ಪೋಷಣ ಅಭಿಯಾನ: ಚೊಚ್ಚಿಲು ಗರ್ಭಿಣಿಯರಿಗೆ ಸೀಮಂತ
Nutrition campaign: Babyshower for pregnant women
ಇಂಡಿ 08: ಬಾಲ್ಯ ವಿವಾಹ ಮದುವೆ ಅಲ್ಲ. ಗಂಡನ ಮನೆ ಆಸ್ತಿ ಅಂತಸ್ತಿಗೆ ಹಕ್ಕುದಾರಳಲ್ಲ ಎಂದು ಇಂಡಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಗುತ್ತರಿಗಿಮಠ ಅವರು ಹೇಳಿದರು.
ಇಂಡಿ ತಾಲೂಕಿನ ಗೋರಿಮಟ್ಟಿ ತಾಂಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ ಅಭಿಯಾನ ಚೊಚ್ಚಿಲು ಗರ್ಭಿಣಿಯರ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಗರ್ಭಿಣಿಯರು ಪುಷ್ಟಿ ಜಿಲೆಟ್ ಪೌಷ್ಟಿಕ ಆಹಾರ ಸೇವನೆ ಮೊಳಕೆ ಕಾಳುಗಳು ಸೇವನೆ ಮಾಡಬೇಕು ಎಂದು ಹೇಳಿದರು.ವೈದ್ಯಾಧಿಕಾರಿ ಡಾ. ಪ್ರಶಾಂತ ಮಾತನಾಡಿ ಗರ್ಭಿಣಿ ತಾಯಂದಿರು ಕನಿಷ್ಠ ಐದು ಬಾರಿ ತಪಾಸಣೆ ಮಾಡಿಸಿಕೊಳ್ಳಬೇಕು. ಹಸಿರು ತರಕಾರಿ ಸೊಪ್ಪು ಆಯಾ ಋತುಮಾನಕ್ಕನುಗುಣವಾಗಿ ಹಣ್ಣುಗಳು ಸೇವನೆ ಮಾಡುವುದು ಉತ್ತಮ ಎಂದು ಹೇಳಿದರು.
ವೈ ಎಂ ಪೂಜಾರ ಕ್ಷೇತ್ರ ಆರೋಗ್ಯ ಶಿಕ್ಷಣ ಶಿಕ್ಷಣಾಧಿಕಾರಿಗಳು ಮಾತನಾಡಿ ಗಂಡಿಗೆ 21 ವರ್ಷ ಹೆಣ್ಣಿಗೆ 18 ವರ್ಷ ವಯಸ್ಸಿನೊಳಗೆ ಬಾಲ್ಯ ವಿವಾಹ ಕಂಡುಬಂದಲ್ಲಿ ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ ಒಂದು ಲಕ್ಷ ರೂಪಾಯಿ ದಂಡ ಇದನ್ನು ಪ್ರಸ್ತುತ ನೆಂಟಸ್ತನಿಕೆ, ಬಿಗಸ್ತನ. ವಿವಾಹ ನಿಶ್ಚಯ ಅಪ್ರಾಪ್ತ ವಯಸ್ಸಿನಲ್ಲಿ ಕಂಡು ಬಂದಲ್ಲಿ ಈ ಕಾನೂನು ಅನ್ವಯವಾಗುವದು ಎಂದು ಅರಿವು ಮೂಡಿಸಿದರು.
ಮೇಲ್ವಿಚಾರಕಕಿ ಎಸ್ ಭಜಂತ್ರಿ ಮಾತನಾಡಿ ಬಾಲ ಗರ್ಭಿಣಿಯರು 80,000 ವಿಜಯಪುರ ಜಿಲ್ಲೆಯಲ್ಲಿ 6,000. ತಾಯಿ ಮರಣ ಶಿಶು ಮರಣ ಹೆಚ್ಚಳವಾಗುತ್ತಿದ್ದು ಬೆಳೆಯಬೇಕಾದ ಮಗಳು ಮಾನಸಿಕವಾಗಿ ದೈಹಿಕವಾಗಿ ಬೆಳವಣಿಗೆ ಹಂತದಲ್ಲಿ ಮಗಳ ಕೊರಳಿಗೆ ಕರಿಮಣಿ ಹಸಿ ಮಣಿ ತವಕ ಬೇಡ ಅನಾಹುತಗಳು ತಪ್ಪಿಸಿ ಎಂದು ಹೇಳಿದರು.ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್ ಹೆಚ್ ಅತನೂರ. ಶಾಲಾ ಮುಖ್ಯ ಗುರುಗಳು ಎಸ್‌ಡಿಎಮ್‌ಸಿ ಅಧ್ಯಕ್ಷ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗರ್ಭಿಣಿಯರು ತಾಯಂದಿರು ಉಪಸ್ಥಿತರಿದ್ದರು. ಎಸ್ ಕೆ ಭಜಂತ್ರಿ ಸ್ವಾಗತಿಸಿ, ನಿರೂಪಿಸಿದರು. ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 