ಮೋಕಾ ಪಿಎಸ್ ಐ ಪತ್ನಿ ನೇಣಿಗೆ ಶರಣು
Moka PSI's wife hangs herself
ಬಳ್ಳಾರಿ:ಆ(15)ರಂದು ತಾಲೂಕಿನ ಮೋಕಾ ಠಾಣೆಯ ಪಿಎಸ್ ಐ ಕಳಿಂಗ ಅವರ ಪತ್ನಿ ಚೈತ್ರ(34) ಇಂದು ಬೆಳಿಗ್ಗೆ 8.30 ಅಲ್ಲಿನ ಕ್ವಾಟ್ರಸ್ ನಲ್ಲಿ ಪ್ಯಾನಿಗೆ ನೇಣು ಬಿಗಿದು ಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಅದೇ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಇವರು ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.ಶವ ಪರೀಕ್ಷೆ ಇಲ್ಲಿನ ಬಿಎಂಸಿ ಆರ್ ಸಿ ಶವಾಗಾರದಲ್ಲಿ ನಡೆಯಿತು. ಎಸ್ಪಿ.ಶೋಭಾರಾಣಿ, ಎಎಸ್ಪಿ ಕೆ.ಪಿ.ರವಿಕುಮಾರ್ ಮೊದಲಾದವರು ಪರೀಶೀಲಿಸಿದರು. ನಂತರ ಚೈತ್ರ ಅವರ ಹುಟ್ಟೂರಾದ ಹೊಸಪೇಟೆ ತಾಲೂಕಿನ ಮಲಪನಗುಡಿಗೆ ತೆಗೆದುಕೊಂಡು ಹೋಗಲಾಯ್ತು.ಮೃತರಿಗೆ ಇಬ್ಬರು ಮಕ್ಕಳಿದ್ದಾರೆ.ಕಳೆದ 2023. ರ ಸೆಪ್ಟೆಂಬರ್ ನಿಂದ ಈ ಠಾಣೆಯಲ್ಲಿ ಕಳಿಂಗ ಕರ್ತವ್ಯದಲ್ಲಿದ್ದರು. ಅವರೊಂದಿಗೆ ಪತ್ನಿಯೂ ಮಕ್ಕಳು ವಾಸವಿದ್ದರು.ಕಳೆದ ಶುಕ್ರವಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ನೆರವೇರಿಸಿ. ಪತಿಯೊಂದಿಗೆ ತಿರುಪತಿಗೆ ಹೋಗಿ ನಿನ್ನೆ ಸಂಜೆ ಅಷ್ಟೇ ಹಿಂತಿರುಗಿ ಬಂದಿದ್ದರಂತೆ.ಇಂದು ಬೆಳಿಗ್ಗೆ ಠಾಣೆಯಲ್ಲಿ ದ್ವಜಾರೋಹಣ ನೆರವೇರಿಸಿ ಉಪಹಾರ ತರಲು ಮಗನ ಜೊತೆ ಕಳಿಂಗ ಅವರು ಹೊರಗೆ ಹೋದಾಗ ಮನೆಯ ಬಾಗಿಲ ಚಿಲಕ ಹಾಕಿಕೊಂಡು ಪ್ಯಾನಿಗೆ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾರೆ ಚೈತ್ರ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 