2 ಲಕ್ಷ ಸಮೀಪಿಸಿದ ಮೆಣಸಿನಕಾಯಿ ಚೀಲಗಳ ಸಂಖ್ಯೆ: ದರದಲ್ಲಿ ಮುಂದುವರಿದ ಸ್ಥಿರತೆ

ಬ್ಯಾಡಗಿ 09:  ಭರಪೂರ ಅವಕಿನತ್ತ ಸಾಗಿರುವ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರವಾರ (ಫೆ.8) ಆವಕಿನಲ್ಲಿ ಹೆಚ್ಚಳ ಕಂಡು ಬಂದಿದ್ದು 2 ಲಕ್ಷವನ್ನು ಸಮೀಪಿಸಿದ್ದು ದರದಲ್ಲಿ ಮತ್ತೆ ಸ್ಥಿರತೆ ಮುಂದುವರೆದಿದೆ. 

ಫೆಬ್ರುವರಿ ತಿಂಗಳ ಮೊದಲ ಭಾಗದಲ್ಲಿಯೇ ಆವಕಿನಲ್ಲಿಯೇ ಹೆಚ್ಚಳವಾಗಿದ್ದು, ಕಳೆದ 3 ವಾರಗಳಿಂದ ಒಂದೂವರೆ ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಆವಕವಾಗುತ್ತಿದ್ದು ಆದರೆ ಇದ್ದಕ್ಕಿದ್ದಂತೆ ಆವಕಿನಲ್ಲಿ ಹೆಚ್ಚಳ ಕಂಡು ಬಂದಿದ್ದು ಫೆ.8 ಗುರುವಾರ ಒಟ್ಟು 190831 ಮೆಣಸಿನಕಾಯಿ ಚೀಲಗಳು ಆವಕಾಗಿದ್ದು ವ್ಯಾಪಾರಸ್ಥರಲ್ಲಿ ಹರ್ಷಕ್ಕೆ ಕಾರಣವಾಗಿದೆ. 

ದರದಲ್ಲಿ ಸ್ಥಿರತೆ:ಆವಕ ಎರಡು ಲಕ್ಷ ಸಮೀಪಿಸಿದರೂ ಸಹ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗದೇ ಮೂರು ತಳಿಗಳ ಮೆಣ ಸಿಕಾಯಿ ದರದಲ್ಲಿ ಮಾತ್ರ ಸ್ಥಿರತೆ ಸಾಧಿಸಿದೆ, ಕಡ್ಡಿತಳಿ ಮೆಣಸಿನಕಾಯಿ 38129 ಸಾವಿರ ಡಬ್ಬಿತಳಿ 42159 ಹಾಗೂ ಗುಂಟೂರ ತಳಿ ಸರಾಸರಿ 14709 ಸಾವಿರ ಸರಾಸರಿ ದರಗಳಲ್ಲಿ ಇಂದು ಮಾರಾಟವಾದವು. 

ಗುರುವಾರ ಮಾರುಕಟ್ಟೆ ದರ: ಗುರುವಾರ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ 3029 ಗರಿಷ್ಠ 57869 ಸರಾಸರಿ 38129, ಡಬ್ಬಿತಳಿ ಕನಿಷ್ಠ 3389 ಗರಿಷ್ಠ 62589 ಸರಾಸರಿ 42159, ಗುಂಟೂರು ಕನಿಷ್ಠ 1669 ಗರಿಷ್ಟ 18599 ಸರಾಸರಿ 14709 ರೂ.ಗಳಿಗೆ ಮಾರಾಟವಾಗಿವೆ.