ತುಕ್ಕಾಭವಾನಿ ಸಮಿತಿಗೆ ನಿವೇಶನ ನೀಡುವುದಾಗಿ ಶಾಸಕರ ಅರುಣಕುಮಾರ ಭರವಸೆ

ಲೋಕದರ್ಶನವರದಿ

ರಾಣೇಬೆನ್ನೂರು: ಸ್ಥಳೀಯ ಕ್ಷತ್ರಿಯ ಶಿವಾಜಿ ಮರಾಠ ಸಮಾಜದ ವತಿಯಿಂದ ನಗರದ  ದೊಡ್ಡಪೇಟೆಯ ರಸ್ತೆಯಲ್ಲಿರುವ ಶ್ರೀ ತುಕ್ಕಾಭವಾನಿ ದೇವಸ್ಥಾನದಲ್ಲಿ ನೂತನ ಶಾಸಕ ಅರುಣಕುಮಾರ ಪೂಜಾರವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ 96ನೇ ಹುಟ್ಟು ಹಬ್ಬದ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

      ವಾಜಪೇಯಿ ಹುಟ್ಟು ಹಬ್ಬದ ಪ್ರಯುಕ್ತ ಕೇಕ ಕತ್ತರಿಸಿ ಮಾತನಾಡಿದ ಅರುಣಕುಮಾರ ಪೂಜಾರವರು ತಾಲೂಕನ್ನು ರಾಜ್ಯದಲ್ಲಿಯೇ ಮಾದರಿ ತಾಲೂಕು ಮಾಡುವ ಮಹದಾಸೆಯನ್ನು ಹೊತ್ತಿದ್ದೇನೆ. ಬಡವರಿಗೆ ಧ್ವನಿಯಾಗಿ, ರೈತರಿಗೆ ಆಸರೆಯಾಗಿ, ಯುವಕರಿಗೆ ಸ್ಪೂತರ್ಿಯಾಗಿ ಎಲ್ಲ ವರ್ಗದವರನ್ನು ಸಮನಾಗಿ ಕಾಣುವುದರ ಮೂಲಕ  ಅಭಿವೃದ್ಧಿಪಡಿಸಲು ಮುಂದಾಗುವುದಾಗಿ ಹೇಳಿದರು.

    ಗ್ರಾಮಗಳ  ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುವೆ,  ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಕುಂದು ಕೊರತೆ ಹಾಗೂ ಗ್ರಾಮದ ಅಭಿವೃದ್ಧಿಯ ಬಗ್ಗೆ ಚಚರ್ಿಸಿ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡುತ್ತೇನೆ. ಈ ಸಮಾಜದ ಏಳ್ಗೆಗೆ ನಾನು ಸಹ ಪ್ರಮಾಣಿಕವಾದ ಪ್ರಯತ್ನ ಮಾಡುತ್ತೇನೆ  ಎಂದರು. ಇದೇ ಸಂದರ್ಭದಲ್ಲಿ ತುಕ್ಕಾಭವಾನಿ ಸಮಿತಿಗೆ ನಿವೇಶನ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಆನಂತರ ಸಮಿತಿಯಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಾಸಕರಿಗೆ ಅಪರ್ಿಸಲಾಯಿತು. 

     ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಮೂತರ್ಿ ದಿಲ್ಲಿವಾಲಾ(ಘೋರ್ಪಡೆ), ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಜಯದೇವಪ್ಪ ಮಾಕನೂರ, ಕೆಎಂಪಿ ಮಣಿ, ರವಿ ಮಾಂಡ್ರೆ,  ಸಮಿತಿ ಸದಸ್ಯರಾದ ಉದಯ ಗಾವಡೆ, ಶಿವಾಜಿ ಮಾಕನೂರ, ಪರಶುರಾಮ ಕಾಳೇರ, ಶಿವಾನಂದ ಆರೇರ, ನರಸಿಂಹ ಮರಾಠೆ, ಸುಭಾಸ ಸೂರ್ಯವಂಶಿ, ರಾಘವೇಂದ್ರ ಚವ್ಹಾಣ, ನಿರ್ಮಲಾ ಕೃಷ್ಣಕುಮಾರ ಮಾನೆ, ಮಾರುತಿರಾವ್ ಜಾಧವ್, ಇಂದಿರಾಬಾಯಿ ಅನಿಲ್ ಶಿಂಧೆ, ಸತ್ಯನಾರಾಯಣ ಧಾರವಾಡಕರ್,  ಮಾಲತೇಶ ತೋಡೇಕರ್, ಶಿವಾಜಿ ಮಾರಾಠೆ, ಬಸವರಾಜ ರಾಜನಹಳ್ಳಿ ಸಮಿತಿಯ ಮಹಿಳಾ ಅಧ್ಯಕ್ಷೆ ನಾಗವೇಣಿ, ಶೋಭಾ ದಿಲ್ಲಿವಾಲಾ, ಶಶಿಕಲಾ ಮರಾಠೆ, ಸುಷ್ಮಾ ಗಾವಡೆ, ವಿನೋದಾಬಾಯಿ ಜಾಧವ್, ಕಾಶಿಬಾಯಿ ಜಾಧವ್,  ಪ್ರಶಾಂತ್ ಪವಾರ, ಎಂಎಸ್ ಜಾಧವ್ ಸೇರಿದಂತೆ ಸಮಾಜದ ಹಿರಿಯ-ಕಿರಿಯ ಭಾಂದವರು ಮತ್ತಿತರರು ಇದ್ದರು.