ಎಷ್ಟೇ ಉನ್ನತ ಶಿಕ್ಷಣ ಪಡೆದರೂ ತಂದೆ ತಾಯಿಯನ್ನು ಮರೆಯದಿರಿ: ಕಾಗೆ

ಲೋಕದರ್ಶನ ವರದಿ

 ಶೇಡಬಾಳ 19: ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವದರ ಜತೆಗೆ ಜನ್ಮ ನೀಡಿದ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವಂತೆ ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಅವರು ಶುಕ್ರವಾರ ದಿ. 18 ರಂದು ಶೇಡಬಾಳ ಪಟ್ಟಣದ ಎಸ್.ಎಸ್.ಎಸ್. ಸಮೀತಿಯ ಪದವಿ ಪೂರ್ವ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ವಾಣಿಜ್ಯ ಪದವಿ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ವಿದ್ಯಾರ್ಥಿ ಗಳು ಎಷ್ಟೇ ಉನ್ನತ ವ್ಯಾಸಂಗ ಮಾಡಿದರು ಕೂಡ ಮುಪ್ಪಿನಾವ್ಯಸ್ಥೆಯಲ್ಲಿರುವ ತಂದೆ ತಾಯಿಗಳನ್ನು ಸಾಕಿ ಸಲುಹುವ ಜವಾಬ್ದಾರಿ ನಿಮ್ಮದಾಗಿದೆ. ನಿಮ್ಮ ಉನ್ನತ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟ ಪಟ್ಟು ನಿಮಗೆ ವಿದ್ಯಾಭ್ಯಾಸ ನೀಡಿರುತ್ತಾರೆ. ಅವರ ಋಣವನ್ನು ನೀವು ತೀರಿಸುವಂತೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಯಬಾಗ ಕೃಷ್ಣಾ ಗೋದಾವರಿ ಬೀಜ ಮತ್ತು ರಸಗೊಬ್ಬರ ಕಾರ್ಖಾನೆ ಪ್ರಧಾನ ವ್ಯವಸ್ಥಾಪಕರಾದ ಮಹೇಂದ್ರ ಮುಗಳಖೋಡ, ವಿಜಯ ಅಕಿವಾಟೆ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. 

ಶಾಸಕ ರಾಜು ಕಾಗೆ ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಶಾಸಕರಾದ ನಂತರ ಇದೇ ಮೊದಲ ಬಾರಿಗೆ ಸಂಸ್ಥೆಗೆ ಆಗಮಿಸಿದ ಶಾಸಕ ರಾಜು ಕಾಗೆಯವರನ್ನು ಸಂಸ್ಥೆಯ ಅಧ್ಯಕ್ಷ ವಿನೋದ ಜಿನ್ನಪ್ಪ ಬರಗಾಲೆ, ಉಪಾಧ್ಯಕ್ಷ ಅಜೀತ ನಾಂದ್ರೆ, ಶಾಲು ಹೊದಿಸಿ ಸತ್ಕರಿಸಿ ಸನ್ಮಾನಿಸಿದರು.

ಮಹಾವಿದ್ಯಾಲಯ ಆದರ್ಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸತ್ಕರಿಸಿ ಸನ್ಮಾನಿಸಿದರು. 

ಆಡಳಿತ ಮಂಡಳಿ ಸದಸ್ಯರಾದ  ವಿನೋದ ಬರಗಾಲೆ, ಅಜೀತ ನಾಂದ್ರೆ, ಡಾ. ಅಶೋಕ ಪಾಟೀಲ, ಸುಭಾಷ ಕುಸನಾಳೆ, ಮಹಾವೀರ ಪಾಟೀಲ, ಸನ್ಮತಿ ಪಾಟೀಲ, ಅಶ್ವಥ ಪಾಟೀಲ, ಕುಮಾರ ಮಾಲಗಾಂವೆ, ರಾಹುಲ ಸವದತ್ತಿ, ವಿನೋದ ಪಾಟೀಲ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕ್ಕಣ್ಣವರ, ಪ್ರಾಚಾರ್ಯ ಬಾಹುಬಲಿ ಬಣಜಿಗವಾಡೆ, ಮುಖ್ಯಾಧ್ಯಾಪಕಿ ಎನ್.ಎಂ.ಕಾಳೇನಟ್ಟಿ, ರಮೇಶ ಚೌಗಲೆ, ಪಿಂಟು ಚಾವರೆ, ರಾಜು ಘೇನಪ್ಪಗೋಳ, ಅಣ್ಣಾ ಅರವಾಡೆ, ಭರತೇಶ ನಾಂದ್ರೆ, ಕುಮಾರ ಪಾಟೀಲ, ಶ್ರೀನಿವಾಸ ಕಾಂಬಳೆ, ಪ್ರಕಾಶ ಮಾಳಿ ಸೇರಿದಂತೆ ಮಹಾವಿದ್ಯಾಲಯದ ಉಪನ್ಯಾಸಕರು, ಪ್ರೌಢ ಶಾಲೆಯ ಶಿಕ್ಷಕ, ಶಿಕ್ಷಕಿಯರು, ಗ್ರಾಮಸ್ಥರು, ವಿದ್ಯಾಥರ್ಿಗಳು ಅಪಾರ ಸಂಖ್ಯೆಯಲ್ಲಿ ಇದ್ದರು.

ಬಿ.ಡಿ.ಬಣಜಿಗವಾಡೆ ಸ್ವಾಗತಿಸಿದರು. ಟಿ.ಕೆ.ಮಾಲಗಾಂವೆ ವಂದಿಸಿದರು. ಬಿ.ಎಸ್.ಮಿರಗಿ ಕಾರ್ಯಕ್ರಮ ನಿರೂಪಿಸಿದರು