ಅಧಿಕಾರಿಗಳ ದಾಳಿ: ಅಕ್ರಮ ಪಡಿತರ ಅಕ್ಕಿ ವಶಕ್ಕೆ

Officials raid: Illegal ration rice seized

ಅಧಿಕಾರಿಗಳ ದಾಳಿ: ಅಕ್ರಮ ಪಡಿತರ ಅಕ್ಕಿ ವಶಕ್ಕೆ  

ಜಮಖಂಡಿ 04: ತಾಲೂಕಿನ ಅಡಿಹುಡಿ ಗ್ರಾಮದಲ್ಲಿ ಸರಕಾರದ ಪಡಿತರ ಅಕ್ಕಿ ಕಾಳಗಳನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಅಕ್ರಮವಾಗಿ ಸಂಗ್ರಹಿಸಿ ಇಡಲಾದ ಅಂಗಡಿಯ ಮೇಲೆ ಆಹಾರ ಇಲಾಖೆ ಹಾಗೂ ಪೋಲಿಸ್ ಇಲಾಖೆ ದಾಳಿ ನಡೆಸಿ ಅಕ್ಕಿಯನ್ನು ತುಂಬಿ ಚೀಲಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. 

ಅಡಿಹುಡಿ ಗ್ರಾಮದ ಪರುಶರಾಮ ಮಾರುತಿ ಪೋತ ಅಕ್ರಮವಾಗಿ ಸಂಗ್ರಹಿಸಿ ಇಡಲಾದ ಪಡಿತರ ಅಕ್ಕಿ ಕಾಳುಗಳನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಹೆಚ್ಚಿನ ಬೆಲೆಗೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದಿದರು ಎನ್ನಲಾಗಿದೆ. 

ಶ್ರೀಮಂತ ಶಿವಪ್ಪ ಕರಂಡಿ ಅವರ ಅಂಗಡಿಯನ್ನು ಬಾಡಿಗೆ ಪಡೆದುಕೊಂಡಿದ ಪರುಶರಾಮ ಮಾರುತಿ ಪೋತ  ಸರಿಸುಮಾರು 40 ರಿಂದ 50 ಕೆಜಿಯ ತೂಕದ 16  ಗೊಬ್ಬರ ಚೀಲಗಳ ಪ್ಯಾಕೆಟ್‌ಗಳು ಇದ್ದು. ಸರಕಾರದ ಬೆಲೆಯಂತೆ 34, 65 ರೂ,ಗಳ ಬೆಲೆಬಾಳುವ ಅಕ್ಕಿ ಕಾಳುಗಳು. ಸುಮಾರು 9 ಕ್ವಿಂಟಲ್ 50 ಕೆಜಿ ಇದ್ದು. ಸುಮಾರು 32 ಸಾವಿರದ 872 ರೂ,ಗಳ ಅಕ್ಕಿಯನ್ನು ತುಂಬಿದ ಗೊಬ್ಬರ ಚೀಲಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 

ದಾಳಿ ಸಮಯದಲ್ಲಿ ಆಹಾರ ಶಿರೇಸ್ಥಾರ ಬಸವರಾಜ ತಾಳಿಕೋಟಿ, ಆಹಾರ ನೀರೀಕ್ಷಕ ಆನಂದ ರೇವು ರಾಠೋಡ, ಸಾವಳಗಿ ಕ್ರೈಂ, ಪಿಎಸ್‌ಐ, ಮುತ್ತು ವಾಲಿಕಾರ ಹಾಗೂ ಪೋಲಿಸ್ ಸಿಬ್ಬಂದಿಗಳು ಇದ್ದರು. ಈ ಕುರಿತು ಸಾವಳಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯನ್ನು ಮುಂದುವರಿಸಿದ್ದಾರೆ.