ದೇಶ, ನಮ್ಮೆಲ್ಲರ ಉಳಿವಿಗಾಗಿ ಮೋದೀಜಿ ಗೆಲ್ಲಲೇಬೇಕು : ಚಕ್ರವರ್ತಿ ಸೂಲಿಬೆಲೆ

ಮಹಾಲಿಂಗಪುರ 20:  ಮೋದೀಜಿ ಅಪರೂಪದ ಅಪ್ಪಟ ವಜ್ರ, ಅವರನ್ನು ಕಳೆದುಕೊಂಡರೆ ಭಾರತಕ್ಕೆ ಭವಿಷ್ಯವಿಲ್ಲ, ದೇಶ ಮತ್ತು ನಮ್ಮ ಉಳಿವಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. 

ನಮೋ ಬ್ರಿಗೇಡ್ ಮಹಾಲಿಂಗಪುರ ಘಟಕದ ವತಿಯಿಂದ ಸ್ಥಳೀಯ ಕೆಎಲ್‌ಇ ಕಾಲೇಜು ಎದುರು ಶುಕ್ರವಾರ ಸಂಜೆ ಆಯೋಜಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯೀಕರಣದಂತಹ ದಿಟ್ಟ ನಿರ್ಧಾರಗಳಿಂದ ಇಂದು ಭಾರತ ಜಗತ್ತಿನ 5 ನೇ ಆರ್ಥಿಕ ರಾಷ್ಟೃವಾಗಿ ಬೆಳೆದು ನಿಂತಿದೆ,  

ತ್ರಿವಳಿ ತಲಾಖ್ ರದ್ಧತಿಯಿಂದ ಮುಸ್ಲಿಂ ಮಹಿಳೆಯರ ಶಕ್ತಿ ಹೆಚ್ಚಿದೆ, 370 ರದ್ಧತಿಯೂ ಮುಸ್ಲಿಮರ ಅನುಕೂಲಕ್ಕಾಗಿವೆ. ತಾವು ದಲಿತ ಪರ ಎಂದು ಹೇಳಿಕೊಳ್ಳುವ ಸಿದ್ಧರಾಮಯ್ಯ ಮುಸ್ಲಿಮರ ಓಲೈಕೆಗಾಗಿ ದಲಿತರ ಆಭಿವೃದ್ಧಿಗಾಗಿ ಮೀಸಲಿದ್ದ 11 ಸಾವಿರ ಕೋಟಿ ಹಣವನ್ನು ಮುಸ್ಲಿಮರಿಗೆ ನೀಡಿ ದಲಿತರಿಗೆ ದ್ರೋಹ ಬಗೆದಿದ್ದಾರೆ, ಆದರೆ ಮೋದಿಜಿ ಅಂಬೇಡ್ಕರ್ ಜನ್ಮಸ್ಥಳ, ವಿದ್ಯಾಭ್ಯಾಸ ಸ್ಥಳ, ಸಮಾಧಿಗಳನ್ನು ಪಂಛತೀರ್ಥಗಳೆಂದು ಅಭಿವೃದ್ಧಿ ಮಾಡಿದ್ದಾರೆ ಹಾಗೂ ದಲಿತ ರಾಷ್ಟ್ರಪತಿಗಳನ್ನು ಮಾಡಿದ್ದಾರೆ ಗೌರವ ನೀಡಿದ್ದಾರೆ. 

ಕಾಂಗ್ರೆಸ್‌ನವರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ, ಕಳೆದ 10 ವರ್ಷಗಳ ಮೋದೀಜಿ ಆಡಳಿತಾವಧಿಯಲ್ಲಿ ಇಡೀ ದೇಶದಲ್ಲೇ ಬಾಂಬ್ ಸ್ಪೋಟದ ಸದ್ದಡಗಿತ್ತು ಆದರೆ ಕರ್ನಾಟಕದಲ್ಲಿ ಸಿದ್ಧರಾಮಯ್ಯನವರ ಸರ್ಕಾರ ಬಂದ ತಕ್ಷಣವೇ ಬೆಂಗಳೂರಿನಲ್ಲಿ ಬಾಂಬ್ ಸ್ಪೋಟವಾಯಿತು, ಬೆಳಗಾವಿ ಹಾಗೂ ವಿಧಾನಸೌಧದಲ್ಲೂ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೇಳಿಬಂದವು, ಹಿಂದೂ ಮಹಿಳೆಯರ ಹತ್ಯೆ, ಯುವಕರ ಮೇಲೆ ಹಲ್ಲೆ ನಡೆಯಿತ್ತಲೇ ಇವೆ ಇದು ಕಾಂಗ್ರೆಸ್‌ನ ಓಟ್ ಬ್ಯಾಂಕ್ ಗಿಫ್ಟ್‌ . 

