ತಾಯಿಯ ಋಣವು ಪ್ರತಿಯೊಬ್ಬರ ಮೇಲೆ ಅಪಾರವಾಗಿದೆ : ಬಸವರಾಜ ಹೊರಟ್ಟಿ

ಮುಂಡರಗಿ 26:  ತಾಯಿಯ ಋಣವು ಪ್ರತಿಯೊಬ್ಬರ ಮೇಲೆ ಅಪಾರವಾಗಿದೆ. ಜಗತ್ತಿನ ಶ್ರೇಷ್ಠ ತಾಯಿ ನೂರು ಶಾಲೆಗಳಿಗೆ ಸಮನಾಗಿದ್ದಾಳೆ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟರು. 

ಪಟ್ಡಣದ ಜ.ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶಿವಾನುಭವ ಸೇವಾ ಸಮಿತಿ, ಅವ್ವ ಸೇವಾ ಟ್ರಷ್ಟ ವತಿಯಿಂದ ಹಮ್ಮಿಕೊಂಡಿದ್ದ ಅಲ್ಲಮಪ್ರಭುಗಳ ಮತ್ತು  ಅಕ್ಕಮಹಾದೇವಿಯವರ ಜಯಂತಿ, 9ನೇಯ ಪೀಠಾಧಿಪತಿ ವೆಂಕಟಾಪೂರ ಅಜ್ಜನವರ 57ನೇಯ ಪುಣ್ಯಸ್ಮರಣೋತ್ಸವ, ಮಾತೋಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಸ್ಮರಣಾರ್ಥ ವಿಶೇಷ ಶಿವಾನುಭವ ಕಾರ್ಯಕ್ರಮದಲ್ಲಿ ಘನುಪಸ್ಥೀತಿ ವಹಿಸಿ ಅವರು ಮಾತನಾಡಿದರು. 

ಜಗತ್ತಿನಲ್ಲಿ ಎಲ್ಲಾ ಋಣವನ್ನು ತೀರಿಸಲು ಸಾದ್ಯವಿದೆ.ಆದರೇ ತಾಯಿಯ ಋಣವನ್ನು ತೀರಿಸಲು ಆಗುವದಿಲ್ಲ.ಮಹಿಳೆಯರು ಮನಸ್ಸು ಮಾಡಿದರೇ ಏನಾದರೂ ಸಾಧನೆ ಮಾಡಲು ಸಾದ್ಯವಿದೆ.ಒಳ್ಳೆಯ ಮಕ್ಕಳು ಹುಟ್ಟಲು ತಂದೆ-ತಾಯಿ ಪುಣ್ಯ ಮಾಡಿರಬೇಕು.ತಂದೆ-ತಾಯಿ ನೀಡುವ ಸಂಸ್ಕಾರದಿಂದ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಲು ಸಾದ್ಯವಿದೆ.ಉತ್ತಮವಾದ ಸಂಸ್ಕಾರ ಪಡೆದ ಮಕ್ಕಳು ತಂದೆ-ತಾಯಿಯನ್ನು ವೃದ್ದಾಶ್ರಮದಲ್ಲಿ ಬೀಡದೇ ಮನೆಯಲ್ಲಿ ಇಟ್ಟುಕೊಂಡು ಜೋಪಾನ ಮಾಡುತ್ತಾರೆ.ಮಠಗಳು ಅನ್ನದಾಸೋಹ, ಅಕ್ಕರ ದಾಸೋಹದ ಮೂಲಕ ಶಿಕ್ಷಣವನ್ನು ನೀಡುತ್ತಿವೆ.ಯುಪಿಎಸ್‌ಸಿ ಪರೀಕ್ಷೆ ಪಾಸಾದ ಸೌಭಾಗ್ಯ ಬೀಳಗಿಮಠ ತಂದೆ-ತಾಯಿಗಳ ಸಂಸ್ಕಾರದಿಂದ ಇಂತಹ ಪರೀಕ್ಷೆಯನ್ನು ಎದುರಿಸಿ ಪಾಸಾಗಿರುವದು ಸಂತೋಷಪಡುವ ಸಂಗತಿಯಾಗಿದೆ.ಹರಪನಹಳ್ಳಿ ಲತಾದೇವಿ ಮಲ್ಲಿಕಾರ್ಜುನ ಅವರು ಮಾಡಿನ ಸೇವೆ ಮಾಡುತ್ತಲೇ ಇನ್ನೂ ಉನ್ನತ ಹುದ್ದೆ ಅಲಂಕರಿಸಲಿ ಎಂದು ಬಸವರಾಜ ಹೊರಟ್ಟಿ ಹೇಳಿದರು. 

