ಎಂ. ಕೆ. ಹುಬ್ಬಳ್ಳಿಯಲ್ಲಿ ನರಸಿಂಹ ಜಯಂತಿ

Narasimha Jayanti in M. K. Hubballi

ಬೆಳಗಾವಿ 08: ನರಸಿಂಹಪುರ (ಮು.ಖಾ ಹುಬ್ಬಳ್ಳಿ) ಶ್ರೀ ಅಶ್ವತ್ಥ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ  ವೈಶಾಖ ಉತ್ಸವವನ್ನು ಆಚರಿಸಲಾಗುವುದು. ದಿ. 10 ಶನಿವಾರ ಬೆಳಗ್ಗೆ ಧ್ವಜಾರೋಹಣ, ಮಧ್ಯಾಹ್ನ ಜ್ಞಾನ ಯಜ್ಞ, ಪಂಡಿತರಿಂದ ಭಾಗವತ ಸಪ್ತಮ ಸ್ಕಂದ ಪ್ರವಚನ, ಶ್ರೀ ನರಸಿಂಹ ದೇವರ ಜನನೋತ್ಸವ, ತೊಟ್ಟಿಲು ಹಾಗೂ ಪಲ್ಲಕ್ಕಿ ಸೇವೆ, ಪರ್ಯಾಯಸ್ಥ ಅರ್ಚಕರಾದ ಪಂ.ರಾಮಾಚಾರ್ಯ ಪೂಜಾರ ಇವರಿಂದ ಪಂಚಾಮೃತ, ವಿಶೇಷ ಅಲಂಕಾರ ಪೂಜೆ ನಂತರ ತೀರ್ಥ ಪ್ರಸಾದ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.  

ಇದೇ ದಿ. 11 ರವಿವಾರದಂದು ಬೆಳಗ್ಗೆ ಸುಪ್ರಭಾತ, ದೇವರ ನಾಮ 10ಗಂಟೆಗೆ ಮನ್ಯುಸೂಕ್ತ ಪುನಶ್ಚರಣ ಹೋಮ,  ಶ್ರೀ ಅಶ್ವತ್ಥ ಲಕ್ಷ್ಮೀನರಸಿಂಹ  ಕ್ಷೇತ್ರ ಸ್ವಾಮಿಗೆ ಹಾಗೂ ಪರಿವಾರ ದೇವತೆಗಳಿಗೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ,  ಪಂಡಿತರಿಂದ ಉಪನ್ಯಾಸ, ಪಲ್ಲಕ್ಕಿ ಸೇವೆ, ನೈವೇದ್ಯ, ಶ್ರೀ  ಯಾದವಾರ್ಯ  ಭಜನಾ ಮಂಡಳಿಯಿಂದ ಭಜನೆ , ತೀರ್ಥ ಪ್ರಸಾದವಿದೆ. ದಿ. 12  ಸೋಮವಾರದಂದು ಬೆಳಗ್ಗೆ ಸುಪ್ರಭಾತ, 10 ಗಂಟೆಗೆ ವ್ಯಾಸ ಪೂಜೆ, ಪಂಡಿತರಿಂದ ಉಪನ್ಯಾಸ, 11 ಗಂಟೆ ಗೆ  ಕೇಶವರಾವ್ ಹ ಕುಲಕರ್ಣಿ ಸಾಽಽತಿಗಡಿ ಇವರಿಂದ ರಥೋತ್ಸವ ಹೋಮ ಹಾಗೂ ರಥೋತ್ಸವ, ದೇವತೆಗಳಿಗೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ, ಪಲ್ಲಕ್ಕಿ ಸೇವೆ,ನೈವೇದ್ಯ,ತೀರ್ಥ ಪ್ರಸಾದ ಸಾಯಂಕಾಲ ಕು.ರಜತ ಕುಲಕರ್ಣಿ ನಂದಿಹಳ್ಳಿ, ಹನುಮಂತರಾವ್ ಕುಲಕರ್ಣಿ ದೇಗುಲ ಹಳ್ಳಿ (ಧಾರವಾಡ), ಕು. ಕೃಷ್ಣವೇಣಿ ಪಾಂ. ಪೂಜಾರ ಇವರಿಂದ ಸಂಗೀತ ಸುಧೆ ನಂತರ ರಮೇಶ ಮಹಾಜನ್ ಗೋಕಾಕ ಇವರಿಂದ ಶಹನಾಯಿ ವಾದನ, ಕು.ಪಾರ್ವತಿ ದೀಕ್ಷಿತ್ ಹಾಗೂ ಸಂಗಡಿಗರಿಂದ ಹಾಗೂ ಸಾನ್ವಿ ಕುಲಕರ್ಣಿ ಧಾರವಾಡ ಇವರಿಂದ ಭರತನಾಟ್ಯ ಕಾರ್ಯಕ್ರಮಗಳಿವೆ. ಮಂಗಳವಾರ ಇದೆ ದಿ.13 ರಂದು 10 ಗಂಟೆಗೆ ಪಲ್ಲಕ್ಕಿ ಸೇವೆ, ವಾರ್ಷಿಕ ಸರ್ವ ಸಾಧಾರಣ ಸಭೆ, ಪಂಚಾಮೃತ ಅಭಿಷೇಕ, ನಾರಾಯಣಾಚಾರ್ಯ ಬೆಳಗಾಂವಕರ ಇವರಿಂದ ಸಂಪ್ರೋಕ್ಷಣೆ ಹೋಮ, ತೀರ್ಥ ಪ್ರಸಾದದೊಂದಿಗೆ ವಿವಿಧ ಕಾರ್ಯಕ್ರಮಗಳು ಸಂಪನ್ನಗೋಳ್ಳುವವು. ದಿ. 11 ಮತ್ತು 12 ರಂದು ಪ್ರಖ್ಯಾತ ವೈದ್ಯರಾದ ಡಾಽಽ ರಾಘವೇಂದ್ರ ಬೆಳಗಾಂವಕರ ಹಾಗೂ ತಂಡ, ಸುಶ್ರೂತ ಆಸ್ಪತ್ರೆ ಮತ್ತು  ಡಾಽಽ ಕಟ್ಟಿ ಹಾಗೂ ತಂಡ ಜಯಪ್ರಿಯಾ ನೇತ್ರಾಲಯ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ, ಸದ್ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.  

