ಬೇಸಿಗೆ ದಿನಗಳಲ್ಲಿ ಬಡವರಿಗೆ ನರೇಗಾ ಬದುಕನ್ನು ಕಟ್ಟಿಕೊಡುತ್ತದೆ: ಶಿವಯೋಗಿ ರಿತ್ತಿ

ರೋಣ 28:  ನರೇಗಾ ಯೋಜನೆಯು ಬೇಸಿಗೆಯ ದಿನಗಳಲ್ಲಿ ಬಡವರಿಗೆ ಅಸರೆ ಆಗುವುದರ ಜೊತೆಗೆ ಬದುಕನ್ನು ಕಟ್ಟಿಕೊಡುತ್ತದೆ. ಈ ಹಿನ್ನೆಲೆ ತಾವೆಲ್ಲರೂ ಪ್ರಾಮಾಣಿಕತೆ ಯಿಂದ ಕೆಲಸ ಮಾಡಿದರೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಢ ಪಡಿಸಕೊಳ್ಳುತ್ತಾರೆ.ಅಂತಾ  ಕಾಯಕ ಬಂದುಗಳ ಸಭೆಯಲ್ಲಿ ಸಹಾಯಕ ನಿರ್ಧಶಕ(ಪಂ ರಾ) ಶಿವಯೋಗಿ ರಿತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. 

ಗುರುವಾರ ತಾಲೂಕಿನ ಜಕ್ಕಲಿ ಗ್ರಾಮ ಪಂಚಾಯತಿ ಯಲ್ಲಿ ನಡೆದ ಕಾಯಕ ಬಂಧುಗಳ ಸಭೆಯಲ್ಲಿ   ಮಾತನಾಡಿದ ಅವರು. ಕಾಯಕ ಬಂಧುಗಳು ಕರ್ತವ್ಯ ಹಾಗೂ ಹಕ್ಕುಗಳ ಪ್ರತಿಯೊಬ್ಬರು ಪಾಲನೆ ಮಾಡಬೇಕು. ಪ್ರತಿ ಒಂದು ಕೂಲಿಕಾರರ ಗುಂಪಿನಲ್ಲಿ ನಿಮ್ಮನ್ನು ಕಾಯಕ ಬಂಧು ಅಂತಾನೇ ಗುರುತಿಸಲಾಗುವದು. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-6 ಗ್ರಾಮ ಪಂಚಾಯತಿ ಗೆ ಸಲ್ಲಿಸಬೇಕು.15 ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು ಮತ್ತು ಕೆಲಸದ ಸ್ಥಳದಲ್ಲಿ ಮಾರ್ಕಿಂಗ್ ಮಾಡಿ ಕೂಲಿಕಾರರಿಗೆ ಮಾಹಿತಿ ನೀಡುವದು. ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿಯುವ ನೀರು,ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು. ಕಾಯಕ ಬಂದುಗಳು ಅರೆಕುಶಲ ಕಾರ್ಮಿಕರೆಂದು ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೂಲಿಕಾರರ ಜಾಬ ಕಾರ್ಡಗಳಲ್ಲಿ ಇಂದ್ರಿಕರಿಸಬೇಕೆಂದು ಹೇಳಿದರು. 

ಎಪ್ರೀಲ್ 1 ರಿಂದ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು ಹಾಗೆಯೇ ಜಕ್ಕಲಿ ಗ್ರಾಮ ಪಂಚಾಯತಿಯಲ್ಲಿಯೂ ಕೆಲಸ ಆರಂಭವಾಗುತ್ತದೆ. ಹಾಗಾಗಿ ತಾವೆಲ್ಲರೂ ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವಾಗಬೇಕು ಅಂತಾ ಹೇಳಿದರು.  

ನರೇಗಾ ಕೂಲಿಕಾರರಿಗೆ ನಿನ್ನೆಯಿಂದ ಕೂಲಿ ಪರಿಷ್ಕರಿಣೆ ಆಗಿದ್ದು ದಿನವೊಂದಕ್ಕೆ ಕೂಲಿ ಮೊತ್ತವನ್ನು 349 ರೂಪಾಯಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಬಿತ್ತನೆಯ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು. ಜಕ್ಕಲಿ ಗ್ರಾಮ ಪಂಚಾಯತಿ ಃಈಖಿ,ಉಏಒ ಕಾಯಕ ಬಂದುಗಳು,ನರೇಗಾ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಜರಿದ್ದರು.