ಹರಪನಹಳ್ಳಿ ಶಾಸಕಿ ಲತಾದೇವಿ ಮಲ್ಲಿಕಾರ್ಜುನ ಮಾತನಾಡಿ ಮಹಿಳೆಯರು ಏನಾದರೂ ಸಾಧನೆಯನ್ನು ಮಾಡಬಹುದು ಆಗಿದೆ.ಆದರೇ ಕಠಿಣವಾದ ಪರಿಶ್ರಮದ ಮೂಲಕ ಸಾಧನೆಯ ಗುರಿ ತಲುಪಲು ಸಾದ್ಯವಿದೆ.ಮಠಗಳು ಜನರ, ಅನ್ನದಾನ, ಜ್ಞಾನದಾಹದ ತೃಷೆಯನ್ನು ಈಡೇರಿಸುತ್ತಿವೆ ಎಂದರು. 

ಶಶಿ ಸಾಲಿ ಮಾತನಾಡಿ, ತಾಯಿಯ ಪ್ರೀತಿ, ವಿಶ್ವಾಸದಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ನಾಗರೀಕರಾಗಲು ಸಾದ್ಯವಿದೆ. ತಾಯಿಯು ಮಕ್ಕಳಿಗೆ ಶಕ್ತಿಯನ್ನು ತುಂಬುವ ಮೂಲಕ ಸಂಸ್ಕಾರವನ್ನು ನೀಡಿ ಶೈಕ್ಷಣಿಕ ಸಾಧನೆ ಪ್ರೇರಕ ಶಕ್ತಿಯಾಗುತ್ತಾಳೆ ಎಂದರು. 

ನಿರಂಜನ ದೇವರು ಅಲ್ಲಮ ಪ್ರಭುಗಳ ಕುರಿತು, ನಿವೃತ್ತ ಪ್ರಾಚಾರ್ಯ ಎಸ್‌ಬಿಕೆ ಗೌಡರ ವೆಂಕಟಾಪೂರ ಅಜ್ಜನನವರ ಕುರಿತು ಉಪನ್ಯಾಸ ನೀಡಿದರು.ಯುಪಿಎಸ್‌ಸಿ ಪರೀಕ್ಷೆ ಪಾಸಾದ ಸೌಭಾಗ್ಯ ಬೀಳಗಿಮಠ ಮಾತನಾಡಿದರು. ಅನ್ನದಾನೀಶ್ವರ ಮಹಾಶಿವಯೋಗಿಗಳವರ ಪಾರಮೇಶ್ವರಾಗಮ ಸಾರ ಗ್ರಂಥದ ಲೋಕಾರೆ​‍್ಣ ಜರುಗಿತು. ಹಿರಿಯ ಮಹಿಳೆಯರನ್ನು ಗೌರವಿಸಲಾಯಿತು. 

ವೇದಿಕೆಯಲ್ಲಿ ಅನ್ನದಾನೀಶ್ವರ ಮಹಾಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಮಹಾಲಿಂಗ ಮಹಾಸ್ವಾಮಿಗಳು, ಮರುಳರಾದ್ಯ ಶಿವಾಚಾರ್ಯರು, ನಿರಂಜನ ದೇವರು, ಬಸವರಾಜ ಧಾರವಾಡ, ಶಶಿ ಸಾಲಿ, ಆರ್‌.ಬಿ.ಡಂಬಳಮಠ, ಕರಬಸಪ್ಪ ಹಂಚಿನಾಳ, ನಾಗೇಶ ಹುಬ್ಬಳ್ಳಿ, ಬಾಬಣ್ಣ ಶಿವಶೆಟ್ಟಿ, ಸಂಗಣ್ಣ ಲಿಂಬಿಕಾಯಿ, ಎಸ್‌.ಬಿ.ಹಿರೇಮಠ, ಎಸ್‌.ಎಂ.ಹೊಸಮಠ, ಎಸ್‌.ಸಿ.ಚಕ್ಕಡಿಮಠ, ಎಸ್‌.ಎಸ್‌.ಗಡ್ಡದ, ಬಸಯ್ಯ ಗಿಂಡಿಮಠ, ಅಂದಪ್ಪ ಕಡ್ಡಿ ,ಅಕ್ಕನ ಬಳಗದ ಸದಸ್ಯೆಯರು, ಮತ್ತಿತರರು ಉಪಸ್ಥೀತರಿದ್ದರು. ಕಾರ್ಯಕ್ರಮವನ್ನು ಡಾ.ಬಿ.ಜಿ.ಜವಳಿ ಸ್ವಾಗತಿಸಿದರು .ಎಸ್‌.ಎಸ್‌.ಇನಾಮತಿ ನಿರೂಪಿಸಿದರು.