ಮಠಾಧೀಶರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ

ಮಠಾಧೀಶರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ Mutt head attacked by miscreants

 ಯಮಕನಮರಡಿ 04 ;  ಸ್ಥಳೀಯ ಸುಕ್ಷೇತ್ರ ಹುಣಸಿಕೊಳ್ಳ ಮಠದ ಉತ್ತರಾಧಿಕಾರಿಗಳಾದ  ಸಿದ್ದಬಸವ ದೇವರು ಹುಣಸಿಕೊಳ್ಳ  ಮಠ ಇವರ ಮೇಲೆ ಕೆಲ ಕಿಡಿಗೇಡಿಗಳು ರಾತ್ರಿ 8 ಗಂಟೆ ವೇಳೆಯಲ್ಲಿ ಬಂದುಹಲ್ಲೆ ನಡೆಸಿದ ಘಟನೆ ವರದಿಯಾಗಿದೆ ಶ್ರೀಮಠದಲ್ಲಿ ಮಾದಕ ವಸ್ತುಗಳ ಸೇವನೆ ಮಾಡುವುದು ಅನೈತಿಕ ಚಟುವಟಿಕೆ ಗಳು ನಡೆಯುತ್ತಾ ಬಂದಿರುವುದನ್ನು ತಡೆಯುವುದಕ್ಕಾಗಿ  ಬಹಳ ದಿನಗಳಿಂದ ಪ್ರಯತ್ನ ಮಾಡುತ್ತಾ ಬಂದಿದ್ದು ಮಠ ಕಟ್ಟುನಿಟ್ಟಿನ ಕ್ರಮ ಕೈ ಗೊಂಡಿದ್ದು ಇರುತ್ತದೆ, ಆದರೂ ಸಹಿತ ಕಿಡಿಗೇಡಿಗಳು ದಿನಾಂಕ 1-7-2026 ರಂದು  ರಾತ್ರಿ 8 ಗಂಟೆ ಸುಮಾರಿಗೆ  ಶ್ರೀಮಠದಲ್ಲಿ ಮಾದಕ ವಸ್ತು ಸೇವಿಸುತ್ತಿರುವುದನ್ನು ಗಮನಿಸಿ ತಡೆಯಲು ಹೋದ ಶ್ರೀಗಳ ಶಿಷ್ಯನನ್ನು ಅವಾಚ ಶಬ್ದದಿಂದ ಬೈದು ಹಲ್ಲೆ ನಡೆ ಸುತ್ತಿದ್ದಾಗ ಶ್ರೀಗಳು ಹೊರಗೆ ಬಂದು ಗಲಾಟೆಯನ್ನು ಬಿಡಿಸುವುದಕ್ಕಾಗಿ ಪ್ರಯತ್ನಿಸಿದಾಗ ಶ್ರೀಗಳ ಮೇಲೆಯೂ ಹಲ್ಲೆ ನಡೆದಿದ್ದು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಕೂಡಲೇ ಪೊಲೀಸರು ಹಲ್ಲೆ ಕೋರರನ್ನು ಬಂದಿಸಿ ವಶಪಡಿಸಿಕೊಂಡು ಪ್ರಕರಣ ದಾಖಲ ಮಾಡಿದ್ದು ಇರುತ್ತದೆ.

ಆದರೆ ಅವರ ಮೇಲೆ ಯಾವುದೇ ತರದ ಕಾನೂನು ಕ್ರಮ ಜಾರಿ ಮಾಡದೆ ಇದ್ದ ಕಾರಣ ಕೆಲ ಜನರು ಬೇಸರಗೊಂಡು ಶ್ರೀಮಠಕ್ಕೆ ಭೇಟ್ಟಿ ನೀಡಿ ಶ್ರೀಗಳಿಂದ ಸಂದರ್ಶನ ಪಡೆದುಕೊಂಡು ತಮ್ಮ ಅನಿಸಿಕೆ ವ್ಯಕ್ತ ಪಡಿಸುತ್ತಾ ಇತ್ತೀಚಿನ ದಿನಗಳಲ್ಲಿ ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುವ್ಯವಸ್ಥೆ ಹದಗೆಟ್ಟಿದ್ದು ಇರುತ್ತದೆ ಎಂದು ರಾಜಕೀಯ ಮುಖಂಡರು ಹಾಗೂ ಗಣ್ಯ ವ್ಯಕ್ತಿಗಳು ಬಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು ಇರುತ್ತದೆ ಅಲ್ಲದೆ ಮಠಾಧೀಶರ ಮೇಲೆ ಹಲ್ಲೆ ನಡೆದಿರುವುದು ದುಷ್ಟಕರ ಸಂಗತಿಯಾಗಿದೆ ಎಂದು ಜೆಡಿಎಸ್ ಮುಖಂಡ ಮಾರುತಿ ಅಷ್ಟಗಿ ಹಾಗೂ ಮಾಜಿ ಮಂತ್ರಿ ಶಶಿಕಾಂತ್ ನಾಯಕ್ ಸೇರಿದಂತೆ ಅಪಾರ ಮಠಾಧೀಶರು ಸಹಿತ ಬಂದು ಬೆಟ್ಟಿ ನೀಡಿ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದ್ದಾರೆ ಅಲ್ಲದೆ ಶ್ರೀಮಠದ ಆಡಳಿತ ಮಂಡಳಿಯ ಸರ್ವ ಸದಸ್ಯರು ಶ್ರೀಮಠಕ್ಕೆ ಬೆಟ್ಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಈಗಾಗಲೇ ವಿವಿಧ ಯುಟ್ಯೂಬ್ ಚಾನೆಲ್ಗಳಲ್ಲಿ ಹಲ್ಲೆ ನಡೆದ ಸುದ್ದಿಯು ಹೊರೆದಾಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿವೆ ಇಂಥ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಶ್ರೀಮಠದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ ನೀಡಲಾಗಿದೆ ಎಂದು ತಿಳಿದು ಬಂದಿದೆ