ಅಡಿವೆಪ್ಪ ಮಹಾಸ್ವಾಮಿಗಳ ಜೀವನಾಧಾರಿತ ನಿಜಯೋಗಿ ಗ್ರಂಥ ಬಿಡುಗಡೆ

ಬೈಲಹೊಂಗಲ 23: ವೈಚಾರಿಕತೆಯ ಸಂತ ದೇಶ-ವಿದೇಶಗಳಲ್ಲಿ ಬಸವತತ್ವ ಪ್ರಚಾರಗೈದ ಚರಜಂಗಮ, ಶಿವಯೋಗಿಗಳ ಸಾಮ್ರಾಟ ಎಂದೇ ಪ್ರಖ್ಯಾತರಾದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠದ ಮೊದಲ ಪೀಠಾಧಿಕಾರಿಯಾದ ಲಿಂ. ಅಡಿವೆಪ್ಪ ಮಹಾಸ್ವಾಮಿಗಳು ಸಂಸಾರ ಜೀವನ ತ್ಯಜಿಸಿ ದೇಶಾದ್ಯಂತ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿ ಸಾರ್ಥಕತೆಯ ಜೀವನವನ್ನು ನಡೆಸಿ ಮಡಿವಾಳೇಶ್ವರ ಮಠವನ್ನು ಕಟ್ಟಿ ಬೆಳೆಸಿದ  ಸಮಗ್ರ ಇತಿಹಾಸ ಸಾರುವ ಅನೇಕ ವಿಚಾರಗಳನ್ನು ಕ್ರೋಡಿಕರಿಸಿ ಅಕ್ಷರರೂಪ ನೀಡಲಾಗಿದೆ ಎಂದು ಸಂಪಾದಕ ಮಂಜುನಾಥ ಮಡಿವಾಳರ ಹೇಳಿದರು. 

ತಾಲೂಕಿನ ನೇಗಿನಹಾಳ ಗ್ರಾಮದ ಮಡಿವಾಳೇಶ್ವರ ಮಠದ ಆವರಣದಲ್ಲಿ ನಡೆದ ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ಬಸವತತ್ವ ಸಮಾವೇಶ ಕಾರ್ಯಕ್ರಮದಲ್ಲಿ ನಿಜಯೋಗಿ ಎಂಬ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.  

ಗರಗದ ಮಡಿವಾಳೇಶ್ವರರ ಇತಿಹಾಸ, ಮಡಿವಾಳೇಶ್ವರರಿಗೂ ನೇಗಿನಹಾಳಕ್ಕೂ ಇರುವ ಸಂಬಂದ, ನೇಗಿನಹಾಳದಲ್ಲಿ ಮಡಿವಾಳೇಶ್ವರ ಮಠ ಸ್ಥಾಪನೆಯಾದ ಕುರಿತು ಹಾಗೂ ಅಡಿವೆಪ್ಪ ಮಹಾಸ್ವಾಮಿಗಳ ಜೀವನ, ಮಠದ ನಿರ್ಮಾಣಕ್ಕಾಗಿ ತೊಟ್ಟ ಪಣದ ಕುರಿತು ಈ ಗ್ರಂಥದಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.  

ಮುಮ್ಮಿಗಟ್ಟಿಯ ಡಾ. ಬಸವಾನಂದ ಮಹಾಸ್ವಾಮಿಗಳು, ಹುಣಶಿಕೊಳ್ಳ ಮಠದ ಸಿದ್ಧಬಸವ ಮಹಾಸ್ವಾಮಿಗಳು, ಬಸವರಾಜ ಹುಬ್ಬಳ್ಳಿ, ಮಡಿವಾಳಪ್ಪ ಗುಡಿ, ಚಂಬಪ್ಪ ತೋರಣಗಟ್ಟಿ, ಮಹಾರುದ್ರ​‍್ಪ ಬೋಳೆತ್ತಿನ, ಶ್ರೀಶೈಲ ತೋರಣಗಟ್ಟಿ,  ಮಂಜುನಾಥ ಹುಲಕುಂದ, ಈರಣ್ಣಾ ತಟ್ಟಿಮನಿ ಇದ್ದರು.