ಮಾರ್ವಾಡಿ ಯುವ ಮಂಚ್ನಿಂದ ಮಕ್ಕಳಿಗೆ ನೋಟ್ಬುಕ್ ವಿತರಣೆ
Notebooks distributed to children by Marwadi Yuva Manch
ಹುಬ್ಬಳ್ಳಿ 07: ಮಾರ್ವಾಡಿ ಯುವ ಮಂಚ್ ಹುಬ್ಬಳ್ಳಿ ಶಾಖೆಯ ವತಿಯಿಂದ ‘ಆನಂದ ಎಲ್ಲರಿಗಾಗಿ’ ಸೇವಾ ಅಭಿಯಾನದಡಿ ಕೆಶ್ವಾಪುರದ ಸೇವಾ ಸದನದಲ್ಲಿ ಅಗತ್ಯವಿರುವ ಮಕ್ಕಳಿಗೆ ನೋಟ್ಬುಕ್ಗಳನ್ನು ವಿತರಿಸಲಾಯಿತು. ಕಾರ್ಯಕ್ರಮವನ್ನು ರಾಕೇಶ್ ಕಟಾರಿಯಾ, ಭರತ್ ಜೈನ್, ಶಾಖಾ ಅಧ್ಯಕ್ಷ ಅಮರ್ ವೈಷ್ಣವ್ ಹಾಗೂ ಪ್ರಾಜೆಕ್ಟ್ ಚೇರ್ಮನ್ ಸುಭಾಷ್ ಚಂದ್ರ ಡಂಕ್ ಅವರು ನೋಟ್ಬುಕ್ ವಿತರಿಸುವ ಮೂಲಕ ಉದ್ಘಾಟಿಸಿದರು. ರಾಕೇಶ್ ಕಟಾರಿಯಾ ಮಾತನಾಡಿ, ಸಂಪನ್ಮೂಲಗಳ ಕೊರತೆಯಿಂದ ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಮಂಚ್ ವಿವಿಧ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದರು. ಭರತ್ ಜೈನ್ ಮಾತನಾಡಿ, ಶಿಕ್ಷಣವು ಮಕ್ಕಳ ಉಜ್ವಲ ಭವಿಷ್ಯಕ್ಕೆ ಪ್ರಮುಖ ಆಧಾರವಾಗಿದ್ದು, ನೋಟ್ಬುಕ್ಗಳು ಮಕ್ಕಳ ಕನಸುಗಳಿಗೆ ಬರಹದ ಮಾಧ್ಯಮವಾಗಲಿ ಎಂದು ಹಾರೈಸಿದರು. ಅಮರ್ ವೈಷ್ಣವ್ ಹಾಗೂ ಸುಭಾಷ್ ಚಂದ್ರ ಡಂಕ್ ಅವರು ಮಂಚ್ನ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಂಚ್ನ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 