ರಾಷ್ಟ್ರೀಯ ಮಟ್ಟದ ತೋಟಗಾರಿಕೆಯ ಪಾರ್ಕ್‌ ಡಿಪಿಆರ್ ಸಿದ್ಧ: ಶಾಸಕ ಬಸವರಾಜ ದಡೇಸೂಗೂರು

ಕನಕಗಿರಿ 28: ಸಮೀಪದ ಸಿರಿವಾರ ಗ್ರಾಮದ ಹತ್ತಿರ ಸುಮಾರು 240ಎಕರೆ ಭೂಮಿಯಲ್ಲಿ ರೈತರ ಅನುಕೂಲಕ್ಕಾಗಿ ರಾಷ್ಟ್ರೀಯ ಮಟ್ಟ ತೋಟಗಾರಿಕೆ ಪಾರ್ಕಿಗೆ ಡಿಪಿಆರ್ ಸಿದ್ಧವಾಗಿದೆ ಎಂದು ಶಾಸಕ ಬಸವರಾಜ ದಡೇಸೂಗೂರು ಹೇಳಿದರು. 

ಅವರು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ಕರೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈ ಭಾಗದ ರೈತರು ಸುಮಾರು ವರ್ಷಗಳಿಂದ ಉದ್ಯೋಗ ಆರಿಸಿ ಹೊರ ಜಿಲ್ಲೆಗಳಿಗೆ ಕ್ಷೇತ್ರದ ಜನರು ಗುಳ್ಳೆ ಹೋಗುತ್ತಿರುವುದನ್ನು ತಪ್ಪಿಸಲು ಮತ್ತು ಉದ್ಯೋಗ ಸೃಷ್ಟಿ ಮಾಡಲು ಹಾಗೂ ರೈತರು ಸಾವಲಂಬಿಗಳಾಗಿ ಆರ್ಥಿಕವಾಗಿ ಸಬಲರಾಗಲು ಈ ಯೋಜನೆಯನ್ನು ತರಲಾಗಿದೆ ನನ್ನ ಕನಸಿನ ಯೋಜನೆಯಾಗಿದ್ದು ಆದಷ್ಟು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು. 

ನಂತರ ಮಾತನಾಡಿದ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ಮಾತನಾಡಿ ದಾಳಿಂಬೆ ಪೆರ್ಲ ದ್ರಾಕ್ಷಿ ಪಪ್ಪಾಯಿ ಮಾವು ಬಾಳೆ ಸೇರಿದಂತೆ ವಿವಿಧ ಹೊಸ ತಳಿಗಳ ಬೆಳೆಯಲು ರೈತರಿಗೆ ಈ ಪಾರ್ಕ್‌ ನಿಂದ ಅನುಕೂಲವಾಗುತ್ತದೆ ಮತ್ತು ದೂರದ ಊರುಗಳಿಗೆ ಮಾರುಕಟ್ಟೆಗೆ ಹೋಗುವುದು ತಪ್ಪುತ್ತದೆ ಈ ಪಾರ್ಕ್‌ನಲ್ಲಿ ರೈತರಿಗೆ ತರಬೇತಿ ಸೇರಿದಂತೆ ವಿವಿಧ ಸೌಲಭ್ಯಗಳು  ಹೊಂದಿರುತ್ತದೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 25 ರಿಂದ 30,000 ರೈತ ಕುಟುಂಬಗಳಿಗೆ ಉದ್ಯೋಗ ದೊರಕುತ್ತದೆ ಈ ಭಾಗದ ರೈತರ ಸಮೃದ್ಧರಾಗಿ ಜೀವನ ಸಾಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. 

ನಂತರ ತಸಿಲ್ದಾರ್ ಧನಂಜಯ ಮಾಲ್ಗಿತ್ತಿ ಮಾತನಾಡಿ ಎರಡು ಮೂರು ದಿನಗಳಲ್ಲಿ ಸುಮಾರು 230 ಎಕರೆ ಭೂಮಿಯನ್ನು ಸರ್ವೆ ಮಾಡಿ ಅಡ್ವಸ್ತ್‌ ಮಾಡಿ ಕೊಡಲಾಗುವುದು ಎಂದರು ಇದೇ ವೇಳೆ ಯೋಜನಾ ವ್ಯವಸ್ಥಾಪಕ ಶಿವಪ್ರಕಾಶ್ ಮಾತನಾಡಿ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ ಈ ಯೋಜನೆ ಯಲ್ಲಿ ಬಿಜೋತ್ಪಾದನಾ ಘಟಕ ಸಿತಲೀಕರಣ ಘಟಕ ನರ್ಸರಿ ಪ್ರಯೋಗಾಲಯ ಪಶು ಸಂಗೋಪನೆ ಮೀನುಗಾರಿಕೆ ಕುರಿ ಸಾಕಾಣಿಕೆ ವಿವಿಧ ಜಿಲ್ಲೆಗಳಿಂದ ಮಾರುಕಟ್ಟೆಗೆ ಬರುವ ಉದ್ಯಮಗಳಿಗೆ  ಎಲಿಫ್ಯಾಡ್ ನಿರ್ಮಿಸಲಾಗುವುದು ಈ ಯೋಜನೆ ಮೂರು ವರ್ಷದ ಒಳಗಾಗಿ ಅನುಷ್ಠಾನಗೊಳ್ಳಲಿದೆ ಮತ್ತು ಇದನ್ನು ಜಿಲ್ಲಾಧಿಕಾರಿಗಳು ಹಾಗೂ ಶಾಸಕರೊಂದಿಗೆ ಚರ್ಚಿಸಿ ಇದನ್ನು ಸರ್ಕಾರಕ್ಕೆ ಸಲ್ಲಿಸ ಲಾಗುವುದು ಎಂದರು ಮತ್ತು ಯೋಜನಾ ವರದಿಯನ್ನು ನೀಡಿದರು ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಸೇರಿದಂತೆ ರೈತರು ಉಪಸ್ಥಿತರಿದ್ದರು.