ಮಹಲಿಂಗಪುರ

'ನಾರನಗೌಡ ಉತ್ತಂಗಿಗೆ ಜಿಲ್ಲಾ ಸಹ ಸಂಚಾಲಕ ಜವಾಬ್ದಾರಿ'

'ನಾರನಗೌಡ ಉತ್ತಂಗಿಗೆ ಜಿಲ್ಲಾ ಸಹ ಸಂಚಾಲಕ ಜವಾಬ್ದಾರಿ'

ಲೋಕದರ್ಶನ ವರದಿ 

ಮಹಾಲಿಂಗಪುರ 17 : ಸ್ಥಳೀಯ ನಿವಾಸಿ, ಹೊಸ ದಿಗಂತ ಪತ್ರಿಕೆಯ ವರದಿಗಾರ, ರಾಷ್ಟ್ರೋತ್ಥಾನ ಪರಿಷತ್ ಪ್ರಶಿಕ್ಷಣ ಭಾರತಿ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಇವರಿಗೆ ರಾಷ್ಟ್ರೋತ್ಥಾನ ಪರಿಷತ್ತಿನ ಬಾಗಲಕೋಟ ಜಿಲ್ಲಾ ಸಹ ಸಂಚಾಲಕರಾಗಿ ಜವಾಬ್ದಾರಿ ನೀಡಲಾಗಿದೆ. 

ಜವಾಬ್ದಾರಿ ನೀಡಿದ ರಾಜ್ಯ ಸಂಚಾಲಕ ಬಸವರಾಜ ಟಿ.ಎಸ್‌.  ರಾಷ್ಟ್ರೋತ್ಥಾನ ಪರಿಷತ್ತಿನ ಶಿಕ್ಷಣ , ಸಾಹಿತ್ಯ, ಆರೋಗ್ಯ, ಸೇವಾ ಕಾರ್ಯಗಳಲ್ಲಿ ನಿರಂತರ ತೊಡಗಿ ಜಿಲ್ಲೆಯಾದ್ಯಂತ ಯಶಸ್ವಿಗೊಳಿಸಲು ಸಂಘಟನೆ, ಆಯೋಜನೆ, ಅನುಷ್ಠಾನದೊಂದಿಗೆ ರಾಷ್ಟ್ರೋತ್ಥಾನ ಪರಿಷತ್ತಿನ 60 ನೇ ವರ್ಷಾಚರಣೆ ರಾಷ್ಟ್ರೀಯ ಸ್ವಯಂಸೇವಕ ಸಂಘದ 100ನೇ ವರ್ಷಾಚರಣೆ ಸಂದರ್ಭದ ಯೋಜನೆಗಳು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಅವಿರತ ಶ್ರಮಿಸಲು ತಿಳಿಸಿದ್ದಾರೆ. ವಿಭಾಗ ಸಂಯೋಜಕ ಶ್ರೀನಿವಾಸ ಪಾಟೀಲ ಜವಾಬ್ದಾರಿ ಹಸ್ತಾಂತರಿಸಿದರು. 


ಸುದ್ದಿ ಓದಿ