ನೀರು ಸಂರಕ್ಷಣೆ ಕುರಿತು ಒಂದು ದಿನದ ಜಾಗೃತಿ ತರಬೇತಿ ಕಾರ್ಯಕ್ರಮ

ಗದಗ 25: ಐ.ಸಿ.ಎ.ಆರ್, ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಹಾಗೂ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಐ.ಸಿ.ಎ.ಆರ್,  ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯಲ್ಲಿ ಇಂಧನ ಸಾಮರ್ಥ್ಯ ಪಂಪ್‌ಸೆಟ್‌ಗಳು ಹಾಗೂ ನೀರು ಸಂರಕ್ಷಣೆ ಕುರಿತು ಒಂದು ದಿನದ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ದಿ.24 ರಂದು ಹಮ್ಮಿಕೊಳ್ಳಲಾಯಿತು.  

 ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ್ಘ ಮುಖ್ಯಸ್ಥರಾದ ಡಾ. ಸುಧಾ ವ್ಹಿ. ಮಂಕಣಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ನೀರಾವರಿ ಇರುವ ರೈತರು ನೀರನ್ನು ಪೋಲು ಮಾಡದೇ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಹಾಗೂ ನೀರಾವರಿಗೆ ಹೆಚ್ಚು ದಕ್ಷತೆ ಉಳ್ಳ ವಿದ್ಯುತ್ ಪಂಪುಗಳನ್ನು ಅಳವಡಿಸಬೇಕು ಎಂದು ಅವರು ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಯಾದ ಡಾ. ವಿನಾಯಕ ನಿರಂಜನ್, ರೈತರಿಗೆ ತರಬೇತಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದರು.  

ವಿದ್ಯಾಸಾಗರ, ಕೋರಮಂಡಲ್ ಇಂಟರ್‌ನ್ಯಾಶನಲ್ ಲಿಮಿಟೆಡ್ ಇವರು ಮಣ್ಣಿನ ಆರೋಗ್ಯ ಕಾಪಾಡಲು ಮಣ್ಣಿನ ಪೋಷಕಾಂಶಗಳ ಪರೀಕ್ಷೆ ಮಾಡಿಸಿ ಅದರ ಅನುಗುಣವಾಗಿ ಗೊಬ್ಬರಗಳನ್ನು ಬಳಸಬೇಕು ಎಂದು ಅಭಿಪ್ರಾಯ ಪಟ್ಟರು.  

ಎನ್‌.ಎಚ್ ಭಂಡಿ ಇವರು ಮಾತನಾಡಿ ಮಣ್ಣು ಮತ್ತು ನೀರು ಬಹು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲಗಳಾಗಿದ್ದು ರೈತರು ಇವೆರಡೂ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ಪ್ರಗತಿಪರ ರೈತರಾದ ನಾಗನಗೌಡ ಕಗದಾಳ ಇವರು ಅತಿಥಿಗಳಾಗಿ ಭಾಗವಹಿಸಿದ್ದರು.  

ಡಾ. ವಿನಾಯಕ ನಿರಂಜನ್ ಸ್ವಾಗತಿಸಿ ನಿರೂಪಿಸಿದರು. ಹೇಮಾವತಿ ಹಿರೇಗೌಡರ್ ವಂದಿಸಿದರು. ಉದ್ಘಾಟನಾ ಸಮಾರಂಭದ ನಂತರ ತಾಂತ್ರಿಕ ಅಧಿವೇಶನಗಳನ್ನು ಹಮ್ಮಿಕೊಳ್ಳಲಾಯಿತು. ವಿಜ್ಞಾನಿಗಳಾದ ಡಾ. ವಿನಾಯಕ ನಿರಂಜನ್, ಎನ್‌.ಎಚ್‌.ಭಂಡಿ ಹಾಗೂ ಶ್ರೀಮತಿ ಹೇಮಾವತಿ ಹಿರೇಗೌಡರ್ ಇವರು ತರಬೇತಿಗೆ ಸಂಭಂಧಿಸಿದಂತೆ ವಿವಿಧ ವಿಷಯಗಳನ್ನು ರೈತರಿಗೆ ಮಂಡಿಸಿದರು. ನಾಗನಗೌಡ ಕಗದಾಳ ಇವರು ತಮ್ಮ ಕೃಷಿ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. ತರಬೇತಿ ಕಾರ್ಯಕ್ರಮದಲ್ಲಿ 58 ಕ್ಕೂ ಹೆಚ್ಚು ರೈತರು, ರೈತ ಮಹಿಳೆಯರು ಹಾಗೂ ಪಂಪ್‌ಸೆಟ್ ತಂತ್ರಜ್ಞರು ಭಾಗವಹಿಸಿದ್ದರು.