ಮಹಲಿಂಗಪುರ

ನರ್ಸ್‌ಗಳು ಆರೋಗ್ಯ ಕ್ಷೇತ್ರದ ಬೆನ್ನೆಲುಬು: ಡಾ.ಅಶೋಕ

ನರ್ಸ್‌ಗಳು ಆರೋಗ್ಯ ಕ್ಷೇತ್ರದ ಬೆನ್ನೆಲುಬು: ಡಾ.ಅಶೋಕ

ಲೋಕದರ್ಶನ ವರದಿ 

ಮಹಾಲಿಂಗಪುರ 15: ನರ್ಸ್‌ಗಳು ಆರೋಗ್ಯ ಕ್ಷೇತ್ರದ ಬೆನ್ನೆಲುಬು, ಅವರ ನಿಸ್ವಾರ್ಥ ಸೇವೆಯನ್ನು ಗೌರವಿಸಿದಾಗ ವಿಶ್ವ ನರ್ಸ್‌ ದಿನಾಚರಣೆಗೆ ಅರ್ಥ ಬರುತ್ತದೆ ಎಂದು ವೈದ್ಯ ಡಾ.ಅಶೋಕ ಹೇಳಿದರು. 

ಸಮೀಪದ ಚಿಮ್ಮಡದ ಶ್ರೀ ಪ್ರಭುಲಿಂಗೇಶ್ವರ ಇನ್‌ಸ್ಟಿಟ್ಯೂಟ್ ಆಫ್ ನಸಿಂರ್ಗ್ ಸೈನ್ಸ್‌  ಕಾಲೇಜಿನಲ್ಲಿಜರುಗಿದ  ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ನರ್ಸ್‌ಗಳ ಸೇವಾ ಮನೋಭಾವ ಹಾಗೂ ಸಮಾಜದಲ್ಲಿ ಅವರ ಮಹತ್ವದ ಕುರಿತು ಮಾತನಾಡಿದರು. 

ಮೋಹನ್,  ಜಯರಾಜ , ಪ್ರಿಯಾಂಕಾ, ಸೌಮ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣ ಹಾಗೂ ನರ್ಸ್‌ ಸೇವೆಯ ಮಹತ್ವ ಸಾರುವ ಕಾರ್ಯಕ್ರಮ ಜರುಗಿದವು. 


ಸುದ್ದಿ ಓದಿ