ಭಾವೈಕ್ಯತೆಗೆ ಹೆಸರಾದ ಮೊಹರಂ ಆಚರಣೆ

ಭಾವೈಕ್ಯತೆಗೆ ಹೆಸರಾದ ಮೊಹರಂ ಆಚರಣೆ Muharram celebration known for unity

ಲೋಕದರ್ಶನ ವರದಿ 

ದೇವರಹಿಪ್ಪರಗಿ 26 : ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಎಂದು ಮುಸಲ್ಮಾನ ಧರ್ಮದ ಬೇದ ಭಾವವಿಲ್ಲದೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಭಾವೈಕ್ಯತೆಗೆ ಪ್ರತಿಕವಾಗಿ ಮೊಹರಂ ಹಬ್ಬವನ್ನು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಐತಿಹಾಸಿಕ ಗೌಡರ ಮನೆಯಿಂದ ಡೋಲಿ ಮೂಲಕ ಹೊರಟ ಅಲೈ ದೇವರು ಸಂಭ್ರಮದಲ್ಲಿ ಅನೇಕ ಜನ ಭಾಗವಹಿಸಿ ಜಾನಪದ ಹಾಡುಗಳನ್ನು ಹಾಡುವುದರ ಮೂಲಕ ಕುಣಿದು ಕುಪ್ಪಳಿಸಿದರು. ಬೆಳಗಿನ ಜಾವ ಡೋಲಿ ಮೂಲಕ ಪಟ್ಟಣದ ಗೌಡರ ಮನೆಗೆ ಹೋದಾಗ ದೇವರಿಗೆ ನೈವೇದ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 

ಸಾಯಂಕಾಲ ದಪ್ಪನ ಚೌಡಿ ಕಟ್ಟೆಯಿಂದ ಕುನ್ನಿ ಬಾಯಿಯವರಿಗೆ ಡೋಲಿ ಮೂಲಕ ಅಲಯಿ ದೇವರು ಪೂಜೆ ಹೂ ಹಾಗೂ ನೀರಿನ ಅಭಿಷೇಕ ಮೂಲಕ ಊರಿನಲ್ಲಡೆ ಮೆರವಣಿಗೆ ಮೂಲಕ ದೇವರನ್ನು ಉಳಿಸುವ ಮೂಲಕ ಬಲು ವಿಜೃಂಭಣೆಯಿಂದಾಗಿ ಸಕಲ ವಿಧಿ ವಿಧಾನಗಳ ಮೂಲಕ ದಪ್ಪನ ಮಾಡುತ್ತಾರೆ.ಪಟ್ಟಣದ ಪ್ರಮುಖರಾದ ಬಸನಗೌಡ ಪಾಟೀಲ, ಜಮೀರ್ ಮಕಾಂದಾರ, ಶರಣು ಅಗಸರ ಈರಣ್ಣ ಮಾಲೂರ. ದಿನೇಶಗೌಡ ಪಾಟೀಲ, ರಮೇಶ ಇಳಗೇರ, ವಿಜುಗೌಡ ಕಾಶಿಪತಿಗೌಡ ಪಾಟೀಲ, ಸಂಗನಗೌಡ ಪಾಟೀಲ್‌. ಶೇಕು ವಾಡೆದಮನಿ ಸೇರಿದಂತೆ ಪಟ್ಟಣದ ಪ್ರಮುಖರು ಗಣ್ಯರು ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.