನಿಲ್ಲುವಂತೆ ಮಾಡಲು ಯೋಜನೆಗಳನ್ನು ಮೋದಿಯವರು ಸಿದ್ದಗೊಳಿಸಿದ್ದಾರೆ, ಕಾಂಗ್ರೆಸ್ ವಿರೋದ ಪಕ್ಷದಲ್ಲು ಕುಳಿತುಕೊಳ್ಳಲು ಶಕ್ತಿಯನ್ನು ಕಳೆದುಕೊಂಡಿದ್ದು, ಜೋಶಿಯರು ಧಕ್ಷಿಣ ಭಾರತದ ಧ್ವನಿಯಾಗಿ ಕೆಲಸ ಮಾಡಿ, ಧಾರವಾಡ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ದಿಮಾಡಲಿದ್ದು, ಈ ಕ್ಷೇತ್ರದ ಜನತೆ ಬಾರಿ ಬಹುಮತದಿಂದ ಅವರನ್ನು ಆರಿಸಿ ತರಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ನರಹರಿ ಕಟ್ಟಿ, ಡಾ. ಮಲ್ಲೇಶಪ್ಪಾ ಹರಿಜನ, ಚನ್ನಪ್ಪಾ ಬಿಂದ್ಲಿ, ಗಂಗಣ್ಣಾ ಸಾತಣ್ಣವರ, ಕಾಳಪ್ಪಾ ಬಡಿಗೇರ, ಶಿವಾನಂದ ಕುನ್ನೂರ, ಶಂಕರಗೌಡ ಪೋಲಿಸಗೌಡ್ರ, ನಾಗರಾಜ ಸೂರಗೊಂಡ ಉಶಾ ಬಿಳಿಕುದುರೆ ಇತರರಿದ್ದರು.