ಕಿತ್ತೂರಿನಲ್ಲಿ ಜಮೀನು ವಿವಾದಕ್ಕೆ ಹತ್ಯೆ

ಕಿತ್ತೂರಿನಲ್ಲಿ ಜಮೀನು ವಿವಾದಕ್ಕೆ ಹತ್ಯೆ Murder over land dispute in Kittur



ಕಿತ್ತೂರು 16 : 38 ಗುಂಟೆ ಜಮೀನಿನ ಪಾಲಿಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ತಂದೆ ಹಾಗೂ ಮಗಳ ಮೇಲೆ ಕೊಡಲಿ ಮತ್ತು ಕುಡುಗೋಲಿನಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  

ಮೃತರನ್ನು ರುದ್ರ​‍್ಪ ಹಾಗೂ ಅವರ ಪುತ್ರಿ ಶಶಿಕಲಾ ಎಂದು ಗುರುತಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲೇ ರುದ್ರ​‍್ಪ ಅವರ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಶಶಿಕಲಾ ಅವರ ಮೇಲೂ ದಾಳಿ ನಡೆಸಲಾಗಿದೆ. ಯುವತಿಯ ಜಡೆ ಕತ್ತರಿಸಿ, ಕುಡುಗೋಲಿನಿಂದ ಹೊಡೆದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.  

38 ಗುಂಟೆ ಜಮೀನಿನ ಪಾಲಿಗೆ ಸಂಬಂಧಿಸಿದಂತೆ ರುದ್ರ​‍್ಪ ಹಾಗೂ ಅವರ ಸಹೋದರರ ನಡುವೆ ವಿವಾದವಿತ್ತು. ಮೂವರಿಗೆ ಜಮೀನು ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶ ನೀಡಿತ್ತು ಎನ್ನಲಾಗಿದೆ.

ರುದ್ರ​‍್ಪ ಅವರಿಗೆ ಬಂದಿದ್ದ ಜಮೀನನ್ನು ಈಗಾಗಲೇ ಮಾರಾಟ ಮಾಡಿದ್ದು, ಉಳಿದ ಜಮೀನಿನಲ್ಲೂ ಪಾಲು ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದರು. ಇದೇ ವಿಚಾರಕ್ಕೆ ಸಹೋದರರ ನಡುವೆ ಸಂಘರ್ಷ ಉಂಟಾಗಿತ್ತು ಎಂದು ತಿಳಿದುಬಂದಿದೆ.  

ಘಟನೆಗೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಹತ್ಯೆಯ ನಿಖರ ಕಾರಣ ಹಾಗೂ ಆರೋಪಿಗಳ ವಿರುದ್ಧದ ಕಾನೂನು ಕ್ರಮದ ಕುರಿತು ತನಿಖೆ ಮುಂದುವರಿದಿದೆ.