ಸತತ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಈ ಕಾರ್ಯಕ್ರಮಗಳ ಪೂರ್ವಭಾವಿ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ರಾದ  ವೆಂಕಣ್ಣಾಚಾರ ಕೌಜಲಗಿ, ಉಪಾಧ್ಯಕ್ಷರಾದ  ಭೀಮಸೇನಾಚಾರ ಅಷ್ಟಪುತ್ರಿ , ಪ್ರಚಾರ ಸಮಿತಿ ಅಧ್ಯಕ್ಷರಾದ  ಪಾಂಡುರಂಗ ಕುಲಕರ್ಣಿ, ಕಾರ್ಯದರ್ಶಿ ವಾದಿರಾಜ ಬಾಜೀಕರ, ಖಜಾಂಚಿ ರಾಮಕೃಷ್ಣ ಬೆಳಗಾಂವಕರ ಹಾಗೂ  ಸದಸ್ಯರುಗಳಾದ ಸಂದೀಪ್ ಕುಲಕರ್ಣಿ,  ಗುರುರಾಜ ಮಠದ, ಕಿರಣ್ ಗಣಾಚಾರಿ ಹಾಗೂ ಶ್ರೀನಿವಾಸ ಕುಲಕರ್ಣಿ ಮುಂತಾದವರು ಭಾಗವಹಿಸಿ ಈ ಪ್ರಕಟಣೆ ಮೂಲಕ ತಿಳಿಸಿದ್ದಾರೆ. 0ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರಾದ ರಘುನಾಥ ಕೌಜಲಗಿ 9620971818 ಇವರನ್ನು ಸಂಪರ್ಕಿಸಲು ಕೋರಲಾಗಿದೆ.