ಕೇವಲ 10 ವರ್ಷದಲ್ಲಿ ಹಿಂದೂಗಳ 500 ವರ್ಷಗಳ ಕನಸು ರಾಮಮಂದಿರ ನಿರ್ಮಾಣವಾಗಿದೆ,  ಕೇದಾರನಾಥ ಸ್ವರ್ಗವಾಗಿದೆ, ಮುಸ್ಲಿಂ ರಾಷ್ಟ್ರ ಅರಬ್‌ನ ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣವಾಗಿದೆ, ಕಾಶಿ ವಿಶ್ವನಾಥ ದೇಗುಲದ ಕಾಯಕಲ್ಪಕ್ಕೆ ನಿರ್ಧಾರವಾಗಿದೆ ದೇಶ ಬದಲಾಗಿದೆ, ಜಗತ್ತಿನಲ್ಲಿ ಭಾರತದ ಗೌರವ ಉತ್ತುಂಗಕ್ಕೇರಿದೆ, ನಮ್ಮ ಪುಣ್ಯದ ಫಲ, ತಪಸ್ಸಿನ ಫಲ ಮೋದೀಜಿ. ಭಾರತ ಜಗತ್ತಿನ ನಂಬರ್ ಒನ್ ರಾಷ್ಟ್ರವಾಗಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂದರು. 

ಹುಕ್ಕೇರಿ ಕ್ಷೇತ್ರ ಕ್ಯಾರಗುಡ್ಡ ಮಠದ ಅಭಿನವ ಮಂಜುನಾಥ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಭಾರತವೀಗ ಬದಲಾಗಿದೆ, ಈಗ ನಮ್ಮ ಸಮಯ ಬಂದಿದೆ.ಸಮರ್ಥ ನಾಯಕ ಮೋದಿಯವರಿಂದ ಭಾರರತ ವಿಶ್ವಗುರುವಾಗಿದೆ. ಇತಿಹಾಸ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದೀಜಿ ಗೆಲ್ಲಬೇಕೆಂದರು. 

ಕಾರ್ಯಕ್ರಮದ ಆರಂಭದಲ್ಲಿ ಫಯಾಜ್‌ನಿಂದ ಹತಳಾದ ನೇಹಾ ಹಿರೇಮಠ ಅವರಿಗೆ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಂತರ ಭಾರತಾಂಬೆಯ ಭಾವಚಿತ್ರಕ್ಕೆ ಪುಷ​‍್ಾರೆ್ಪನ ಮಾಡಿ ಉದ್ಘಾಟಿಸಲಾಯಿತು. 

ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಸಿದ್ದು ಸವದಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಜಿ.ಎಸ್‌.ಗೊಂಬಿ, ಶಿವಾನಂದ ಅಂಗಡಿ, ರವಿ ಜವಳಗಿ, ರಾಕೇಶ ಕೆಸರಗೊಪ್ಪ, ಆನಂದ ಶಿರಗುಪ್ಪಿ, ಮಹಾಲಿಂಗ ದೇಸಾಯಿ, ಮಂಜು ಗೊಂಬಿ, ರವಿ ಗಿರಿಸಾಗರ, ವಿನೋದ ಹುಣಶ್ಯಾಳ, ಸಚಿನ್ ಕಲ್ಮಡಿ, ಸಂಗಮೇಶ ಅಂಬಲ್ಯಾಳ, ತಮ್ಮಣ್ಣಿ ಆದೆಪ್ಪನವರ, ಶಶಿ ಬದ್ನಿಕಾಯಿ, ಸಚಿನ್ ಖೋತ್, ಸಿದ್ದುಗೌಡ ಪಾಟೀಲ, ಶಿವಾನಂದ ತಿಪ್ಪಾ, ಪರ​‍್ಪ ಹುದ್ದಾರ ಇತರರಿದ್ದರು. 

ಡಾ.ಗೀತಾ ಕೋಲ್ಕರ್ ಮತ್ತು ಸಂಗಡಿಗರ ವೈಯಕ್ತಿಕ ಗೀತೆಯೊಂದಿಗೆ ಹಿಂದೂ ಮುಖಂಡ ನಂದು ಗಾಯಕವಾಡ ಸ್ವಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು, ರಾಜೇಂದ್ರ ನಾವಿ ವಂದಿಸಿದರು.