ನಿಮಿಷಾಂಬ ದೇವಿ ಗಂಗೆಸ್ಥಳ ಮೆರವಣಿಗೆ

Nimishamba Devi Gangesthala procession

ಕಂಪ್ಲಿ 06: ಪಟ್ಟಣದಲ್ಲಿ ಸೋಮವಂಸ ಆರ್ಯ ಕ್ಷತ್ರೀಯ (ಚಿತ್ರಗಾರ) ಸಮಾಜದವತಿಯಿಂದ ನಿಮಿಷಾಂಬ ದೇವಿಯ 39ನೇ ಜಯಂತ್ಸೋವದ ಅಂಗವಾಗಿ ಗಂಗೆಸ್ಥಳ ಮೆರವಣಿಗೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಜರುಗಿತು. 

ಕಂಪ್ಲಿ ಕೋಟೆ ತುಂಗಭದ್ರ ನದಿಯಿಂದ ಕಂಪ್ಲಿ ಪಟ್ಟಣದವರಿಗೆ ಪ್ರಮುಖ ರಸ್ತೆಮೂಲಕ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಅರ್ಚಕ ವಿಶ್ವನಾಥಭಟ್, ಸುಧಾಕರ ಶರ್ಮ, ಸೋಮವಂಸ ಆರ್ಯ ಕ್ಷತ್ರೀಯ (ಚಿತ್ರಗಾರ) ಸಮಾಜದ ಅಧ್ಯಕ್ಷ ಮಾರುತಿ ಚಿತ್ರಗಾರ, ಉಪಾಧ್ಯಕ್ಷ ನಾಗರಾಜ ಉಭಾಳೆ, ಕಾರ್ಯದರ್ಶಿ ಷಣ್ಮುಕಪ್ಪ, ಖಜಾಂಚಿ ಶಿವಾನಂದ ಉಭಾಳೆ, ಗೌರವಾಧ್ಯಕ್ಷ ಸುಬ್ರಮಣ್ಯ ಉಭಾಳೆ ಸೇರಿದಂತೆ ಸಮಾಜದವರು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.  

ಮೇ.03: ಪಟ್ಟಣದಲ್ಲಿ ನಿಮಿಷಾಂಬ ದೇವಿಯ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.