15ರಂದು ಹುಕ್ಕೇರಿ ತಾಲೂಕಾ ಮಟ್ಟದ ಗಾಳಿಪಟ ಸ್ಪರ್ಧೆ

ಸಂಕೇಶ್ವರ 11: 5 ನೇ ವರ್ಷದ ಗಾಳಿಪಟ ಸ್ಪರ್ಧೆಯನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಪ್ರಸಕ್ತ ಸಾಲಿನಲ್ಲಿ ಜನೇವರಿ 15ರಂದು ಹುಕ್ಕೇರಿ ತಾಲೂಕಾ ಮಟ್ಟದ ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಏರಿ​‍್ಡಸಿದ್ದಾರೆ,  

ಸ್ಪರ್ಧೆಯ ನಿಯಮಗಳ ಬಗ್ಗೆ ಪವನ ಕಣಗಲಿ ಫೌಂಡೇಶನ ಪ್ರಾಯೋಜಕತ್ವದಲ್ಲಿ ಕಣಗಲಿ ಇವರು ಲೋಕದರ್ಶನ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಸ್ಪರ್ಧಿಗಳು ಗಾಳಿಪಟ ಮನೆಯಿಂದಲೇ ತಯಾರಿಸಿಕೊಂಡು ಬರಬೇಕು, ಗಾಳಿಪಟ ತಯಾರಿಸುವ ಹಾಗೂ ಹಾರಿಸುವ ಎರಡೂ ಸ್ಪರ್ಧೆಗಳಿಗೆ ಪ್ರತ್ಯೇಕ ಬಹುಮಾನ, ಸ್ಪರ್ಧೆ 8 ರಿಂದ 10ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ, ಒಂದು ತಂಡದಲ್ಲಿ ಕಡ್ಡಾಯವಾಗಿ ಇಬ್ಬರು ಭಾಗವಹಿಸಲೇಬೇಕು (ಸ್ಪರ್ಧಿ ಹಾಗೂ ಸಹಾಯಕ) ಗಾಳಿಪಟ ತಯಾರಿಸುವ ಸ್ಪರ್ಧೆಯಲ್ಲಿ ಪ್ರದರ್ಶಿಸಿದ ಗಾಳಿಪಟವನ್ನು ಮಾತ್ರ ಹಾರಿಸಲು ಅವಕಾಶ, ವಿದ್ಯಾರ್ಥಿಗಳು ಸ್ವತಃ ತಾವೇ ಗಾಳಿಪಟ ತಯಾರಿಸಬೇಕು, (ಪ್ಲಾಸ್ಟಿಕ ಬಳಿಸುವಂತಿಲ್ಲ), ಗಾಳಿಪಟ ತಯಾರಿಸುವ ಸ್ಪರ್ಧೆಯಲ್ಲಿ ಗಾತ್ರ, ಬಣ್ಣ, ಆಕರ್ಷಣೆ, ಸೂತ್ರ ಹಾಗೂ ಸ್ಪರ್ಧಿಗಳು ಒದಗಿಸುವ ಗಾಳಿಪಟ ಹಾರಿಸುವಿಕೆಯ ಹಿನ್ನೆಲೆ, ವೈಜ್ಞಾನಿಕ ಮಾಹಿತಿಗಳನ್ನು ಪರಿಗಣಿಸಲಾಗುತ್ತದೆ, ಗಾಳಿಪಟದ ಗಾತ್ರ ಆಕಾರಗಳಿಗೆ ಯಾವುದೇ ಮಿತಿ ಇರುವುದಿಲ್ಲಾ ಎಂದು ಹೇಳಿದರು.