ನೂತನ ಎಸ್ಪಿ ಮಿಥುನ್ ಎಚ್‌.ಎನ್‌. ಅವರಿಗೆ ಮಹಿಳಾ ಸಂಘಟನೆ ವತಿಯಿಂದ ಸನ್ಮಾನ

ನೂತನ ಎಸ್ಪಿ ಮಿಥುನ್ ಎಚ್‌.ಎನ್‌. ಅವರಿಗೆ ಮಹಿಳಾ ಸಂಘಟನೆ ವತಿಯಿಂದ ಸನ್ಮಾನ  New SP Mithun H.N. felicitated by women's organization


ಗದಗ, ಸೆ. 2: ಮುದ್ರಣ ನಗರಿ ಗದಗ ಜಿಲ್ಲೆಯು ಕಾನೂನು ಸುವ್ಯವಸ್ಥೆಯ ಭದ್ರಕೋಟೆಯಾಗಿ ಗುರುತಿಸಿಕೊಂಡಿದ್ದು, ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಸೇವೆಯಿಂದ ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಎಂದು ಗದಗ-ಬೆಟಗೇರಿ ಮಹಿಳಾ ಸಂಘಟನೆ ಮುಖಂಡರು ಹೇಳಿದರು.  

ಇತ್ತೀಚೆಗೆ ಗದಗ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ರೋಹನ್ ಜಗದೀಶ್ ಅವರು ರಾಮನಗರ ಜಿಲ್ಲೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಕರ್ನಾಟಕ ರಾಜ್ಯ ಗೃಹ ಇಲಾಖೆಯಿಂದ ಉತ್ಸಾಹಿ ಹಾಗೂ ಕ್ರಿಯಾಶೀಲ ಅಧಿಕಾರಿ ಮಿಥುನ್ ಎಚ್‌.ಎನ್‌. ಅವರನ್ನು ಗದಗ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಲಾಗಿದೆ.  

ನೂತನ ಎಸ್ಪಿ ಮಿಥುನ್ ಎಚ್‌.ಎನ್‌. ಅವರನ್ನು ಗದಗ-ಬೆಟಗೇರಿ ಅವಳಿ ನಗರದ ಮಹಿಳಾ ಸಂಘಟನೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ಪ್ರಮುಖರು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಿ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ನೂತನ ಪೊಲೀಸ್ ವರಿಷ್ಠಾಧಿಕಾರಿಗಳು ಯಶಸ್ವಿಯಾಗಲಿ ಎಂದು ಆಶಿಸಿದರು. ಜಿಲ್ಲೆಯ ಜನರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಸಹಕಾರ ಮುಂದುವರಿಯಲಿ ಎಂದು ಹಾರೈಸಿದರು.  

‘ಮಿಥುನ್ ಎಚ್‌.ಎನ್‌. ಅವರ ಸೇವೆ ಜಿಲ್ಲೆಯಲ್ಲಿ ದಕ್ಷ ಆಡಳಿತಕ್ಕೆ ನಾಂದಿಯಾಗಲಿ’  

ಕಳೆದ ಮೂರು ದಶಕಗಳಲ್ಲಿ ಗದಗ ಜಿಲ್ಲೆಯಲ್ಲಿ ಹಲವು ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳು ಸೇವೆ ಸಲ್ಲಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಅದೇ ರೀತಿಯಲ್ಲಿ ನೂತನವಾಗಿ ನೇಮಕಗೊಂಡಿರುವ ಮಿಥುನ್ ಎಚ್‌.ಎನ್‌. ಅವರ ಸೇವೆಯಿಂದ ಜಿಲ್ಲೆಯ ಕಾನೂನು ಸುವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿ ಎಂದು ಗದಗ-ಬೆಟಗೇರಿ ಮಹಿಳಾ ಸಂಘಟನೆ ಮುಖಂಡರು ಆಶಿಸಿದರು.  

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ಮಹಿಳಾ ಸಂಘಟನೆಯ ಸದಸ್ಯರಾದ ಶ್ರೀಮತಿ ದ್ರಾಕ್ಷಾಯಣಿ ಹಾಸಲಕರ, ಪೂಜಾ ಬೆವೂರ, ಚೇತನಾ ಸೀತಾರಳ್ಳಿ, ಸಂತೋಷ ಬಣಕಾರ, ಬಾಲರಾಜ್ ಅರಬರ, ಸಿದ್ದು ಹಿರೇಗೌಡರ, ಯಲ್ಲಪ್ಪ ದೊಡಕಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.