ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದ ಪತ್ರಿಕೆ ಬಿಡುಗಡೆ


ಶಿಗ್ಗಾವಿ 21: ಬಿಸನಳ್ಳಿ ಗ್ರಾಮದ ಜ.ಪಂ.ವೇ.ಆ.ಸಂ.ಸಂ.ಯೋಗಪಾಠ ಶಾಲೆ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಡಿ. 22 ಬುಧವಾರ ದಿಂದ ಡಿ.26 ರವಿವಾರ ದವರೆಗೆ ನಡೆಯಲಿರುವ ಸಾಮೂಹಿಕ ಇಷ್ಠಲಿಂಗ ಮಹಾಪೂಜೆ, ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮದ ಪತ್ರಿಕೆಗಳನ್ನು ಗುಳೆದಗುಡ್ಡದ ಡಾ.ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಗೋಳಿಸಿದರು. 

     ನಂತರ ಮಾತನಾಡಿದ ಶ್ರೀಗಳು, ಬಿಸನಳ್ಳಿ ಗ್ರಾಮಕ್ಕೆ ಮೇರಗುತಂದ ಕಾಶಿ ಮಠದಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ಯೋಗ, ಸಂಸ್ಕೃತ ಪಾಂಡಿತ್ಯವನ್ನು ಪಡೆಯುವಮೂಲಕ ನಾಡಿನಾಧ್ಯಂತ ಧರ್ಮ ಭೋದನೆ ಮಾಡುವಮೂಲಕ ಬಿಸನಳ್ಳಿ ಗ್ರಾಮದ ಹೆಸರನ್ನು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹೇಳಿದರು. 

     ಪಾಠಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಶಾಸ್ತ್ರೀಜಿ, ವಿರೇಶ ಆಜೂರ, ಈರಯ್ಯ ಹಿರೇಮಠ, ಗದಿಗೇಪ್ಪ ಮಾ.ಪ.ಶೆಟ್ಟರ, ಮುರಗೇಶ ಆಜೂರ, ಗದಿಗಯ್ಯ ಹಿರೇಮಠ, ಸೋಮಶೇಖರ ಆಜೂರ, ಸಾಗರ ಕುರವತ್ತಿಮಠ, ಲೋಕಯ್ಯ ಹಸನಾಬಾದಿಮಠ ಸೇರಿದಂತೆ ಇತರರು ಇದ್ದರು.