ಮರಗಳ ಮರಗಳ ಮಾರಣ: ಅಧಿಕಾರಿಗಳ ನಿರ್ಲಕ್ಷ್ಯ

ತಾಂಬಾ 14: ಇಲ್ಲಿ ನಿತ್ಯ ಮರಗಳ ಮಾರಣಹೋಮ ಸರಕಾರ ಕಾಡು ಬೆಳಸಿ ನಾಡು ಉಳಿಸಿ ಎಂಬ ಮಂತ್ರ ಪಠಿಸುತ್ತಿದೆ. ಅದೇ ರೀತಿ ಮರಗಳಿಗಾಗಿ ಸಾವಿರಾರು ಕೋಟಿ ಅನುದಾನ ವಹಿಸುತ್ತಿದೆ ಆದರೆ ಅದು ಮಣ್ಣು ಪಾಲಾಗುತ್ತದೆ ಎಂಬುದಕ್ಕೆ ಇಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮವೆ ಸಾಕ್ಷಿ 

ಹೌದು ಬೇವು ಹುಣಸೆ ಸೇರಿದಂತೆ ನಿತ್ಯ ಇಲ್ಲಿ ಹಲವಾರು ಮರಗಳ ಮಾರಣ ಹೋಮ ನಡೆಯುತ್ತ್ತಿದೆ. ಕಡಿದ ಮರಗಳು ಟ್ರಾಕ್ಟರ್ ಮೂಲಕ ರಾಷ್ಟ್ರೀಯ ಹೆದ್ದಾರಿ ಇಂಡಿ ದೇವರಹಿಪ್ಪರಗಿ ಮಾರ್ಗವಾಗಿ ಪ್ರತಿದಿನ ಎನಿಲ್ಲವೆಂದರು 8ರಿಂದ 10ಟ್ರಾಕ್ಟರ ಮರಗಳ ಸಾಗಾಟಾ ವಾಗುತ್ತಿದ್ದರು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕಂಡು ಕಾಣದಂತೆ ವತರ್ಿಸುತ್ತಿದ್ದಾರೆ. ಪಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ ವಿಜಯಪೂರ ರಾಯಚೂರ ಮತ್ತು ಕೆಲವು ಜಿಲ್ಲೆಗಳಲ್ಲಿ ರೈತರು ತಮ್ಮ ಪ್ರಾಪಂಚಿಕ ಅಡಚಣೆ ಇದ್ದರೆ ಮರಗಳನ್ನು ಕಡೆಯಲು ಅರಣ್ಯವೃಕ್ಷ ಅಧಿನಿಯಮದಲ್ಲಿ ವಿನಾಯತಿ ನಿಡಲಾಗಿದೆ. ರೈತರು ಮರ ಕಡೆದು ಮಾರಾಟಾ ಮಾಡಬೇಕಾದರೆ ಇಲಾಖೆ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕೆಂದು ಹೇಳುತ್ತಾರೆ.

