ಕೆಐಎಡಿಬಿ ಕಾಯ್ದೆ ದುರುಪಯೋಗ : ಬಲಜೋರಿಯಿಂದ ಭೂಮಿ ಕಿತ್ತಕೊಂಡ ಸರ್ಕಾರ
ಲೋಕದರ್ಶನ ವರದಿ
ವಿಜಯಪರ 16 : ಇತ್ತೀಚಿನ ದಿನಗಳಲ್ಲಿ ಸಮಾಜಿಕ ಕಳಕಳಿ ಇಲ್ಲದ ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ರಾಜಕೀಯ ಪ್ರಭಾವದಿಂದ ಕೈಗಾರಿಕೆ ಸ್ಥಾಪಿಸಲು ಬಲವಂತದಿಂದ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿದ್ದು, ಕೆ.ಐ.ಎ.ಡಿ.ಬಿ. ಕಾಯ್ದೆ ಕಲಂ 66ರ ಅಡಿಯಲ್ಲಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹಾಗೂ ನೋದ ರೈತರಾದ ರವೀಂದ್ರಗೌಡ ಪಾಟೀಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರದಂದು ವಿಜಯಪುರ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ, ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೈಗಾರಿಕಾ ಅಭಿವೃದ್ಧಿಗಾಗಿ ರೂಪಿಸಿದ ಕೆ.ಐ.ಎ.ಡಿ.ಬಿ ಕಾಯ್ದೆಯನ್ನು ಸಾರ್ವಜನಿಕ ಹಿತಕ್ಕಾಗಿ ಬಳಸಬೇಕು ಆದರೆ ಇಲ್ಲಿ ಜನಪ್ರತಿನಿದಿಗಳು ತಮ್ಮ ಸ್ವಾರ್ಥಕ್ಕೋಸ್ಕರ ವಯಕ್ತಿಕವಾಗಿ ರಾಜಕೀಯ ಪ್ರಭಾವ ಬೆಳೆಸಿ ಅಧಿಕಾರಿಗಳನ್ನು ಮುಂದಿಟ್ಟಕೊಂಡು ರೈತರ ಫಲವತ್ತಾದ ಜಮೀನುಗಳನ್ನು ಕಸಿದುಕೊಳ್ಳುತ್ತಿದ್ದಾರೆ.
ಇರುವ ಅಲ್ಪಸ್ವಲ್ಪ ಭೂಮಿಯನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ವಶಪಡಿಸಿಕೊಂಡರೆ ರೈತ ಬದುಕುವುದಾದರು ಹೇಗೆ? ಎಂದು ಪ್ರಶ್ನಿಸಿದ್ದಾರೆ? ರೈತನೇ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರಗಳು ರೈತನ ಬೆನ್ನೆಲುಬು ಮುರಿಯಲು ಹೊರಟ್ಟಿದ್ದಾರೆ. ಯಾವುದೇ ಕಾರಣಕ್ಕೂ ರೈತನ ಒಪ್ಪಿಗೆ ಇಲ್ಲದೆ ಜನಪ್ರತಿನಿಧಿಗಳ ವೈಯಕ್ತಿಕ ಹಿತಾಸಕ್ತಿಗೆ ಸರ್ಕಾರ ರೈತರನ್ನು ಬಲಿತಗೆದುಕೊಳ್ಳಬಾರದು.