ರಾಷ್ಟ್ರೀಯ ಪಲ್ಸ್‌ ಪೋಲಿಯೊ ಕಾರ್ಯಕ್ರಮಕ್ಕೆ ದೊಡ್ಡನಗೌಡ ಪಾಟೀಲ್‌ರಿಂದ ಚಾಲನೆ

ವಿಶೇಷ ವರದಿ; ಬಸವರಾಜ ಪಲ್ಲೇದ   

ಕುಷ್ಟಗಿ, ಮಾ,02; ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕೆ ಕಾರ್ಯಕ್ರಮ ಪ್ರಯುಕ್ತ ರವಿವಾರ ಬೆಳಿಗ್ಗೆ 9:30ಕ್ಕೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಹಾಗೂ ವಿಧಾನಸಭಾ ವಿರೋಧ ಪಕ್ಷದ ಮುಖ್ಯ ಸಚೇತಕ  ದೊಡ್ಡನಗೌಡ ಎಚ್ ಪಾಟೀಲ್ 0 ದಿಂದ 5 ವರ್ಷದ ಮಗುವಿಗೆ ಪಲ್ಸ್‌ ಪೋಲಿಯೊ ಹನಿ ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಆನಂದ ಗೋಟೂರ ಹೇಳಿದರು.  

ಶನಿವಾರ ಮಧ್ಯಾಹ್ನ ತಾಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಲ್ಲಿ ಒಟ್ಟು 329969 ಜನ ಸಂಖ್ಯೆಯಲ್ಲಿ ಲಸಿಕೆಗೆ ಒಳಪಡುವ 0 ದಿಂದ 5 ವರ್ಷದ ಒಟ್ಟು ಮಕ್ಕಳ ಸಂಖ್ಯೆ 38308 ಇರುತ್ತದೆ. ಮಾ.3 ರವಿವಾರ ಬೂತ್ ಮಟ್ಟದಲ್ಲಿ ಪಲ್ಸ್‌ ಪೋಲಿಯೊ ಹನಿ ಹಾಕಲಾಗುತ್ತದೆ. ಮಾ. 4. 5. 6 ರವರೆಗೂ ಆರೋಗ್ಯ ಇಲಾಖೆಯ ವಿವಿಧ ವರ್ಗಗಳ ಸಿಬ್ಬಂದಿಯ ತಂಡದವರು ಪ್ರತಿ ಮನೆ ಮನೆಗೆ ತೆರಳಿ ಪಲ್ಸ್‌ ಪೋಲಿಯೊ ಹನಿ ಹಾಕುತ್ತಾರೆ ಎಂದು ಹೇಳಿದರು. ಚಳಗೇರಿ 22 ಬೂತ್, ಹನುಮಸಾಗರ 19, ಹನುಮನಾಳ 18, ಹಿರೇಗೋಣ್ಣಾಗರ 10, ಮಾಲಗತ್ತಿ 06, ಹೂಲಗೇರಿ 10, ದೋಟಿಹಾಳ 19, ಮುದೇನೂರ 13, ತಾವರಗೇರಿ 18, ಹಿರೇಮನ್ನಾಪೂರ 18, ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯಲ್ಲಿ 28 ಒಟ್ಟು 181 ಪೋಲಿಯೊ ಬೂತ್ ಗಳನ್ನು ರಚಿಸಲಾಗಿದೆ.ತಾಲೂಕಿನ ವ್ಯಾಪ್ತಿಯಲ್ಲಿ 326 ಜನ ಪೋಲಿಯೊ ಲಸಿಕೆಕಾರರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.  

05 ಪೋಲಿಯೊ ಲಸಿಕೆ ಮೊಬೈಲ್ ತಂಡ ರಚಿಸಲಾಗಿದೆ. 07 ಪೋಲಿಯೊ ಲಸಿಕೆ ಟ್ರಾನ್ಸ್‌ ಸಿಸ್ಟ್‌ ತಂಡವನ್ನು ನಿಯೋಜಿಸಲಾಗಿದೆ. 37 ಜನ ಪೋಲಿಯೊ ಲಸಿಕೆ ಮೇಲ್ವಿಚಾರಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ ಕಾರಣ ತಾಲೂಕಿನ ಪ್ರತಿಯೊಬ್ಬ ನಾಗರಿಕರು ಪೋಲಿಯೊ ಬಗ್ಗೆ ನಿರ್ಲಕ್ಷ್ಯವಹಿಸಬೇಡಿ 0 ದಿಂದ 5 ವರ್ಷದ ಎಲ್ಲಾ ಮಗುವಿಗೆ ತಪ್ಪದೇ ಪಲ್ಸ್‌ ಪೋಲಿಯೊ ಲಸಿಕೆ ಹನಿ ಹಾಕಿಸಬೇಕು ಎಂದು ತಿಳಿಸಿದ್ದಾರೆ.