ಕಾಯಕ ಮೌಲ್ಯ ಎತ್ತಿಹಿಡಿದ ಮಹಾನ್ ಯೋಗಿ ಶಿವಶರಣ ನುಲಿಯ ಚಂದಯ್ಯ: ತಹಸಿಲ್ದಾರ್ ಕುಮಾರಸ್ವಾಮಿ

ಕೊಟ್ಟೂರು 12: ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ತಾಲೂಕ ಕಛೇರಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ಶಿವಶರಣ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಎಂ ಕುಮಾರಸ್ವಾಮಿ ಇವರು 12ನೇ ಶತಮಾನದಲ್ಲಿ ಬಸವಾದಿ ಶರಣರು ಸತ್ಯ ಶುದ್ಧ ಕಾಯದ ಮೂಲಕ ದುಡಿಯುವುದನ್ನು ಹಾಗೂ ದುಡಿದದ್ದರಲ್ಲಿ ಹೆಚ್ಚಿನದನ್ನು ಸಮಾಜಕ್ಕೆ ದಾಸೋಹದ ಮೂಲಕ ಹಂಚುವುದನ್ನು ಸಮಾಜಕ್ಕೆ ಕಲಿಸಿದರು.  ನುಲಿಯ ಚಂದಯ್ಯನು ರಚಿಸಿದ ವಚನಗಳಲ್ಲಿ ಲಭ್ಯವಿರುವ 48ವಚನಗಳಲ್ಲಿ ಕಾಯಕ ಮೌಲ್ಯವನ್ನು ಎತ್ತಿಹಿಡಿದಿರುವುದು ಕಂಡುಬರುತ್ತದೆ. ಗುರು, ಲಿಂಗ, ಜಂಗಮರೆಲ್ಲರಿಗೂ ಕಾಯಕ ಕಡ್ಡಾಯ ಎಂಬ ಸಂಗತಿ ಗೊತ್ತಾಗುತ್ತದೆ ಎಂದರು. 

ಅಖಿಲ ಕರ್ನಾಟಕ ಕುಳವ ಮಹಾಸಂಘದ ರಾಜ್ಯ ಉಪಕಾರ್ಯದರ್ಶಿ ಕೆ ಕೊಟ್ರೇಶ್ ಮಾತನಾಡಿ ನುಲಿಯ ಚಂದಯ್ಯ ನೂಲಿನಲ್ಲಿ ಹಗ್ಗಗಳನ್ನು ತಯಾರಿಸಿ ಮಾರುವ ಕಾಯದಲ್ಲಿ ತೊಡಗಿದ್ದು, ಹಗ್ಗತಯಾರಿಸಲು ಕೊಳದಲ್ಲಿ ಹುಲ್ಲನ್ನು ಕೊಯ್ಯುವಾಗ ಅಕಸ್ಮಿಕವಾಗಿ ಲಿಂಗ ನೀರಿನಲ್ಲಿ ಬಿದ್ದು ಹೋಗುತ್ತದೆ.  ಆದರೆ ಲಿಂಗ ಕಳೆದು ಹೋಯಿತೆಂದು ಚಿಂತಿಸದೇ ತಮ್ಮ ಕಾಯಕವನ್ನು ಮುಂದುವರಿಸುತ್ತಾರೆ.  ಚಂದಯ್ಯನೇ ನಾನು ಬರುತ್ತೇನೆ ಕರೆದುಕೊ ಎಂದು ಲಿಂಗಯ್ಯನು ಬೆನ್ನುಬಿದ್ದರೂ ಒಪ್ಪುವುದಿಲ್ಲ. ಮಡಿವಾಳ ಮಾಚಿದೇವರ  ಮಧ್ಯಸ್ಥಿಕೆ ವಹಿಸಿ ಅನುಭವ ಮಂಟಪದಲ್ಲಿ ಬಸವಣ್ಣನವರ ಎದುರು ಪಂಚಾಯಿತಿ ಮಾಡಿ ಕೊನೆಗೆ ಲಿಂಗವನ್ನು ಮರಳಿ ಧರಿಸಲು ಒಪ್ಪಿಸುತ್ತಾರೆ.  ಈ ರೀತಿಯಾಗಿ ಅವರು ಪೂಜೆಯನ್ನು ಕಾಯಕವೆನ್ನದೇ, ಕಾಯಕವನ್ನೇ ಪೂಜೆಯಾಗಿ ಕಂಡಿರುವುದು ವ್ಯಕ್ತವಾಗುತ್ತದೆ ಎಂದರು. 

