ಆಶಯ ಭಾಷಣಕ್ಕೆ ಅಜೀವ ಸದಸ್ಯರ ಆಕ್ಷೇಪ
Non-life members object to Ashya's speech
ದಾಂಡೇಲಿ 14: ದಾಂಡೇಲಿಯಲ್ಲಿ ನಡೆಯುತ್ತಿರುವ 25 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಶಯ ಭಾಷಣ ಮಾಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಬೊಮ್ಮಯ್ಯ. ಎನ್. ವಾಸರೆಯ ದರ್ದ ಮಾತುಗಳಿಗೆ ಕೆಲ ಅಜೀವ ಸದಸ್ಯರು ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉ.ಕ. ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಸರ್ಕಾರದ ಇಲಾಖೆಗಳ, ಕೇಂದ್ರ ಕ.ಸಾ.ಪ. ಅನುಮತಿ ಇಲ್ಲದೆ ಸಮ್ಮೇಳನ ಮಾಡ ಹೊರಟಿದಲ್ಲದೆ , ಕೋರ್ಟನಿಂದ ಷರತ್ತು ಬದ್ಧ ಸೂಚನೆಯೊಂದಿಗೆ ಸಮ್ಮೇಳನಕ್ಕೆ ಚಾಲನೆ ಕೊಡಿಸಿದ್ದರು. ಉದ್ಘಾಟನೆ ವೇಳೆ ಪ್ರಸ್ತಾವಿಕ ಮತ್ತು ಆಶಯ ಭಾಷಣ ಮಾಡುವಾಗ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿರುವ ಕುರಿತು , ಸಮ್ಮೇಳನಕ್ಕೆ ತಡೆ ಕೋರಿ ದೂರು ದಾಖಲಿಸಿದವರನ್ನು ಕಟುವಾಗಿ ಟೀಕಿಸುತ್ತಾ, *ವಯಕ್ತಿಕವಾಗಿ ಬಂದರೆ ತೊಡೆ ತಟ್ಟುವುದಾಗಿ* ಹೇಳಿದ್ದರು.
ಇದಕ್ಕೆ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಅಜೀವ ಸದಸ್ಯರು ಶನಿವಾರ ರಾತ್ರಿ ಆಕ್ರೋಶ ವ್ಯಕ್ತಪಡಿಸಿದರು. ಕೋರ್ಟಿಗೆ ಹೋದ ಅಜೀವ ಸದಸ್ಯರನ್ನು ದುಷ್ಟಕೂಟ ಎಂದು , ವೈಯುಕ್ತಿಕವಾಗಿ ಬಂದರೆ ತೊಡೆ ತಟ್ಟಲು ಸಿದ್ದ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಾಸರೆ ಹೇಳಿದ್ದಾಗಿ ಪತ್ರಕರ್ತನೊಬ್ಬ ವರದಿ ಮಾಡಿದ್ದನ್ನು ಗಮನಿಸಿದ ಅಜೀವ ಸದಸ್ಯರು " ಇದು ಸಮ್ಮೇಳನದ ಆಶಯ ನುಡಿಯ ಅರ್ಥ ಮತ್ತು ಕನ್ನಡ ಭಾಷೆಯ ಹಾಗೂ ಸಾಹಿತ್ಯದ ಗೌರವ ಕಳೆದಂತಾಗಿದೆ . ಸಮ್ಮೇಳನದ ವೇದಿಕೆಯಲ್ಲಿ ತೊಡೆ ತಟ್ಟುವ ಅಹಂಕಾರದ ಭಾಷೆ ಸಲ್ಲದು. ವೇದಿಕೆ ಉರಿಯುವ ಭಾಷಣಕ್ಕಲ್ಲ. ಸಾಹಿತ್ಯ ಸಮ್ಮೇಳನವೆಂದರೆ ಸಂಸ್ಕಾರ, ಸಂವೇದನೆಯ ವೇದಿಕೆ. ಅಲ್ಲಿ ತೊಡೆ ತಟ್ಟುವ ಪದಗಳಿಗೆ ಅಹಂಕಾರಕ್ಕೆ ಜಾಗವಿಲ್ಲ. ಅಲ್ಲಿ ತಲೆತಗ್ಗಿಸಿ ಹೇಳುವ ಕೇಳುವ, ಕೇಳುವ ವಿನಯವೇ ; ನಿಜವಾದ ಶಕ್ತಿ. ಪದಗಳು ಪವಿತ್ರವಾಗಬೇಕಾದ ಸ್ಥಳದಲ್ಲಿ, ದೇಹ ಭಾಷೆಯ ದರ್ ಮಾತನಾಡಿದರೆ ಅದು ಸಾಹಿತ್ಯ ಎಲ್ಲ ಸಂಸ್ಕೃತಿಯ ಸೋಲು.
ಇದರಿಂದ ಅರ್ಥವಾಗೋದು - ಕನ್ನಡದ ಹೆಸರಲ್ಲಿ ಕೂಗು, ದರ್, ನಡೆ ಇದು . *" ಅಭಿಮಾನ ಎಂದು ಬಿಂಬಿಸುವ ಪರರ ಕಾಂಚಾಣ ಮೇಲಿನ ದುರಹಂಕಾರ ನರ್ತನವೆಂದು"* ಅಜೀವ ಸದಸ್ಯರು ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.ಇನ್ನು ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದ, ಉದ್ವಾಟನಾ ಕಾರ್ಯಕ್ರಮಕ್ಕೆ ಬರಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ, ಜಿ.ಪಂ.ಸಿಇಓ, ಪೋಲಿಸ್ ವರಿಷ್ಠಾಧಿಕಾರಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರುಗಳ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 