ಅನಧಿಕೃತವಾಗಿ ತಲೆಯೆತ್ತಿರುವ ಇದ್ದಲಿ ಘಟಕಗಳು: ಇಂಡಿ ಸಿಂದಗಿ ತಾಲೂಕಿನ ಕೆಲಕಡೆಗಳಲ್ಲಿ ಅರಣ್ಯ ಲೂಟಿ ಮತ್ತು ಅನಧೀಕೃತ ಇದ್ದಿಲು ಘಟಕ ಸ್ಥಾಪನೆ ಅವ್ಯಾತವಾಗಿದ್ದರು ಅರಣ್ಯ ಇಲಾಖೆ ಅಧಿಕಾರಿಗಳು ತಮಗೆನು ಸಂಬಂಧವಿಲ್ಲದಂತೆ ವತರ್ಿಸುತ್ತಿದ್ದಾರೆ. ಈ ಭಾಗದಲ್ಲಿ ಅನಧಿಕೃತವಾಗಿ ನೂರಾರು ಇದ್ದಿಲು ತಾಯಾರಿಸುವ ಘಟಕಗಳಿವೆ ಇದರಿಂದ ವಾಯು ಮಾಲಿನ್ಯವು ಹೆಚ್ಚಿದೆ ಇದು ಅರಣ್ಯ ಇಲಾಖೆಗೆ ಗೊತ್ತಿದ್ದರು ಕ್ರಮ ಕೈಗೊಂಡಿಲ.್ಲ ಹಗಲು ವೇಳೆಯಲ್ಲೆ ಕಾಡಿನೋಳಗೆ ಹೋಗಿ ಮರ ಕಡೆದು ಸಾಗಿಸಲಾಗುತ್ತಿದೆ. ಹಲವು ಗ್ರಾಮಗಳಲ್ಲಿ ಇದ್ದಿಲು ಘಟಕಗಳು ಅನಧಿಕೃತವಾಗಿ ತಲೆ ಎತ್ತಿವೆ ಅಲ್ಲದೆ ಇದ್ದಲು ತಯಾರಿಸಿ ಮಹಾರಾಷ್ಟ್ರಕ್ಕೆ ಮತ್ತು ಆಂದ್ರಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಇದ್ದಿಲನ್ನು ಹೊರರಾಜ್ಯಕ್ಕೆ ಕಳುಹಿಸಲು ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳಿಂದ ಪರವಾನಿಗೆ ಪಡೆದು ಕೊಳ್ಳಬೇಕಾಗುತ್ತದೆ. ಆದರೆ ಈ ನಿಯಮ ಅಷ್ಟಕ ಅಷ್ಟೆ ಪಾಲನೆ ಆಗುತ್ತಿದೆ ಇದ್ದಿಲು ತಯಾರಿಕೆಗೆ ಮರದ ದಿನ್ನೆಗಳನ್ನು ಬಳಸುತ್ತಿರುವುದರಿಂದ ಗಿಡ ಮರಗಳು ಮಾಯವಾಗಿ ಬರಗಾಲ ಪ್ರದೇಶವಾಗಿ ರೂಪಗೊಂಡಿದೆ ಒಂದೆಡೆ ಅರಣ್ಯ ನಾಶದಿಂದ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಕಟ್ಟಿಗೆ ಸಿಗುವದು ಕಷ್ಟವಾಗಿದೆ. ಇನ್ನೊಂದೆಡೆ ಇದ್ದಿಲು ತಯಾರಿಕೆ ಘಟಕಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದ್ದಲು ಘಟಕಗಳ ಸಮೀಪ ವಿರುವ ಜನರ ಆರೋಗ್ಯದ ಮೇಲೆಯು ದುಷ್ಪರಿಣಾಮವಾಗುತ್ತಿದೆ. 

ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ: ತಾಲೂಕಿನಲ್ಲಿ 48 ಎಕರೆ ಅರಣ್ಯ ಪ್ರದೇಶವಿದೆ ಕಳೇದ ವರ್ಷ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಬರುವ 40 ಹೇಕ್ಟೆರ ಜಮಿನಿನಲ್ಲಿ 8ಸಾವೀರ ಸಸಿಗಳನ್ನು ನೆಡಲಾಗಿದೆ ಎಂದು ಹೇಳುತ್ತಾರೆ ಆದರೆ ನೆಟ್ಟಗಿಡಗಳನ್ನು ಪೋಷಿಸುವ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ ಸರಿಯಾದ ಸಂರಕ್ಷಣೆ ಇಲ್ಲದೆ ಒಣಗುತ್ತಿರುವ ಶಶಿಗಳನ್ನು ಸಂಬಂಧಿಸಿದ ಅಧಿಕಾರಿಗಳು ಸಂರಕ್ಷಣೆ ಮಾಡಬೇಕು.