ಸರ್ಕಾರದಿಂದ ಕೊರಚ, ಕೊರವ, ಕೊರಮ, ಕುಳವ ಸಮಾಜದ ಆರಾಧ್ಯ ವ್ಯಕ್ತಿಯಾದ ಶಿವಶರಣ ನುಲಿಯ್ಯ ಚಂದಯ್ಯನವರ ಜಯಂತಿಯನ್ನು ಆಚರಿಸಲು ಆದೇಶ ಬಂದಿರುವುದು ಸಂತೋಷವಾಗಿದೆ.  ನಾವು ಬರೀ ಪೂಜೆಗೆ ಸೀಮಿತರಾಗದೇ ಅವರ ಆದರ್ಶಗಳನ್ನು ಪಾಲಿಸಿ, ಅವರ ಸಂದೇಶಗಳನ್ನು ಜನತೆ ತಲುಪಿಸಿದಲ್ಲಿ ಮಾತ್ರ ಸಾರ್ಥಕವಾಗುತ್ತದೆ ಎಂದು  ವೆಂಕಟೇಶ್ ಭತ್ತನಹಳ್ಳಿ ಇವರು ತಿಳಿಸಿದರು.  

ಈ ಸಮಯದಲ್ಲಿ ಭೋವಿ ಸಮಾಜದ ಮುಖಂಡರಾದ ಪಿ ಹಚ್  ದೊಡ್ಡರಾಮಣ್ಣ, ಅಖಲ ಕರ್ನಾಟಕ ಕುಳವ ಮಹಾ ಸಂಘದ  ತಾಲೂಕ ಅಧ್ಯಕ್ಷರಾದ ಮಂಜುನಾಥ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್, ಉಪಾಧ್ಯಕ್ಷ ಕಾಂತಪ್ಪ ,  ಸಂಘಟನಾ ಕಾರ್ಯದರ್ಶಿ ಬೆಳ್ಳಿರಥದ ಸಿದ್ದಣ್ಣ, ಸಣ್ಣದ್ಯಾಮಪ್ಪ, ಸಣ್ಣ ಹನುಮಂತಪ್ಪ,ರಮೇಶ್,ಶಿವು, ಈಶ್ವರ, ಸುಂಕಪ್ಪ ,ಪರಶುರಾಮ್,  ವೆಂಕಟೇಶ್  ಭತ್ತನಹಳ್ಳಿ,ಕರುನಾಡು ರೈತ ಸಂಘದ ಜಿಲ್ಲಾಧ್ಯಕ್ಷ ಪಕ್ಕೀರ​‍್ಪ, ಭತ್ತನಹಳ್ಳಿ ದುಗ್ಗಪ್ಪ,  ಹಾಗೂ ಸಮಾದವರು,  ಶಿರಸ್ತೇದಾರರಾದ ಕೆ ನಾಗರಾಜ, ಕಂದಾಯ ನೀರೀಕ್ಷಕ ಹಾಲಸ್ವಾಮಿ ಎಸ್ ಎಂ, ಗ್ರಾಮ ಲೆಕ್ಕಿಗರು, ತಾಲೂಕು ಕಛೇರಿಯ ಸಿಬ್ಬಂದಿ ಹಾಜರಿದ್ದರು. ಸಿ.ಮ.ಗುರುಬಸವರಾಜ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.